ಬ್ರೇಕಿಂಗ್ ನ್ಯೂಸ್
07-04-25 10:53 pm HK News Desk ದೇಶ - ವಿದೇಶ
ನವದೆಹಲಿ, ಎ.7 : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತೀಕಾರದ ಸುಂಕ ನೀತಿಯಿಂದಾಗಿ ಇಡೀ ಜಗತ್ತಿನ ಷೇರು ಪೇಟೆ ಅಲುಗಾಡಿದೆ. ಜಗತ್ತಿನಾದ್ಯಂತ ಅಮೆರಿಕ ಸೇರಿದಂತೆ ನಾನಾ ಕಡೆಯ ಷೇರುಪೇಟೆಗಳು ಅಕ್ಷರಶಃ ನೆಲಕಚ್ಚಿವೆ. ಸಾವಿರಾರು ಕಂಪನಿಗಳು ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಿದ್ದು ವಿಶ್ವ ರಾಷ್ಟ್ರಗಳು ಟ್ರಂಪ್ ನಡೆಯ ವಿರುದ್ಧ ಕೆಂಡ ಕಾರಿದ್ದಾರೆ. ಭಾರತದಲ್ಲಂತೂ ಕೇವಲ ಹತ್ತೇ ಹತ್ತು ಸೆಕೆಂಡ್ ಗಳಲ್ಲಿ ಸುಮಾರು 20 ಲಕ್ಷ ಕೋಟಿ ರೂ.ಗಳಷ್ಟು ನಷ್ಟವಾಗಿದ್ದು ಹೂಡಿಕೆದಾರರು ಭಾರೀ ನಷ್ಟ ಅನುಭವಿಸಿದ್ದಾರೆ.
ಅಮೆರಿಕವು ಭಾರತದ ಸಾಮಗ್ರಿಗಳ ಮೇಲೆ ಶೇ. 26ರಷ್ಟು ಪ್ರತೀಕಾರದ ತೆರಿಗೆ ಹಾಕಿದೆ. ಅದರ ಜೊತೆಗೆ, ಶೇ. 20ರಷ್ಟು ಮೂಲ ತೆರಿಗೆಯನ್ನೂ ಮುಂದುವರಿಸಲಾಗಿದೆ. ಅಲ್ಲಿಗೆ, ಭಾರತದಿಂದ ಅಮೆರಿಕಕ್ಕೆ ಹೋಗುವಂಥ ಎಲ್ಲ ಸಾಮಗ್ರಿಗಳ ಮೇಲೂ ಶೇ. 46ರಷ್ಟು ತೆರಿಗೆ ಬೀಳುತ್ತದೆ. ಇದರಿಂದಾಗಿ, ಅಮೆರಿಕದ ಕಂಪನಿಗಳು ಭಾರತದಿಂದ ತರಿಸಿಕೊಳ್ಳುವ ಯಾವುದೇ ವಸ್ತು ದುಬಾರಿಯಾಗಲಿದ್ದು ಆ ಭೀತಿಯಿಂದಲೇ ಕಂಪನಿ ಆಸ್ತಿ, ಷೇರು ಮಾರುಕಟ್ಟೆ ತೀವ್ರ ಮಟ್ಟದಲ್ಲಿ ಕುಸಿತ ಕಂಡಿದೆ.

ಭಾರತದಲ್ಲಿ ಮೇಕ್ ಇನ್ ಇಂಡಿಯಾ ವ್ಯವಸ್ಥೆ ಹೆಚ್ಚಿದ ನಂತರ, ಅಮೆರಿಕ ಸೇರಿದಂತೆ ನಾನಾ ದೇಶಗಳ ಕಂಪನಿಗಳು ಭಾರತದಲ್ಲೇ ಬಿಡಿಭಾಗ ಇನ್ನಿತರ ಉತ್ಪಾದನಾ ಕಾರ್ಯ ಆರಂಭಿಸಿದ್ದವು. ಭಾರತದಲ್ಲಿ ಬಿಡಿಭಾಗಗಳನ್ನು ತಯಾರಿಸಿ ಪುನಃ ತಮ್ಮ ದೇಶಕ್ಕೊಯ್ದು ಅಲ್ಲಿ ಅಸೆಂಬಲ್ ಮಾಡಿ ಜಾಗತಿಕ ಮಟ್ಟದಲ್ಲಿ ಉತ್ಪನ್ನಗಳನ್ನು ರಿಲೀಸ್ ಮಾಡುತ್ತಿದ್ದವು. ಅಮೆರಿಕದ ಆ್ಯಪಲ್ ಕಂಪನಿ ಇದೇ ನೀತಿಯನ್ನು ಅನುಸರಿಸಿತ್ತು.
ಆ್ಯಪಲ್ ಸಂಸ್ಥೆಯು ಬೆಂಗಳೂರಿನಲ್ಲಿ ಬಿಡಿಭಾಗ ತಯಾರಿಸಿ ಅಮೆರಿಕದಲ್ಲೇ ಮೊಬೈಲ್ ರೆಡಿಯಾಗಿಸಿ ತರುತ್ತಿದ್ದವು. ಈಗ ಟ್ರಂಪ್ ಅವರ ಪ್ರತೀಕಾರದ ತೆರಿಗೆಯಿಂದಾಗಿ ಭಾರತ ಸೇರಿದಂತೆ ಯಾವುದೇ ರಾಷ್ಟ್ರಗಳಿಂದ ಆ ದೇಶಕ್ಕೆ ಪೂರೈಕೆಯಾಗುವ ವಸ್ತುಗಳ ಮೇಲೆ ಶೇ. 46ರಷ್ಟು ಸುಂಕ ಬೀಳಲಿದೆ. ಇದರಿಂದ ಕಂಪನಿಗೂ ಮತ್ತು ಅಲ್ಲಿನ ಸಿಬಂದಿಗೆ ಹೊಡೆತ. ಜೊತೆಗೆ, ಎಲ್ಲ ವಸ್ತುಗಳ ದರವೂ ದುಬಾರಿಯಾಗುತ್ತದೆ. ಆ್ಯಪಲ್ ಕಂಪನಿಯ ಉತ್ಪನ್ನಗಳಾದ ಐಫೋನ್, ಐಪ್ಯಾಡ್, ಮ್ಯಾಕ್ ಬುಕ್ ಗಳ ಬಿಡಿಭಾಗಗಳು ಭಾರತ ಮಾತ್ರವಲ್ಲದೆ, ವಿಯೆಟ್ನಾಂ, ಮಲೇಷ್ಯಾ, ಥಾಯ್ಲೆಂಡ್, ಐರ್ಲೆಂಡ್ ಗಳಲ್ಲೂ ತಯಾರಾಗುತ್ತವೆ. ಎಲ್ಲವುಗಳ ಮೇಲೂ ಅಮೆರಿಕಕ್ಕೆ ಬಂದಾಗ ಅಲ್ಲಿ ಭಾರೀ ತೆರಿಗೆ ಕೊಡಬೇಕಾಗುವುದರಿಂದ ಒಟ್ಟಾರೆ ದುಬಾರಿ ಎನ್ನುವ ಸ್ಥಿತಿಯಾಗಲಿದೆ. ಈ ಅಯೋಮಯ ಸ್ಥಿತಿಯಿಂದ ಮೊದಲಾಗಿ ಷೇರು ಮಾರುಕಟ್ಟೆ ತಲ್ಲಣಿಸಿದೆ.
ಸಪ್ಲೈ ಚೈನ್ ಕುಸಿತದಿಂದ ಕಂಪನಿಗಳ ವ್ಯವಹಾರ ನಿಂತು ಹೋಗಲಿದೆ, ಆಯಾ ದೇಶಗಳಲ್ಲಿ ಹೂಡಿಕೆಗಳ ಹಿಂಪಡೆಯುವಿಕೆ ಆಗಲಿದೆ, ಷೇರುಗಳ ಮೌಲ್ಯ ಕುಸಿಯಲಿದೆ, ಜಗತ್ತಿನಾದ್ಯಂತ ಸಾಮಗ್ರಿಗಳ ಬೆಲೆಯೇರಿಕೆ ಆಗಲಿದ್ದು ಇದರಿಂದ ಒಂದೇ ಪ್ರಕಾರದಲ್ಲಿ ಹಣದುಬ್ಬರ ಉಂಟಾಗಿ ಆರ್ಥಿಕ ಪತನವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ಟ್ರಂಪ್ ಎ.4ರಂದು ಸುಂಕ ಬರೆ ಘೋಷಣೆ ಬಳಿಕ ಚೀನಾ, ಭಾರತ, ಯುರೋಪ್ ಸೇರಿ ಎಲ್ಲ ಕಡೆಯೂ ಷೇರು ಅಡಿಮೇಲಾಗಿದೆ. ಹಾಂಗ್ ಕಾಂಗ್ನಲ್ಲಿ ಹ್ಯಾಂಗ್ಸೆಂಗ್ ಷೇರು ಮಾರುಕಟ್ಟೆ ಶೇ.11ರಷ್ಟು ಇಳಿಕೆಯಾದರೆ, ಜಪಾನ್ ರಾಜಧಾನಿಯಾದ ಟೋಕಿಯೊದ ನಿಕ್ಕಿ 225 ಸೂಚ್ಯಂಕ ಶೇ. 7ರಷ್ಟು ಇಳಿಕೆ ದಾಖಲಿಸಿದೆ. ಶಾಂಘೈ ಕಾಂಪೊಸಿಟ್ ಶೇ. 6ಕ್ಕಿಂತ ಹೆಚ್ಚು ಕುಸಿತ ಕಂಡಿತು. ದಕ್ಷಿಣ ಕೊರಿಯಾದ ಕೋಪ್ಸಿ ಷೇರು ಮಾರುಕಟ್ಟೆ ಶೇ. 5ರಷ್ಟು ಇಳಿಕೆಯಾಗಿದೆ.
Stock markets witness fluctuations occasionally, but some days are far worse than others. On Monday, April 7, the Indian stock market faced one of its biggest falls since June 2024. The Sensex fell nearly 4,000 points, while the Nifty 50 slipped below 21,750, dragging down investor confidence.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am