ಬ್ರೇಕಿಂಗ್ ನ್ಯೂಸ್
08-08-20 12:08 pm Headline Karnataka News Network ದೇಶ - ವಿದೇಶ
ಜೊಹಾನ್ಸ್‌ಬರ್ಗ್: ಜಪಾನ್‌ನ ಎಂ.ವಿ.ವಕಾಶಿಯೊ ಎಂಬ ಹೆಸರಿನ ಹಡಗಿನಿಂದ ಇಂಧನ ಸೋರಿಕೆಯಾಗಿರುವುದು ತಿಳಿಯುತ್ತಿದ್ದಂತೆ ಮಾರಿಷಸ್ ಸರ್ಕಾರವು ಶುಕ್ರವಾರ ಪರಿಸರ ತುರ್ತು ಪರಿಸ್ಥಿತಿ ಘೋಷಿಸಿದೆ.
ಇತ್ತೀಚೆಗೆ ತನ್ನ ಆಗ್ನೇಯ ಕರಾವಳಿ ಮೂಲಕ ಸಾಗಿರುವ ವಕಾಶಿಯೊ ಹಡಗಿನಲ್ಲಿ ಸುಮಾರು 4,000 ಟನ್‌ಗಳಷ್ಟು ಇಂಧನವಿತ್ತು. ನಮ್ಮ ಪರಿಸರ ಪ್ರದೇಶದ ಸಮೀಪದಲ್ಲೇ ಇಂಧನ ಸೋರಿಕೆಯಾಗಿರುವುದು ಉಪಗ್ರಹ ಚಿತ್ರಗಳಿಂದ ಸ್ಪಷ್ಟವಾಗಿದೆ’ ಎಂದು ಮಾರಿಷಸ್ ಸರ್ಕಾರ ತಿಳಿಸಿದೆ.
ನೀರಿನಲ್ಲಿ ಅಪಾರ ಪ್ರಮಾಣದ ಇಂಧನ ಬೆರೆತಿದೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದೇ ನಮಗೆ ತೋಚುತ್ತಿಲ್ಲ. ಹೀಗಾಗಿ ಫ್ರಾನ್ಸ್ ಸರ್ಕಾರದ ನೆರವು ಕೋರಿದ್ದೇವೆ. ಆ ದೇಶದ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರನ್ ಅವರಿಗೂ ಮನವಿ ಮಾಡಿದ್ದೇವೆ’ ಎಂದು ಮಾರಿಷಸ್‌ನ ಪ್ರಧಾನ ಮಂತ್ರಿ ಪ್ರವಿಂದ್ ಜುಗ್ನಾಥ್ ತಿಳಿಸಿದ್ದಾರೆ.
ಇಂಧನ ಸೋರಿಕೆಯಿಂದ ಬ್ಲೂ ಬೇ ಮರಿನ್ ಪಾರ್ಕ್ ಹಾಗೂ ಇತರ ಪ್ರದೇಶಗಳ ನೀರು ರಾಸಾಯನಿಕಯುಕ್ತವಾಗಿದೆ. ನಾವೀಗ ಪರಿಸರ ಬಿಕ್ಕಟ್ಟು ಎದುರಿಸುತ್ತಿದ್ದೇವೆ’ ಎಂದು ಮಾರಿಷಸ್‌ನ ಪರಿಸರ ಸಚಿವ ಕ್ಯಾವಿ ರಮಣೊ ಹೇಳಿದ್ದಾರೆ.
ಈ ಹಡಗು ಜಪಾನ್‌ನ ಒಕಿಯೊ ಮಾರಿಟೈಮ್ ಕಾರ್ಪೊರೇಷನ್ ಆ್ಯಂಡ್ ನಾಗಸಾಕಿ ಶಿಪ್ಪಿಂಗ್ ಕಂಪನಿ ಲಿಮಿಟೆಡ್‌ಗೆ ಸೇರಿದ್ದಾಗಿದೆ. ಈ ಕಂಪನಿಯ ವಿರುದ್ಧ ನಿರ್ಲಕ್ಷ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಡಗು ಜುಲೈ 25ರಂದು ನಮ್ಮ ಆಗ್ನೇಯ ಕರಾವಳಿ ಭಾಗದಲ್ಲಿ ಸಂಚರಿಸಿದೆ’ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಡಗಿನಿಂದ ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಮತ್ತು ತೈಲ ಸೋರಿಕೆಯಾಗಿದ್ದು ಅದು ನೀರಿನಲ್ಲೂ ಬೆರೆತಿದೆ. ಇದರಿಂದ ಜೀವ ಸಂಕುಲಕ್ಕೆ ಅಪಾಯ ಎದುರಾಗಿದೆ. ಮಾರಿಷಸ್‌ನ ಆರ್ಥಿಕತೆ ಹಾಗೂ ಆಹಾರ ಭದ್ರತೆಯ ಮೇಲೆ ಇದು ಭೀಕರ ಪರಿಣಾಮ ಉಂಟುಮಾಡಲಿದೆ. ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ’ ಎಂದು ಗ್ರೀನ್‌ಪೀಸ್ ಆಫ್ರಿಕಾ ಸಂಸ್ಥೆಯ ಮ್ಯಾನೇಜರ್ (ಕ್ಲೈಮೇಟ್ ಆ್ಯಂಡ್ ಎನರ್ಜಿ) ಹ್ಯಾಪಿ ಖಾಂಬುಲೆ ಪ್ರಕಟಣೆಯಲ್ಲಿ ಹೇಳಿದ್ದಾರೆ.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
ಕೆಎಫ್ ಸಿ ಬಳಿಕ ಮಂಗಳೂರಿನಲ್ಲಿ ಎಂಎಫ್ ಸಿ ರೆಸ್ಟೋರೆಂ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm