ಬ್ರೇಕಿಂಗ್ ನ್ಯೂಸ್
10-03-25 11:45 am HK News Desk ದೇಶ - ವಿದೇಶ
ಕಾಸರಗೋಡು, ಮಾ.10 : 26 ದಿನಗಳ ಹಿಂದೆ ನಾಪತ್ತೆಯಾಗಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮತ್ತು 42 ವರ್ಷದ ಆಟೋ ಚಾಲಕನ ಮೃತದೇಹಗಳು ಅಕ್ಕ ಪಕ್ಕದಲ್ಲಿ ನೇಣು ಬಿಗಿದು ಕೊಳೆತ ಸ್ಥಿತಿಯಲ್ಲಿ ಕುಂಬಳೆ ಠಾಣೆ ವ್ಯಾಪ್ತಿಯ ಕುಡಾಲುಮೇರ್ಕಳ ಗ್ರಾಮದ ಮಂಡೆಕಾಪು ಎಂಬಲ್ಲಿ ಕಾಡಿನ ಮಧ್ಯೆ ಪತ್ತೆಯಾಗಿದೆ.
ಮಂಡೆಕಾಪು ನಿವಾಸಿ ರಿಕ್ಷಾ ಚಾಲಕ ಪ್ರದೀಪ್ (42) ಮತ್ತು ಆತನ ಮನೆಪಕ್ಕದ 15ರ ಹರೆಯದ ಹೈಸ್ಕೂಲು ವಿದ್ಯಾರ್ಥಿನಿ ಶ್ರೇಯಾ ಫೆ.12ರಂದು ಮನೆಯಿಂದ ಕಾಣೆಯಾಗಿದ್ದರು. ಮನೆಯಲ್ಲಿ ಮಲಗಿದ್ದ ಬಾಲಕಿ ನಸುಕಿನಲ್ಲಿ ಹಿಂಬಾಗಿಲಿನ ಮೂಲಕ ತೆರಳಿದ್ದಳು ಎಂದು ಬಾಲಕಿ ಮನೆಯವರು ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪೊಲೀಸರು ವಿವಿಧೆಡೆ ಹುಡುಕಾಡಿದರೂ ಆಕೆಯ ಸುಳಿವು ಸಿಕ್ಕಿರಲಿಲ್ಲ. ಆನಂತರ ಹೆಬಿಯಸ್ ಕಾರ್ಪಸ್ ಅರ್ಜಿಯೂ ಹೈಕೋರ್ಟಿಗೆ ಸಲ್ಲಿಕೆಯಾಗಿತ್ತು.
ಅದೇ ವೇಳೆಗೆ, ಯುವಕ ಪ್ರದೀಪ್ ಕೂಡ ನಾಪತ್ತೆಯಾಗಿದ್ದರಿಂದ ಇವರು ಎಲ್ಲಿಗೋ ಹೋಗಿದ್ದಾರೆ ಎನ್ನುವ ವದಂತಿ ಹರಡಿತ್ತು. ಇವರಿಬ್ಬರ ಮೊಬೈಲ್‌ಗಳು ಕೂಡ ಸ್ವಿಚ್ ಆಫ್ ಆಗಿದ್ದವು. ಮತ್ತೆ ಸಕ್ರಿಯರಾದ ಪೊಲೀಸರು ವಿಶೇಷ ತಂಡ ರಚಿಸಿ ಡ್ರೋನ್ ಬಳಸಿ ಸ್ಥಳೀಯರ ಸಹಕಾರದೊಂದಿಗೆ ಹುಡುಕಾಡುತ್ತಿದ್ದಾಗ ಇಬ್ಬರೂ ಒಂದೇ ಮರದಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ನಾಪತ್ತೆಯಾದ ಕೆಲವೇ ದಿನಗಳಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಎರಡೂ ಶವಗಳೂ ತೀರಾ ಕೊಳೆತಿದ್ದು ಧರಿಸಿದ್ದ ಬಟ್ಟೆಯಿಂದ ಗುರುತು ಹಿಡಿಯಲಾಗಿದೆ.
ಪ್ರದೀಪ್ ಆಗಾಗ ಬಾಲಕಿಯ ಮನೆಗೆ ತೆರಳುತ್ತಿರುವುದಲ್ಲದೆ ಕೆಲವು ಬಾರಿ ಆಕೆಯನ್ನು ತನ್ನ ರಿಕ್ಷಾದಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದನಂತೆ. ಬಾಲಕಿ ಮನೆಯವರ ಜೊತೆಗೂ ಉತ್ತಮ ಸಂಬಂಧ ಇಟ್ಟುಕೊಂಡಿದ್ದ. ಪರಸ್ಪರ ಸಲುಗೆಯಿಂದಿದ್ದ ಇಬ್ಬರೂ ಮುಂದೆ ವಿವಾಹ ಆಲೋಚನೆಯಲ್ಲಿದ್ದು, ಇದಕ್ಕೆ ಬಾಲಕಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಇವರು ನಾಪತ್ತೆಯಾಗಿದ್ದರು. ಆಬಳಿಕ ಪ್ರದೀಪ್ ಸಂಬಂಧಿಕರು ಇರುವ ಮಡಿಕೇರಿಗೂ ತೆರಳಿ ಪೊಲೀಸರು ಹುಡುಕಾಟ ನಡೆಸಿದ್ದರು.
ಮೊಬೈಲ್ ಕೊನೆಯ ಬಾರಿಗೆ ರೇಂಜ್ ಲೊಕೇಶನ್ ಮಂಡೆಕಾಪು ಪರಿಸರದಲ್ಲಿಯೇ ತೋರಿಸಿದ್ದರಿಂದ ಪೊಲೀಸರು ಮತ್ತೆ ಅಲ್ಲಿಯೇ ಹುಡುಕಾಟಕ್ಕಿಳಿದಿದ್ದರು. ಶವ ಪತ್ತೆಯಾದ ಸ್ಥಳದಲ್ಲಿ ಎರಡು ಮೊಬೈಲ್ ಫೋನ್‌ಗಳು ಮತ್ತು ಒಂದು ಕತ್ತಿ ಪತ್ತೆಯಾಗಿದೆ. ನಾಪತ್ತೆಯಾದ ಘಟನೆ ಬಳಿಕ ಅದೇ ಜಾಗಕ್ಕೆ ಬಂದು ಯುವಕ- ಯುವತಿ ತಮ್ಮ ಪ್ರೀತಿಗೆ ಒಪ್ಪಿಗೆ ಇಲ್ಲ ಎಂಬ ಕೊರಗಿನಲ್ಲಿ ಕಾಡಿನ ಮಧ್ಯೆ ಮರಕ್ಕೆ ನೇಣು ಬಿಗಿದು ಕೊಂಡಿರುವಂತೆ ಕಾಣುತ್ತಿದೆ.
The search for a 15-year-old schoolgirl and a 42-year-old driver, missing for 25 days, ended in ended in tragedy as their bodies were found inside the Merkala forest in Kasaragod's Paivalike grama panchayat on Sunday.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm