ಬ್ರೇಕಿಂಗ್ ನ್ಯೂಸ್
04-09-25 08:47 pm HK News Desk ದೇಶ - ವಿದೇಶ
ಮುಂಬೈ, ಸೆ.4: ಮುಂಬೈ ಮತ್ತು ಮಹಾನಗರದ ವಿವಿಧ ಪ್ರದೇಶಗಳಲ್ಲಿ ಗಣೇಶ ವಿಸರ್ಜನೆ ವಿಜೃಂಭಣೆಯಿಂದ ನಡೆಯಲಿರುವ ಕಾರಣ ಮಹಾರಾಷ್ಟ್ರ ಸರ್ಕಾರವು ಮುಂಬೈನಲ್ಲಿ ಈದ್ ಮಿಲಾದ್ ರಜೆಯನ್ನು ಸೆ5ರ ಬದಲು ಸೆ.8ಕ್ಕೆ ಬದಲಾವಣೆ ಮಾಡಿದೆ. ಅದೇ ದಿನ ಈದ್ ಮೆರವಣಿಗೆ ಇನ್ನಿತರ ಹಬ್ಬದ ಕಾರ್ಯಕ್ರಮಗಳ ನಡೆಯಲಿವೆ.
ಮುಸ್ಲಿಂ ಸಮುದಾಯವು ಅದ್ದೂರಿಯಾಗಿ ಈದ್ ಮಿಲಾದ್ ಆಚರಣೆ ಮಾಡುವುದರಿಂದ ಒಂದೇ ದಿನ ಎರಡು ಸಮುದಾಯದ ಹಬ್ಬಗಳು ನಡೆದು ಸಂಭಾವ್ಯ ಅಪಾಯಗಳು ನಡೆಯುವುದನ್ನು ತಪ್ಪಿಸಲು ಮಹಾರಾಷ್ಟ್ರ ಸರ್ಕಾರವು ಮುಂಬೈನಲ್ಲಿ ಈದ್-ಎ-ಮಿಲಾದ್ ಸಾರ್ವಜನಿಕ ರಜೆಯನ್ನು ಸೆಪ್ಟೆಂಬರ್ 8ಕ್ಕೆ ಬದಲಾಯಿಸಿದೆ. ಅನಂತ ಚತುರ್ದಶಿ (ಗಣೇಶ ವಿಗ್ರಹಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸುವ ಹಿಂದೂ ಹಬ್ಬ) ಸೆಪ್ಟೆಂಬರ್ 6ರಂದು ಬರುವುದರಿಂದ ಈ ಬದಲಾವಣೆ ಮಾಡಲಾಗಿದೆ.

ಸಂಭಾವ್ಯ ಜನಸಂದಣಿ ತಪ್ಪಿಸಲು ಮತ್ತು ಶಾಂತಿಯಿಂದ ಹಬ್ಬದ ಆಚರಣೆ ನಡೆಯಲು ಅನುಕೂಲವಾಗುವಂತೆ ಮುಸ್ಲಿಂ ಸಮುದಾಯವು ಈದ್ ಹಬ್ಬದ ಆಚರಣೆಗೆ ನಿರ್ಧರಿಸಿದ್ದು, ಅದಕ್ಕಾಗಿ ಈದ್ ಮಿಲಾದ್ ಮೆರವಣಿಗೆಯನ್ನು ಸೆಪ್ಟೆಂಬರ್ 8ರಂದು ನಡೆಸಲು ತೀರ್ಮಾನಿಸಿದೆ. ಆದ್ದರಿಂದ ಸರ್ಕಾರವು ಸೆ.5ರ ರಜೆಯನ್ನು ಆ ದಿನಾಂಕಕ್ಕೆ ಬದಲಾಯಿಸಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 5ರಂದೇ ರಜೆ ಇರಲಿದೆ. ಮುಂಬೈ ನಗರ ಮತ್ತು ಉಪ ನಗರಗಳಲ್ಲಿ ಮಾತ್ರ ಸೆಪ್ಟೆಂಬರ್ 8ಕ್ಕೆ ಬದಲಾಯಿಸಲಾಗಿದೆ ಎಂದು ಸರ್ಕಾರದ ಸುತ್ತೋಲೆ ತಿಳಿಸಿದೆ. ಮುಂಬೈ ನಗರ ಮತ್ತು ಉಪನಗರಗಳಲ್ಲಿನ ಸರ್ಕಾರಿ ಕಚೇರಿಗಳು ಸೆಪ್ಟೆಂಬರ್ 5ರಂದು ಎಂದಿನಂತೆ ತೆರೆದಿರುತ್ತವೆ ಎಂದೂ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
In view of the grand Ganesh Visarjan celebrations across Mumbai and surrounding areas, the Maharashtra government has officially rescheduled the Eid Milad (Eid-e-Milad) public holiday in Mumbai from September 5 to September 8.
06-10-26 09:32 am
HK News Staffer
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
06-10-26 12:58 pm
HK News Staffer
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
06-10-26 01:23 pm
HK News Staffer
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am