ಬ್ರೇಕಿಂಗ್ ನ್ಯೂಸ್
13-04-25 06:15 pm HK News Desk ದೇಶ - ವಿದೇಶ
ನವದೆಹಲಿ, ಎ.13 : 2008ರ ಮುಂಬೈ ದಾಳಿಯ ರೂವಾರಿ ತಹಾವ್ವುರ್ ರಾಣಾನನ್ನು ದೆಹಲಿಯ ಎನ್ಐಎ ಪ್ರಧಾನ ಕಚೇರಿಯಲ್ಲಿ ವಿಶೇಷ ಭದ್ರತೆಯಲ್ಲಿರಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಯಾರಿಗೂ ನೀಡದಷ್ಟು ಭದ್ರತೆ ನೀಡಿದ್ದರೂ, ಯಾವುದೇ ಸ್ಪೆಷಲ್ ಟ್ರೀಟ್ಮೆಂಟ್ ನೀಡಲಾಗಿಲ್ಲ ಎಂದು ಎನ್ಐಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
18 ದಿನಗಳ ಕಸ್ಟಡಿಗೆ ಪಡೆದಿರುವ ಅಧಿಕಾರಿಗಳು ಮುಂಬೈ ದಾಳಿ ಮತ್ತು ಪಾಕಿಸ್ತಾನದ ಐಎಸ್ಐ ಏಜನ್ಸಿ ಜೊತೆಗಿನ ಸಂಪರ್ಕದ ಬಗ್ಗೆ ಮಾಹಿತಿ ಕೆದಕುತ್ತಿದ್ದಾರೆ. ವಿಶೇಷ ಸೆಲ್ ನಲ್ಲಿರುವ ವೇಳೆ, ಆತನ ಮನವಿಯಂತೆ ಕುರಾನ್ ಪ್ರತಿಯನ್ನು ಒದಗಿಸಲಾಗಿದೆ. ಜೊತೆಗೆ, ಸೆಲ್ ಒಳಗಡೆಯೇ ದಿನದಲ್ಲಿ ಐದು ಬಾರಿ ನಮಾಜ್ ಮಾಡಲು ಅವಕಾಶ ನೀಡಲಾಗಿದೆ. ರಾಣಾ ಈಗ ಪೂರ್ತಿಯಾಗಿ ಧಾರ್ಮಿಕ ವ್ಯಕ್ತಿಯಾಗಿ ಬದಲಾದ ರೀತಿ ತೋರುತ್ತಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಲ್ಲದೆ, ಪೆನ್ ಮತ್ತು ಖಾಲಿ ಪೇಪರನ್ನು ಕೇಳಿ ಪಡೆದುಕೊಂಡಿದ್ದಾನೆ. ಪೆನ್ ಇರಿಸಿಕೊಂಡಿರುವುದರಿಂದ ಆತನ ಬಗ್ಗೆ ನಿಗಾ ಇರಿಸಲಾಗಿದೆ. ಪೆನ್ನಿನಲ್ಲಿ ತನಗೆ ತಾನೇ ತಿವಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಬಹುದೇ ಎಂಬ ಬಗ್ಗೆ ನಿಗಾ ಇಡಲಾಗಿದೆ. ಪ್ರತಿ 48 ಗಂಟೆಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇದು ಬಿಟ್ಟರೆ ಬೇರಾವುದೇ ವಿಶೇಷ ಬೇಡಿಕೆಯನ್ನು ಆತ ಇಟ್ಟಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ, ದೆಹಲಿ ಲೀಗಲ್ ಸರ್ವಿಸ್ ಅಥಾರಿಟಿಯಿಂದ ವಕೀಲರನ್ನು ಒದಗಿಸಲಾಗಿದ್ದು, ಎರಡು ದಿನಕ್ಕೊಮ್ಮೆ ಆತನನ್ನು ಭೇಟಿಯಾಗಲು ಅವಕಾಶ ಇದೆ. ಬೇರೆಲ್ಲ ವಿಚಾರದಲ್ಲಿ ಇತರೇ ಆರೋಪಿಗಳಿಗೆ ಅನ್ವಯವಾಗುವ ಮಾರ್ಗಸೂಚಿಯನ್ನೇ ಪಾಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಎಪ್ರಿಲ್ 10ರಂದು ಅಮೆರಿಕದಿಂದ ಗಡೀಪಾರು ಮಾಡಿ ರಾಣಾನನ್ನು ದೆಹಲಿಗೆ ಕರೆತರಲಾಗಿದ್ದು, ಅದೇ ದಿನ ದೆಹಲಿ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಅಲ್ಲಿಂದ 18 ದಿನಗಳ ಕಸ್ಟಡಿಯನ್ನು ಪಡೆದು ಮರುದಿನ ಬೆಳಗ್ಗೆ ದೆಹಲಿಯ ಎನ್ಐಎ ಪ್ರಧಾನ ಕಚೇರಿಗೆ ಕರೆತರಲಾಗಿತ್ತು.
2008ರ ಮುಂಬೈ ದಾಳಿಯಲ್ಲಿ ವಿದೇಶಿ ಪ್ರಜೆಗಳು ಸೇರಿ 166 ಮಂದಿ ಸಾವಿಗೀಡಾಗಿದ್ದರು. 16 ವರ್ಷಗಳ ಬಳಿಕ ಅಮೆರಿಕದಲ್ಲಿ ಅಡಗಿದ್ದ ದಾಳಿಯ ರೂವಾರಿ ಎನ್ನಲಾದ ತಹಾವ್ವುರ್ ರಾಣಾನನ್ನು ಕರೆತರಲಾಗಿದ್ದು, ಭಾರತ ರಾಜತಾಂತ್ರಿಕ ಗೆಲವು ಪಡೆದಂತಾಗಿತ್ತು. ಪಿಟಿಐ ಮಾಹಿತಿ ಪ್ರಕಾರ, ರಾಣಾ ಮತ್ತು ಡೇವಿಡ್ ಕೋಲ್ಮನ್ ಅಲಿಯಾಸ್ ದಾವೂದ್ ಗಿಲಾನಿ ಸೇರಿಕೊಂಡು ದಾಳಿ ಸಂಚನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಇವರಿಬ್ಬರ ನಡುವಿನ ಸಂಪರ್ಕ ಮತ್ತು ಅವರಿಗೆ ಭಾರತದಲ್ಲಿರುವ ಸಂಪರ್ಕದ ಬಗ್ಗೆ ಪತ್ತೆ ಮಾಡಲಾಗುತ್ತಿದೆ. ದಾವೂದ್ ಗಿಲಾನಿ ಪಾಕಿಸ್ತಾನಿ ಪ್ರಜೆಯಾಗಿದ್ದರೂ ಅಮೆರಿಕದ ನಾಗರಿಕತ್ವ ಪಡೆದಿದ್ದು ಸದ್ಯ ಅಲ್ಲಿನ ಜೈಲಿನಲ್ಲಿ ಬಂಧಿಯಾಗಿದ್ದಾನೆ.
ತಹಾವ್ವುರ್ ರಾಣಾ ಪಾಕಿಸ್ತಾನಿಯಾಗಿದ್ದರೂ ಕೆನಡಾ ಪ್ರಜೆಯಾಗಿದ್ದುಕೊಂಡು ಅಲ್ಲಿ ಉದ್ಯಮವನ್ನೂ ನಡೆಸುತ್ತಿದ್ದ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆಗಿದ್ದುಕೊಂಡು ಲಷ್ಕರ್ ತೈಬಾ ಉಗ್ರರ ಸೂಚನೆಯಂತೆ ಮುಂಬೈ ದಾಳಿಯ ಸಂಚು ಹೆಣೆದಿದ್ದ ಎನ್ನಲಾಗಿದೆ. ರಾಣಾ ವಿಚಾರಣೆ ಬಳಿಕ ಮುಂಬೈ ದಾಳಿಗೂ ಮುನ್ನ ಆತ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಸಂಚರಿಸಿ ಯಾರನ್ನೆಲ್ಲ ಭೇಟಿಯಾಗಿದ್ದಾನೆ ಮತ್ತು ಎಲ್ಲಿದ್ದುಕೊಂಡು ಸಂಚು ಹೆಣೆಯಲಾಗಿತ್ತು ಎನ್ನುವ ಬಗ್ಗೆ ಮಾಹಿತಿ ಕಲೆಹಾಕಬಹುದು ಎಂಬ ವಿಶ್ವಾಸದಲ್ಲಿ ಅಧಿಕಾರಿಗಳಿದ್ದಾರೆ.
Tahawwur Hussain Rana, a 26/11 Mumbai attacks conspirator, was questioned by the National Investigation Agency (NIA) for the second consecutive day to probe a larger conspiracy of the series of coordinated strikes in 2008.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 03:51 pm
Mangaluru Correspondent
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
Forensic Expert Dr Mahabala Shetty, Dharmasth...
01-08-25 10:02 pm
02-08-25 04:43 pm
Mangaluru Correspondent
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm