ಬ್ರೇಕಿಂಗ್ ನ್ಯೂಸ್
31-03-25 04:07 pm HK News Desk ದೇಶ - ವಿದೇಶ
ತಿರುವನಂತಪುರಂ, ಮಾ.31 : ಕರ್ನಾಟಕ ಮತ್ತು ಕೇರಳದಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಸಂಸದರು ಹಾಗೂ ಶಾಸಕರು ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದರೆ, ಕೇರಳದಲ್ಲಿ ಕೆಥೋಲಿಕ್ ಬಿಷಪ್ಸ್ ಕೌನ್ಸಿಲ್ ಸದಸ್ಯರು ವಕ್ಫ್ ತಿದ್ದುಪಡಿ ಮಸೂದೆ ಪರವಾಗಿ ಧ್ವನಿಯೆತ್ತಿದ್ದಾರೆ. ಕೇರಳದ ಸಂಸದರು ತಿದ್ದುಪಡಿ ಮಸೂದೆಯನ್ನು ಬೆಂಬಲಿಸಬೇಕೆಂದು ಬಿಷಪ್ಸ್ ಕೌನ್ಸಿಲ್ ಒತ್ತಾಯಿಸಿದ್ದು, ಮಸೂದೆ ಜಾರಿಯಾದರೆ ಮಾತ್ರ ಎರ್ನಾಕುಲಂ ಜಿಲ್ಲೆಯ ಮುನಾಂಬಮ್ ಗ್ರಾಮದ ಸಂತ್ರಸ್ತರಿಗೆ ನ್ಯಾಯ ಸಿಕ್ಕೀತು ಎಂದಿದ್ದಾರೆ.
ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಈ ಬಾರಿಯ ಸಂಸತ್ತಿನ ಅಧಿವೇಶನದಲ್ಲಿ ಜಾರಿಗೆ ತರಲು ಪ್ರಯತ್ನ ನಡೆಸುತ್ತಿದೆ. ಆದರೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಸಂಸದರು ಪ್ರಸ್ತಾವಿತ ಮಸೂದೆಗೆ ವಿರೋಧ ತೋರಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಸಂಸದರು ಕೂಡ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೊಟ್ಟಾಯಂ ಸಂಸದ ಫ್ರಾನ್ಸಿಸ್ ಜಾರ್ಜ್ ಅವರು ಈ ಹಿಂದೆ ಮುನಾಂಬಮ್ ಗ್ರಾಮಸ್ಥರ ಪ್ರತಿಭಟನಾ ಸ್ಥಳಕ್ಕೆ ಬಂದು ಜನರ ಪರವಾಗಿ ತಾನಿದ್ದೇನೆ ಎಂದು ಹೇಳಿಕೆ ನೀಡಿದ್ದರೂ ತಿದ್ದುಪಡಿ ಮಸೂದೆಯ ಪ್ರಸ್ತಾಪಕ್ಕೆ ಪಕ್ಷದ ಸೂಚನೆಯಂತೆ ವಿರೋಧಿ ನಿಲುವು ತೋರಿದ್ದಾರೆ.


ಕೇರಳದಲ್ಲಿ ಮುನಾಂಬಮ್ ಸಂತ್ರಸ್ತರಲ್ಲಿ ಅತಿಹೆಚ್ಚು ಕ್ರಿಸ್ತಿಯನ್ನರು ಇರುವುದರಿಂದ ಕೇರಳ ಕಾಂಗ್ರೆಸ್ ಪ್ರತಿಭಟನಾಕಾರರಿಗೆ ಬೆಂಬಲ ಘೋಷಿಸಿದೆ. ಆದರೆ ಕೇಂದ್ರ ಎನ್ ಡಿಎ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದನ್ನು ಕಾಂಗ್ರೆಸ್ ಸಂಸದರು ವಿರೋಧಿಸುತ್ತಿದ್ದು, ತುಷ್ಟೀಕರಣ ರಾಜಕೀಯಕ್ಕಾಗಿ ಮುಸ್ಲಿಮರ ಪರ ವಹಿಸಿದೆ ಎಂದು ಕೇರಳ ಬಿಜೆಪಿ ಆರೋಪಿಸಿದೆ. ಇದೇ ವೇಳೆ, ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಿದ್ದು, ಇದೇ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಜಾರಿಗೆ ತರಲಾಗುವುದು. ಸಂವಿಧಾನ ಪ್ರಕಾರವೇ ತಿದ್ದುಪಡಿ ಮಸೂದೆ ತರಲಾಗುತ್ತಿದ್ದು, ವಿವಾದಿತ ಜಾಗದ ವ್ಯಾಜ್ಯಗಳನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದಿದ್ದಾರೆ.

ಏನಿದು ಮುನಾಂಬಮ್ ವಕ್ಫ್ ವಿವಾದ
ಸ್ವಾತಂತ್ರ್ಯ ಕಾಲದಿಂದಲೂ ಎರ್ನಾಕುಲಂ ಜಿಲ್ಲೆಯ ಮುನಾಂಬಮ್ ಬೀಚ್ ಒಳಗೊಂಡ 404 ಎಕ್ರೆ ಭೂಮಿ ವಕ್ಫ್ ಕಾಯ್ದೆ ಹೆಸರಲ್ಲಿ ವಿವಾದಕ್ಕೀಡಾಗಿದೆ. ಗ್ರಾಮದಲ್ಲಿ 600ಕ್ಕೂ ಹೆಚ್ಚು ಕ್ರಿಸ್ತಿಯನ್ ಮತ್ತು ಹಿಂದುಳಿದ ವರ್ಗದ ಹಿಂದು ಕುಟುಂಬಗಳು ತಲೆಮಾರುಗಳಿಂದ ವಾಸವಿದ್ದಾರೆ. ಆದರೆ ಇವರಲ್ಲಿ ತಮ್ಮ ನಿವಾಸದ ಬಗ್ಗೆ ಹಕ್ಕುಪತ್ರ ಇಲ್ಲ. ಕೇರಳ ರಾಜ್ಯ ವಕ್ಫ್ ಬೋರ್ಡ್ ಅದನ್ನು ವಕ್ಫ್ ಆಸ್ತಿಯೆಂದು ವಾದಿಸುತ್ತಿದ್ದರೆ, ಸ್ಥಳೀಯ ಫಾರೂಕ್ ಕಾಲೇಜು ಆಡಳಿತ ಅದು ತನಗೆ ಸೇರಿದ ಭೂಮಿಯೆಂದು ವಾದಿಸುತ್ತಿದೆ. ಫಾರೂಕ್ ಕಾಲೇಜಿನವರು 1950ರಲ್ಲಿ ಈ ಭೂಮಿಯನ್ನು ಖರೀದಿಸಿದ್ದಾಗಿ ಹೇಳುತ್ತಿದ್ದರೂ, ಅಲ್ಲಿನ ಜನರನ್ನು ಸ್ಥಳಾಂತರ ಮಾಡಲು 1960ರಿಂದಲೂ ಯತ್ನಿಸುತ್ತ ಬಂದರೂ ಸಾಧ್ಯವಾಗಿಲ್ಲ.
ಈ ಕುರಿತ ವ್ಯಾಜ್ಯ ಕೋಜಿಕ್ಕೋಡ್ ವಕ್ಫ್ ಟ್ರಿಬ್ಯುನಲ್ ನಲ್ಲಿ ನಡೆಯುತ್ತಿದ್ದು, ಫಾರೂಕ್ ಕಾಲೇಜು ಆಡಳಿತ, ಸ್ಥಳೀಯ ಗ್ರಾಮಸ್ಥರು ಮತ್ತು ಕೇರಳ ವಕ್ಫ್ ಬೋರ್ಡ್ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ಇದೇ ವೇಳೆ, ಮುನಾಂಬಮ್ ಗ್ರಾಮದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರಕಾರದ ಗಮನ ಸೆಳೆಯುವ ಯತ್ನ ಮಾಡಿದ್ದಾರೆ. ರಾಜ್ಯದಲ್ಲಿ ಎಡಪಕ್ಷ ಆಡಳಿತ ಇರುವುದರಿಂದ ಕಾಂಗ್ರೆಸ್ ನಾಯಕರು ಪ್ರತಿಭಟನಾ ನಿರತ ಕ್ರೈಸ್ತರಿಗೆ ಬೆಂಬಲ ನೀಡುತ್ತಿದ್ದಾರೆ. ಆದರೆ ಕೇಂದ್ರದಲ್ಲಿ ಜಾರಿಗೆ ತರುತ್ತಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸದೇ ರಾಜಕೀಯ ನಡೆ ತೋರುತ್ತಿದ್ದು, ಕೆಥೋಲಿಕ್ ಬಿಷಪ್ಸ್ ಕೌನ್ಸಿಲ್ ವಿರೋಧ ವ್ಯಕ್ತಪಡಿಸಿದೆ.

ಟ್ರಿಬ್ಯುನಲ್ ನಲ್ಲಿ ಸುದೀರ್ಘ ವ್ಯಾಜ್ಯ
ಫಾರೂಕ್ ಕಾಲೇಜು ಆಡಳಿತವು 1950ರಲ್ಲಿ ಮಾಡಿದ ವಕ್ಫ್ ಡೀಡ್ ಪ್ರಕಾರ 404 ಎಕ್ರೆ ಆಸ್ತಿ ತನ್ನದೆಂದು ಹೇಳುತ್ತಿದೆ. ಆದರೆ ವಕ್ಫ್ ಟ್ರಿಬ್ಯುನಲ್ ಮುಂದೆ ವಕ್ಫ್ ಡೀಡ್ ಪ್ರತಿಯನ್ನು ಹಾಜರುಪಡಿಸಲು ವಿಫಲವಾಗಿದೆ ಎನ್ನಲಾಗುತ್ತಿದೆ. ಈ ನಡುವೆ, ವಿವಾದಿತ ಜಾಗವನ್ನು ಮಾರಾಟ ಮಾಡುವುದಕ್ಕೂ ಫಾರೂಕ್ ಕಾಲೇಜು ಮುಂದಾಗಿದ್ದು, ಕೇರಳ ವಕ್ಫ್ ಬೋರ್ಡ್ ತಕರಾರು ಎತ್ತಿದೆ. 2009ರಲ್ಲಿ ಕೇರಳ ಸರಕಾರವು ವಿವಾದಿತ ಜಾಗದ ಬಗ್ಗೆ ತನಿಖೆ ನಡೆಸಲು ನಿಸಾರ್ ಕಮಿಷನ್ ನೇಮಕ ಮಾಡಿತ್ತು. ಆಯೋಗ ತನಿಖಾ ವರದಿಯನ್ನು ಸರಕಾರಕ್ಕೆ ಮಂಡಿಸಿದ್ದು, ವಿವಾದಿತ ಜಾಗವು ವಕ್ಫ್ ಆಸ್ತಿಯೆಂದೂ, ಅದನ್ನು ಮಾರಾಟ ಮಾಡುವುದಕ್ಕೆ ಫಾರೂಕ್ ಕಾಲೇಜು ಆಡಳಿತಕ್ಕೆ ಯಾವುದೇ ಅಧಿಕಾರವಿಲ್ಲವೆಂದೂ ಹೇಳಿತ್ತು.

ಟ್ರಾವಂಕೂರು ರಾಜ ನೀಡಿದ್ದ ಭೂಮಿ
ಮಾಹಿತಿ ಪ್ರಕಾರ, ಮುನಾಂಬಮ್ ವಿವಾದಕ್ಕೆ 110 ವರ್ಷಗಳ ಇತಿಹಾಸವಿದೆಯಂತೆ. 1902ರಲ್ಲಿ ಟ್ರಾವಂಕೂರು ರಾಜ ಮನೆತನ, ಈ ಭಾಗದ ದೊಡ್ಡ ವ್ಯಾಪಾರಿಯಾಗಿದ್ದ ಅಬ್ದುಲ್ ಸತ್ತಾರ್ ಮೂಸಾ ಸೇಠ್ ಅವರಿಗೆ 404 ಎಕ್ರೆ ಜಾಗವನ್ನು ಲೀಸಿಗೆ ನೀಡಿತ್ತು. 1950ರ ಕಾಲದಲ್ಲಿ ಅಬ್ದುಲ್ ಸತ್ತಾರ್ ಅವರ ಮೊಮ್ಮಗ ಮೊಹಮ್ಮದ್ ಸಿದ್ದೀಕ್ ಸೇಠ್ ಅವರು ಇದೇ ಜಾಗವನ್ನು ವಕ್ಫ್ ಆಸ್ತಿಯೆಂದು ದಾನ ಪತ್ರ ನೀಡಿದ್ದಲ್ಲದೆ, ಜಾಗವನ್ನು ನೋಡಿಕೊಳ್ಳುವಂತೆ ಕೋಜಿಕ್ಕೋಡಿನ ಫಾರೂಕ್ ಕಾಲೇಜು ಆಡಳಿತ ಕಮಿಟಿಯ ಅಧ್ಯಕ್ಷರಿಗೆ ಬರೆದುಕೊಟ್ಟಿದ್ದರು. ಡೀಡ್ ನಲ್ಲಿ ಈ ಜಾಗವನ್ನು ಇಸ್ಲಾಮಿಕ್ ಕಾನೂನಿನಂತೆ ಚಾರಿಟಿ ಮತ್ತು ಶಿಕ್ಷಣ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು ಎಂದು ಉಲ್ಲೇಖಿಸಲಾಗಿತ್ತು.

ಜಾಗ ಮಾರಾಟಕ್ಕೆ ಯತ್ನಿಸಿದ್ದ ಪುಢಾರಿಗಳು
1960ರ ವೇಳೆಗೆ ಫಾರೂಕ್ ಕಾಲೇಜು ಆಡಳಿತವು ಸದ್ರಿ ಜಾಗದಲ್ಲಿದ್ದ ನಿವಾಸಿಗಳನ್ನು ಎಬ್ಬಿಸಲು ಯತ್ನಿಸಿತ್ತು. ಆದರೆ ಹಳೆ ಕಾಲದಿಂದಲೂ ಅಲ್ಲಿಯೇ ಬದುಕುತ್ತ ಬಂದಿದ್ದ ಕುಟುಂಬಗಳು ಜಾಗ ಬಿಟ್ಟು ಕೊಡುವುದಕ್ಕೆ ಒಪ್ಪಲಿಲ್ಲ. ಆನಂತರ, ಕೋರ್ಟ್ ವ್ಯಾಜ್ಯ ನಡೆದುಬಂದರೂ, ಇತ್ತೀಚೆಗೆ ಕಾಲೇಜಿನವರ ಜೊತೆ ರಿಯಲ್ ಎಸ್ಟೇಟ್ ಸೇರಿಕೊಂಡು ಕೋರ್ಟ್ ಹೊರತಾಗಿ ಜಾಗದ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗಿದ್ದರು. ಮಾರುಕಟ್ಟೆ ಬೆಲೆಯಲ್ಲಿ ಜಾಗವನ್ನು ಮಾರಾಟ ಮಾಡುವುದಾಗಿ ಅಲ್ಲಿನ ನಿವಾಸಿಗಳಿಗೂ ಹೇಳಿದ್ದರು. ಆದರೆ ಜಾಗ ಮಾರಾಟ ಪ್ರಸ್ತಾಪಕ್ಕೆ ಕೇರಳ ವಕ್ಫ್ ಬೋರ್ಡ್ ವಿರೋಧಿಸಿದ್ದು, ಅಲ್ಲಿನ ನಿವಾಸಿಗಳಿಗೂ ಹೊಸ ತಲೆನೋವು ಸೃಷ್ಟಿಸಿತ್ತು. ಕೆಲವರು ನಮ್ಮದೇ ಭೂಮಿಯನ್ನು ಹಣ ಕೊಟ್ಟು ನಮ್ಮದೆಂದು ತೋರಿಸಿಕೊಳ್ಳಬೇಕಾ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು. ದಾನಪತ್ರದಿಂದ ಸಿಕ್ಕಿರುವ ಭೂಮಿಯನ್ನು ಕಾಲೇಜು ಆಡಳಿತ ಮಾರಾಟ ಮಾಡುವುದಕ್ಕೂ ವಕ್ಫ್ ಕಾನೂನು ಪ್ರಕಾರವೂ ಅವಕಾಶವಿಲ್ಲ.
ಈ ನಡುವೆ, 2009ರಲ್ಲಿ ಎಡರಂಗ ಸರಕಾರವು ನೇಮಕ ಮಾಡಿದ್ದ ನಿಸಾರ್ ಕಮಿಷನ್ ವಿವಾದಿತ ಜಾಗವನ್ನು ಮಾರಾಟ ಮಾಡಲು ಕಾಲೇಜು ಆಡಳಿತಕ್ಕೂ ಅವಕಾಶವಿಲ್ಲ. ಆ ಭೂಮಿ ಏನಿದ್ದರೂ ವಕ್ಫ್ ಆಸ್ತಿಯೇ ಆಗಿರುತ್ತದೆ. ಈಗಾಗಲೇ ಮಾರಾಟ ಮಾಡಿರುವ ಭೂಮಿಯನ್ನು ಮರು ವಶಕ್ಕೆ ಪಡೆಯಬೇಕೆಂದೂ ಹೇಳಿತ್ತು. ಇದರಂತೆ, 2019ರಲ್ಲಿ ಕೇರಳ ವಕ್ಫ್ ಬೋರ್ಡ್ ಏಕಾಏಕಿ ವಿವಾದಿತ ಮುನಾಂಬಮ್ ಗ್ರಾಮದ 400 ಎಕ್ರೆ ಜಾಗವನ್ನು 1995ರ ವಕ್ಫ್ ಕಾಯ್ದೆ ಸೆಕ್ಷನ್ 40 ಮತ್ತು 41 ಪ್ರಕಾರ, ವಕ್ಫ್ ಆಸ್ತಿಯೆಂದು ಸ್ವಯಂ ಘೋಷಣೆ ಮಾಡಿತ್ತು.
ಆದರೆ 2022ರಲ್ಲಿ ಅಧಿಕಾರಕ್ಕೆ ಬಂದ ಎಡರಂಗ ಸರಕಾರವು ವಕ್ಫ್ ಬೋರ್ಡ್ ತೆಗೆದುಕೊಂಡಿದ್ದ ನಿರ್ಣಯವನ್ನು ರದ್ದುಪಡಿಸಿತ್ತು. ವಕ್ಫ್ ಬೋರ್ಡ್ ಮಾತ್ರ ರಾಜ್ಯ ಸರಕಾರದ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಕೋರ್ಟ್ ರಾಜ್ಯ ಸರಕಾರದ ಆದೇಶಕ್ಕೆ ತಡೆ ನೀಡಿದ್ದಲ್ಲದೆ, ವಿವಾದಿತ ಜಾಗದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆನಂತರ, ಮುನಾಂಬಮ್ ಗ್ರಾಮದ ನಿವಾಸಿಗಳು ಸೇರಿದಂತೆ ಹಲವು ಕಡೆಯಿಂದ ಹೈಕೋರ್ಟಿಗೆ ಮನವಿ ಸಲ್ಲಿಕೆಯಾಗಿದ್ದರೂ, ಕೋರ್ಟ್ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಹಾಲಿ ಇರುವ ವಕ್ಫ್ ಕಾಯ್ದೆ ಪ್ರಕಾರ, ವಕ್ಫ್ ಆಸ್ತಿ ಸಮಸ್ಯೆಯನ್ನು ನಾಗರಿಕ ನ್ಯಾಯಾಲಯಗಳಲ್ಲಿ ಇತ್ಯರ್ಥ ಮಾಡುವಂತಿಲ್ಲ, ಕೇವಲ ವಕ್ಫ್ ಟ್ರಿಬ್ಯುನಲ್ ನಲ್ಲಿ ಮಾತ್ರ ಇತ್ಯರ್ಥ ಮಾಡಬಹುದು ಎಂದಿದೆ. ಹೀಗಾಗಿ ವಕ್ಫ್ ಕಾನೂನೇ ತೊಡಕಾಗಿ ಪರಿಣಮಿಸಿದ್ದು ಕೇಂದ್ರ ಸರಕಾರ ತರುತ್ತಿರುವ ತಿದ್ದುಪಡಿ ಮಸೂದೆಯು ಮುನಾಂಬಮ್ ಗ್ರಾಮಸ್ಥರಿಗೆ ಆಶಾಕಿರಣವಾಗಿ ತೋರುತ್ತಿದೆ.
The Kerala Catholic Bishops Council (KCBC) has urged parliament members to support the proposed Waqf (Amendment) Act, calling certain provisions in the present Act, unconstitutional, and unjust. According to KCBC, these provisions enabled illegal claims that prevented residents of Munambam in Ernakulam from asserting their rights over the land
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am