ಬ್ರೇಕಿಂಗ್ ನ್ಯೂಸ್
03-04-25 11:10 pm HK News Desk ದೇಶ - ವಿದೇಶ
ನವದೆಹಲಿ, ಎ.3 : ಕರ್ತವ್ಯ ನಿರತರಾಗಿದ್ದ ವೇಳೆ ಅಂಗವಿಕಲ್ಯಕ್ಕೆ ಒಳಗಾಗಿರುವ ನಮ್ಮ ಮಾಜಿ ಸೈನಿಕರು ಪಿಂಚಣಿ ಪಡೆಯುವುದಕ್ಕೆ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಪ್ರಸ್ತುತ ವ್ಯವಸ್ಥೆ ಸರಳೀಕೃತಗೊಳಿಸುವ ಮೂಲಕ ಸಿಂಗಲ್ ವಿಂಡೋ ಮಾದರಿ ವ್ಯವಸ್ಥೆ ಜಾರಿಗೊಳಿಸಬೇಕು. ಜೊತೆಗೆ ಈ ವಿಚಾರದಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ಪ್ರದರ್ಶಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ಎ.3ರಂದು ಶೂನ್ಯವೇಳೆಯಲ್ಲಿ ನಿವೃತ್ತ ಯೋಧರು ಅಂಗವೈಕಲ್ಯ ಪಿಂಚಣಿ ಪಡೆಯಲು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಸದನದ ಗಮನಸೆಳೆದಿರುವ ಕ್ಯಾ. ಚೌಟ ಅವರು, ʼನಾನು ಒಬ್ಬ ಸೈನಿಕನಾಗಿ, ಯೋಧರ ಪರವಾಗಿ ಈ ವಿಚಾರವನ್ನು ಸಂಸತ್ತಿನ ಗಮನಕ್ಕೆ ತರುತ್ತಿದ್ದೇನೆ. ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿರುವ ಸೈನಿಕ ಸಮುದಾಯದ ಒಬ್ಬ ಪ್ರತಿನಿಧಿಯಾಗಿ ಇಲ್ಲಿ ನಿಂತಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೂಡ ಯೋಧರ ಕ್ಷೇಮಾಭಿವೃದ್ಧಿಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿರಬೇಕಾದರೆ ಅಂಗವಿಕಲರಾಗಿರುವ ನಿವೃತ್ತ ಸೈನಿಕರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಸಕಾರಾತ್ಮಕ ಕ್ರಮ ಕೈಗೊಳ್ಳುತ್ತದೆ ಎನ್ನುವ ಪೂರ್ಣ ವಿಶ್ವಾಸ ನನಗಿದೆ’ ಎಂದು ಹೇಳಿದ್ದಾರೆ.
ಸೈನಿಕರು ಎಂದಿಗೂ ತಮ್ಮ ಕರ್ತವ್ಯದಿಂದ ವಿರಮಿಸುವುದಿಲ್ಲ. ದೇಶದ ರಕ್ಷಣೆಗಾಗಿ ಪರಮೋಚ್ಚ ತ್ಯಾಗ ಮಾಡುವ ಸೈನಿಕರ ಕಷ್ಟ ಕಾಲದಲ್ಲಿ ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸದೆ ಅವರ ಜೊತೆಗೆ ನಿಲ್ಲುವುದು ನಮ್ಮ ಕರ್ತವ್ಯ ಕೂಡ. ಆದರೆ, ಹಲವಾರು ನಿವೃತ್ತ ಸೈನಿಕರು ಎಲ್ಲಾ ದಾಖಲೆಗಳು ಮತ್ತು ಅಗತ್ಯ ಮಾಹಿತಿ ನೀಡಿದ ನಂತರವೂ, ಹೆಚ್ಚುವರಿ ದಾಖಲೆ ನೀಡುವಂತೆ ಅಥವಾ ಕೊಟ್ಟ ಮಾಹಿತಿ ಸರಿಯಿಲ್ಲ ಎನ್ನುವ ನೆಪದಲ್ಲಿ ಅಧಿಕಾರಿಗಳು ಅವರನ್ನು ಸತಾಯಿಸುವ ಹಲವು ಪ್ರಕರಣಗಳು ನಡೆದಿವೆ. ಮಾಜಿ ಸೈನಿಕರು ಅಂಗವೈಕಲ್ಯ ಪಿಂಚಣಿ ಪಡೆಯಲು ಪದೇ ಪದೇ ಕೋರ್ಟ್, ಕಚೇರಿ ಅಲೆಯುವ ಪರಿಸ್ಥಿತಿ ಇದೆ ಎಂದು ಕ್ಯಾ. ಚೌಟ ಬೇಸರ ವ್ಯಕ್ತಪಡಿಸಿದ್ದಾರೆ.
ನಿವೃತ್ತ ಸೈನಿಕರು ಅಂಗವಿಕಲ ಪಿಂಚಣಿ ಪಡೆಯುವಲ್ಲಿ ಒಂದೇ ಕಡೆ ಅಗತ್ಯ ದಾಖಲೆ ಸಲ್ಲಿಸಲು ಹಾಗೂ ಕುಂದುಕೊರತೆ ಬಗೆಹರಿಸುವುದಕ್ಕೆ ಏಕಗವಾಕ್ಷಿ ವ್ಯವಸ್ಥೆ ಸ್ಥಾಪಿಸಬೇಕು. ಸಚಿವಾಲಯವು ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಮಾಜಿ ಸೈನಿಕರು ಅಂಗವಿಕಲ ಪಿಂಚಣಿ ಪಡೆಯುವುದಕ್ಕೆ ಎದುರಿಸುತ್ತಿರುವ ಅಡೆ ತಡೆ ನಿವಾರಿಸುವಲ್ಲಿ ಕಾರ್ಯ ಪ್ರವೃತ್ತವಾಗಬೇಕೆಂದು ನಿವೃತ್ತ ಯೋಧರ ಪರವಾಗಿ ಕ್ಯಾ. ಚೌಟ ಸದನದಲ್ಲಿ ಧ್ವನಿಯೆತ್ತಿದ್ದಾರೆ.
Raised the serious concern of the challenges faced by our veteran Faujis in availing disability pensions, during Zero Hour in Parliament today.
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) April 3, 2025
As a Fauji, it’s my view that bureaucratic hassles are an insult to the selfless service rendered by Faujis and their families.
I… pic.twitter.com/iAeW7enGi5
Dakshina Kannada Member of Parliament, Captain Brijesh Chowta, brought the significant challenges faced by ex-servicemen in accessing disability pensions to the forefront during Zero Hour in Parliament today. He highlighted the systemic hurdles and bureaucratic delays that veterans encounter, advocating for streamlined processes and improved accessibility.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 03:51 pm
Mangaluru Correspondent
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
Forensic Expert Dr Mahabala Shetty, Dharmasth...
01-08-25 10:02 pm
02-08-25 07:20 pm
Bengaluru Correspondent
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm