ಬ್ರೇಕಿಂಗ್ ನ್ಯೂಸ್
09-09-25 09:38 pm HK News Desk ದೇಶ - ವಿದೇಶ
ನವದೆಹಲಿ, ಸೆ. 9 : ಮಹಾರಾಷ್ಟ್ರ ಮಾಜಿ ರಾಜ್ಯಪಾಲ, ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಭಾರತದ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಜಗದೀಪ್ ಧನಕರ್ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನವನ್ನು 68 ವರ್ಷದ ರಾಧಾಕೃಷ್ಣನ್ ತುಂಬಲಿದ್ದಾರೆ.
ಮಂಗಳವಾರ ನಡೆದ ಚುನಾವಣೆಯಲ್ಲಿ ರಾಧಾಕೃಷ್ಣನ್ ಮೊದಲ ಪ್ರಾಶಸ್ತ್ಯದ 452 ಮತಗಳನ್ನು ಪಡೆದರು. ಎದುರಾಳಿ ಇಂಡಿಯಾ ಕೂಟದ ಅಭ್ಯರ್ಥಿ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ 300 ಮತಗಳನ್ನಷ್ಟೇ ಪಡೆದರು. ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಒಟ್ಟು ಸೇರಿ 754 ಮತಗಳು ಚಲಾವಣೆಯಾಗಿದ್ದು 15 ಮತಗಳು ಅಸಿಂಧುವಾಯಿತು. ಮೊದಲ ಪ್ರಾಶಸ್ತ್ಯದ ಮತಗಳ ಹಿನ್ನೆಲೆಯಲ್ಲಿ ರಾಧಾಕೃಷ್ಣನ್ ವಿಜೇತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಿ.ವಿ ಮೋದಿ ಘೋಷಿಸಿದರು.

150 ಮತಗಳ ಗೆಲುವು
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ವಿಜೇತರಾದವರ ಅತ್ಯಂತ ಕಡಿಮೆ ಅಂತರದ ಗೆಲುವಾಗಿದೆ. ಈ ಹಿಂದೆ ಜಗದೀಪ್ ಧನಕರ್ ಅವರು ಮಾರ್ಗರೆಟ್ ಆಳ್ವ ಅವರನ್ನು 182 ಮತಗಳಿಂದ ಸೋಲಿಸಿದ್ದು ಅತೀ ಕಡಿಮೆ ಅಂತರದ ಗೆಲುವಾಗಿತ್ತು.
ಕಾಂಗ್ರೆಸ್ ಕ್ರಾಸ್ ವೋಟಿಂಗ್
ಮತದಾನ ಪ್ರಕ್ರಿಯೆಯಲ್ಲಿ ಅಡ್ಡ ಮತದಾನ ನಡೆದಿರುವುದು ಸಾಬೀತಾಗಿದೆ. ಕನಿಷ್ಠ 15 ಲೋಕಸಭಾ ಸದಸ್ಯರು ಇಂಡಿಯಾ ಬ್ಲಾಕ್ ಗೆ ಕೈಕೊಟ್ಟು ಎನ್.ಡಿ.ಎ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ತಮ್ಮ ಬಳಿ 315 ಎಂಪಿಗಳಿದ್ದಾರೆ ಎಂದು ಹೇಳಿಕೊಂಡಿತ್ತು. ಆದರೆ ಅದಕ್ಕೆ 15 ಕಡಿಮೆ ಮತ ಕಡಿಮೆ ಬಿದ್ದಿದೆ.
ಎನ್.ಡಿ.ಎ ಬಳಿ ರಾಜ್ಯಸಭೆ ಸೇರಿ 427 ಸಂಸದರಿದ್ದರು. ವೈಎಸ್ಸಾರ್ ಕಾಂಗ್ರೆಸ್ ಪಕ್ಷದ 11 ಸದಸ್ಯರು ರಾಧಾಕೃಷ್ಣನ್ ಅವರನ್ನು ಬೆಂಬಲಿಸಿ ಮತ ಚಲಾಯಿಸಿದ್ದರು. ಆದರೂ ರಾಧಾಕೃಷ್ಣನ್ ಗೆ 14 ಮತಗಳು ಹೆಚ್ಚು ಬಿದ್ದಿದ್ದು ಕಾಂಗ್ರೆಸ್ ಒಕ್ಕೂಟದಿಂದ ಕ್ರಾಸ್ ವೋಟಿಂಗ್ ಆಗಿರೋದು ಸ್ಪಷ್ಟವಾಗಿದೆ.
Maharashtra Governor CP Radhakrishnan, the NDA candidate for the post of the Vice President, will succeed Jagdeep Dhankhar in the post. The 68-year-old sailed through the election today, scooping up 452 first preference votes, leaving Opposition candidate and retired Supreme Court judge B Sudershan Reddy trailing with 300 first preference votes.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am