ಬ್ರೇಕಿಂಗ್ ನ್ಯೂಸ್
24-03-25 03:54 pm HK News Desk ದೇಶ - ವಿದೇಶ
ನವದೆಹಲಿ, ಮಾ.24 : ಅಪಾರ ಪ್ರಮಾಣದ ನಗದು ಪತ್ತೆಯಾಗಿ ಭಾರೀ ವಿವಾದಕ್ಕೆ ಗುರಿಯಾಗಿರುವ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರನ್ನು ತಕ್ಷಣದಿಂದಲೇ ಕರ್ತವ್ಯದಿಂದ ತೆರವು ಮಾಡಲಾಗಿದ್ದು, ಮುಂದಿನ ಆದೇಶದ ವರೆಗೂ ಅವರು ಕಾರ್ಯ ನಿರ್ವಹಣೆ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಉಪಾಧ್ಯಾಯ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ದೆಹಲಿ ಹೈಕೋರ್ಟ್ ವೆಬ್ ಸೈಟ್ ನಲ್ಲಿ ಈ ಮಾಹಿತಿ ಪ್ರಕಟಿಸಲಾಗಿದ್ದು, ಯಶವಂತ್ ವರ್ಮಾ ಅವರನ್ನು 2021ರಲ್ಲಿ ಸೇಲ್ಸ್ ಟ್ಯಾಕ್ಸ್, ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್, ಕಂಪನಿ ವ್ಯವಹಾರಗಳ ಸಂಬಂಧಿತ ವ್ಯಾಜ್ಯಗಳ ನಿರ್ವಹಣೆಯ ದ್ವಿದಸ್ಯ ಪೀಠದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿತ್ತು. ನಿವಾಸದಲ್ಲಿ ನಗದು ಪತ್ತೆಯಾದ ಪ್ರಕರಣದ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ನಿವಾಸದಲ್ಲಿ ಅಗಣಿತ ನಗದು ಪತ್ತೆ ಪ್ರಕರಣದಲ್ಲಿ ತನಿಖೆಗಾಗಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಕಮಿಟಿಯನ್ನು ರಚಿಸಿದ್ದು, ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಹಿಮಾಚಲಪ್ರದೇಶ ಮತ್ತು ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಈ ಸಮಿತಿಯಲ್ಲಿ ಇರಲಿದ್ದಾರೆ. ಈ ನಡುವೆ, ಯಶವಂತ್ ವರ್ಮಾ ತನ್ನ ನಿವಾಸದಲ್ಲಿ ಪತ್ತೆಯಾದ ಹಣ ತನ್ನದಲ್ಲ. ಆ ಕೊಠಡಿ ಮುಖ್ಯ ನಿವಾಸಕ್ಕೆ ಹೊಂದಿಕೊಂಡಿದ್ದ ಭಾಗ ಅಷ್ಟೇ. ಅದಕ್ಕೂ ತನ್ನ ನಿವಾಸಕ್ಕೂ ಸಂಬಂಧ ಇಲ್ಲ. ಇದರ ಹಿಂದೆ ಏನೋ ಪಿತೂರಿ ಇದೆ ಎಂದು ಹೇಳಿಕೆ ನೀಡಿದ್ದರು.
ಕಳೆದ ವಾರ ದೆಹಲಿಯ ನ್ಯಾಯಾಧೀಶರ ನಿವಾಸದಲ್ಲಿ ಬೆಂಕಿ ಬಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ನಗದು ಸುಟ್ಟು ಹೋಗಿರುವುದು ಪತ್ತೆಯಾಗಿದ್ದಲ್ಲದೆ, ಇದರ ವಿಡಿಯೋ ಹೊರಬಂದಿತ್ತು. ಅಲ್ಲದೆ, ಮತ್ತಷ್ಟು ನೋಟಿನ ರಾಶಿಗಳು ಸಿಕ್ಕಿದ್ದವು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕೊಲಿಜಿಯಂ, ಯಶವಂತ ವರ್ಮಾ ಅವರನ್ನು ತುರ್ತಾಗಿ ಅವರು ಈ ಹಿಂದೆ ಇದ್ದ ಅಲಹಾಬಾದ್ ಹೈಕೋರ್ಟಿಗೆ ವರ್ಗಾವಣೆ ಮಾಡಿತ್ತು. ಆನಂತರ, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಮೇಲ್ನೋಟಕ್ಕೆ ಲೋಪ ಕಂಡುಬಂದಿದ್ದು ಮತ್ತು ಹೆಚ್ಚಿನ ತನಿಖೆಯ ಅಗತ್ಯ ಇರುವುದಾಗಿ ವರದಿ ನೀಡಿದ್ದರು. ಇದರ ಬೆನ್ನಲ್ಲೇ ಆರೋಪಿತ ನ್ಯಾಯಾಧೀಶರನ್ನು ಮುಂದಿನ ಆದೇಶದ ವರೆಗೆ ಕರ್ತವ್ಯದಿಂದ ಮುಕ್ತಗೊಳಿಸಿ ಆದೇಶ ಮಾಡಿದ್ದಾರೆ.
ಇದೇ ವೇಳೆ, ಪ್ರಕರಣ ಸಂಬಂಧಿಸಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ದೆಹಲಿ ಪೊಲೀಸರಿಗೆ ಅನುಮತಿ ನೀಡಬೇಕೆಂದು ಸುಪ್ರೀಂ ಕೋರ್ಟಿಗೆ ಪಿಐಎಲ್ ಅರ್ಜಿ ಸಲ್ಲಿಕೆಯಾಗಿದೆ. ಸುಪ್ರೀಂ ಕೋರ್ಟ್ ವಕೀಲ ಮ್ಯಾಥ್ಯೂ ನೆಡುಂಪಾರ ಈ ಬಗ್ಗೆ ಪಿಐಎಲ್ ಸಲ್ಲಿಸಿದ್ದು, ನ್ಯಾಯಾಧೀಶರ ನಿವಾಸದಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾಗಿರುವುದು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಕಪ್ಪು ಚುಕ್ಕೆ. ಈ ಬಗ್ಗೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ. ಈ ನಡುವೆ, ದೆಹಲಿಯ ನಿವಾಸದ ಬಳಿಯಲ್ಲಿ ಅರೆಬರೆ ಸುಟ್ಟು ಹೋದ ಸಾವಿರಾರು ನೋಟುಗಳ ರಾಶಿ ಪತ್ತೆಯಾಗಿದ್ದಾಗಿ ಅಲ್ಲಿಗೆ ಸ್ವಚ್ಛ ಮಾಡಲು ಬಂದಿದ್ದ ಕಾರ್ಮಿಕರು ತಿಳಿಸಿದ್ದಾರೆ. ನೂರು ಮತ್ತು ಐನೂರು ಮುಖಬೆಲೆಯ ಅರ್ಧ ಸುಟ್ಟ ನೋಟುಗಳು ಸಿಕ್ಕಿದೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
The Delhi high court on Monday announced the immediate withdrawal of Justice Yashwant Varma from judicial duties days after substantial cash was found at his official residence during a fire-fighting operation.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm