ಬ್ರೇಕಿಂಗ್ ನ್ಯೂಸ್
25-04-25 01:16 pm HK News Desk ದೇಶ - ವಿದೇಶ
ಶ್ರೀನಗರ, ಎ.25 : ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಪಾಕಿಸ್ತಾನದ ಒಳಹೊಕ್ಕ ಭಾರತದ ಬಿಎಸ್ಎಫ್ ಯೋಧನನ್ನು ವಶಕ್ಕೆ ಪಡೆದು ಇರಿಸಿಕೊಂಡಿದ್ದು ಮರಳಿ ಹಸ್ತಾಂತರ ಮಾಡಲು ಪಾಕಿಸ್ತಾನ ನಿರಾಕರಿಸಿದೆ.
ಗುರುವಾರ ಸಂಜೆ ಧ್ವಜ ಸಭೆ ಏರ್ಪಡಿಸಿದ್ದರೂ ರೇಂಜರ್ಗಳು ಬಾರದ ಕಾರಣ ನಡೆದಿರಲಿಲ್ಲ. ಇದೇ ವೇಳೆ, ವಶಕ್ಕೆ ಪಡೆದ ಯೋಧನ ಫೋಟೊವನ್ನು ಪಾಕಿಸ್ತಾನದ ಮಿಲಿಟರಿ ಬಿಡುಗಡೆ ಮಾಡಿದೆ.
ಪಂಜಾಬ್ನ ಫಿರೋಜ್ಪುರ ಜಿಲ್ಲೆಯಲ್ಲಿ ಗಡಿಭಾಗದಲ್ಲಿ ಆಕಸ್ಮಿಕವಾಗಿ ಪಾಕ್ ಪ್ರದೇಶದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರ ಜೊತೆಗೆ ಯೋಧ ತೆರಳಿದ್ದ. ಗಡಿಯನ್ನು ದಾಟಿದ್ದ 182ನೇ ಬೆಟಾಲಿಯನ್ ಕಾನ್ಸ್ಟೇಬಲ್ ಪಿಕೆ ಸಾಹು ಅವರನ್ನು ಪಾಕಿಸ್ತಾನ ಯೋಧರು ವಶಕ್ಕೆ ಪಡೆದಿದ್ದರು. ಪಿಕೆ ಸಿಂಗ್ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ನಿವಾಸಿಯಾಗಿದ್ದು ಇತ್ತೀಚೆಗಷ್ಟೇ ಪಾಕ್ ಗಡಿಭಾಗಕ್ಕೆ ನಿಯೋಜಿತನಾಗಿದ್ದ. ಬಂದನಕ್ಕೆ ಒಳಗಾದ ಸಿಂಗ್ ಅವರನ್ನು ಬಿಡುಗಡೆ ಮಾಡಲು ಬಿಎಸ್ಎಫ್ ಪ್ರಯತ್ನ ನಡೆಸುತ್ತಿದೆ.
ಗಡಿಭಾಗದಲ್ಲಿ ತಂತಿ ಬೇಲಿ ಇದ್ದರೂ ಈ ಭಾಗದಲ್ಲಿ ಕೃಷಿ ಮಾಡುವುದಕ್ಕಾಗಿ ರೈತರನ್ನು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಮಾತ್ರ ಬಿಡಲಾಗುತ್ತದೆ. ಕೃಷಿಕರು ಕೆಲಸ ಮಾಡುವಾಗ ನೋಡಿಕೊಳ್ಳಲು ಕಿಸಾನ್ ಗಾರ್ಡ್ ಎಂದು ಬಿಎಸ್ಎಫ್ ಯೋಧರನ್ನು ನಿಯೋಜಿಸಲಾಗುತ್ತದೆ. ಅದೇ ಕೆಲಸಕ್ಕಿದ್ದ ಪಿಕೆ ಸಿಂಗ್ ಸಂಜೆಯ ವೇಳೆಗೆ ತಿಳಿಯದೆ ಪಾಕಿಸ್ತಾನದ ಕಡೆಗೆ ನಡೆದುಹೋಗಿ ಮಿಲಿಟರಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ, ಆತನ ಕೈಯಲ್ಲಿ ಎಕೆ 47 ರೈಫಲ್ ಮತ್ತು ನೀರಿನ ಬಾಟಲ್ ಇತ್ತು.
ಸಿಂಗ್ ಅವರನ್ನು ಗಡಿ ಹೊರ ಠಾಣೆಯಿಂದ ದೂರದಲ್ಲಿರುವ ಪಾಕಿಸ್ತಾನಿ ಪ್ರದೇಶಕ್ಕೆ ಕರೆದುಕೊಂಡು ಹೋಗಲಾಗಿದೆ. ಫಿರೋಜ್ ಪುರ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಬಿಎಸ್ ಎಫ್ ನಿಯೋಜನೆ ಮಾಡಲಾಗಿದೆ. ಭಾರತ- ಪಾಕ್ ಮಧ್ಯೆ ಬಿಕ್ಕಟ್ಟು ತಲೆದೋರಿರುವುದರಿಂದ ಭಾರತದ ಯೋಧ ಪಾಕ್ ಸೇನಾಪಡೆಯ ಕೈಯಲ್ಲಿ ಸಿಕ್ಕಿಬಿದ್ದಿರುವುದರಿಂದ ಉಭಯ ಸೇನಾ ಪಡೆಗಳ ನಡುವೆ ಮಾತುಕತೆ ನಡೆಯುತ್ತಿದ್ದರೂ ಫಲಪ್ರದವಾಗಿಲ್ಲ.
ರಜೆ ಪಡೆದು ಊರಿಗೆ ಬಂದಿದ್ದ ಪಿಕೆ ಸಿಂಗ್ ಮಾರ್ಚ್ 31 ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಕಳೆದ 17 ವರ್ಷಗಳ ಕಾಲ ಬಿಎಸ್ಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
A Border Security Force (BSF) constable, Purnab Kumar Shaw, was detained by Pakistan Rangers on Wednesday after he accidentally crossed the zero line in the Ferozepur sector, officials said on Thursday.
06-10-26 06:17 pm
HK News Staffer
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
06-10-26 02:46 pm
HK News Staffer
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
06-10-26 05:36 pm
HK News Staffer
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm