ಬ್ರೇಕಿಂಗ್ ನ್ಯೂಸ್
08-08-24 02:54 pm HK News Desk ದೇಶ - ವಿದೇಶ
ಪ್ಯಾರಿಸ್, ಆಗಸ್ಟ್ 8: 2024ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಆಘಾತ ತಟ್ಟಿದೆ. ಒಲಿಂಪಿಕ್ಸ್‌ನಿಂದ ಅನರ್ಹಗೊಂಡು ವಿನೇಶ್ ಫೋಗಟ್ ಕುಸ್ತಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮತ್ತೊಬ್ಬರು ಭಾರತೀಯ ಕುಸ್ತಿಪಟುವನ್ನು ಪ್ಯಾರಿಸ್‌ನಿಂದ ಗಡಿಪಾರು ಮಾಡಲಾಗಿದೆ.
53 ಕೇಜಿ ವಿಭಾಗದಲ್ಲಿ ವಿನೇಶ್ ಫೋಗಟ್ ಬದಲಿಗೆ ಸ್ಪರ್ಧಿಸಿದ್ದ ಕುಸ್ತಿಪಟು ಅಂತಿಮ್ ಪಂಘಲ್ ಅವರು ತಮ್ಮ ಮಾನ್ಯತಾ ಗುರುತಿನ ಚೀಟಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗಾಗಿ ಅಶಿಸ್ತಿನ ವರ್ತನೆ ಮೇರೆಗೆ ಅವರನ್ನು ಗಡಿಪಾರು ಮಾಡಲು ಪ್ಯಾರಿಸ್ ಒಲಿಂಪಿಕ್ಸ್ ಸಮಿತಿ ನಿರ್ಧರಿಸಿದೆ. ಅಂತಿಮ್ ಫಂಘಲ್ ಮತ್ತು ಅವರ ಸಹಾಯಕ ಸಿಬಂದಿ ಭಾರತಕ್ಕೆ ಹಿಂತಿರುಗಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಹೇಳಿದೆ. ಇದಕ್ಕೂ ಮುನ್ನ ಬುಧವಾರ ನಡೆದ 53 ಕೆಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಅಂತಿಮ್ ಪಂಘಲ್ ಟರ್ಕಿಯ ಯೆಟ್‌ಗಿಲ್ ಝೆನೆಪ್ ವಿರುದ್ಧ 0-10 ಅಂತರದಲ್ಲಿ ಸೋತಿದ್ದರು.
ಸೋಲಿನ ಬಳಿಕ ತಾನು ಉಳಿದುಕೊಂಡಿದ್ದ ಒಲಿಂಪಿಕ್ ಕ್ರೀಡಾ ಗ್ರಾಮಕ್ಕೆ ಪ್ರವೇಶಿಸಲು ಅಂತಿಮ್‌ಗೆ ನೀಡಲಾಗಿದ್ದ ಅಧಿಕೃತ ಐಡಿ ಕಾರ್ಡ್ ಅನ್ನು ತನ್ನ ಸಹೋದರಿ ನಿಶಾ ಅವರಿಗೆ ನೀಡಿದ್ದಾರೆ. ನಿಯಮದ ಪ್ರಕಾರ ಒಲಿಂಪಿಕ್ ಗೇಮ್ಸ್ ವಿಲೇಜ್‌ಗೆ ಆಟಗಾರರಲ್ಲದವರು ಪ್ರವೇಶಿಸುವಂತಿಲ್ಲ. ಹೀಗಾಗಿ ಅಂತಿಮ್ ಅವರನ್ನು ಒಲಿಂಪಿಕ್ಸ್ ಗ್ರಾಮದಿಂದ ಗಡಿಪಾರು ಮಾಡಲು ಒಲಿಂಪಿಕ್ಸ್ ಸಮಿತಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಅಂತಿಮ್ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ ಸೋತ ನಂತರ ಗೇಮ್ಸ್ ವಿಲೇಜ್ ತೊರೆದು ತನ್ನ ತರಬೇತುದಾರ ಮತ್ತು ಸಹೋದರಿ ತಂಗಿದ್ದ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಅವರು ತನ್ನ ಅಧಿಕೃತ ಐಡಿ ಕಾರ್ಡ್ ಅನ್ನು ಸಹೋದರಿ ನಿಶಾ ಅವರಿಗೆ ನೀಡಿ ಗೇಮ್ಸ್ ವಿಲೇಜ್‌ಗೆ ತೆರಳಿ ಬ್ಯಾಗ್ ತರುವಂತೆ ಸೂಚಿಸಿದ್ದರು. ಅದರಂತೆ ಗೇಮ್ಸ್ ವಿಲೇಜ್‌ನಿಂದ ಹೊರ ಬರುತ್ತಿದ್ದಾಗ ನಿಶಾ ಭದ್ರತಾ ಸಿಬ್ಬಂದಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಪಂಘಲ್ ಅವರ ಇಡೀ ಪರಿವಾರವನ್ನೇ ಗಡೀಪಾರು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ವಿನೇಶ್ ಫೋಗಟ್ 53 ಕೇಜಿ ವಿಭಾಗದಲ್ಲಿ ಆಡುತ್ತಿದ್ದರು. 2022ರ ವಿಶ್ವ ಚಾಂಪ್ಯನ್ ಶಿಪ್ ನಲ್ಲಿಯೂ ವಿನೇಶ್ 53 ಕೇಜಿ ವಿಭಾಗದಲ್ಲಿ ಕಂಚು ಪಡೆದಿದ್ದರು. ಆದರೆ ಪ್ಯಾರಿಸ್ ಒಲಿಂಪಿಕ್ಸ್ ಗೆ ಸಿದ್ಧತೆ ನಡೆಸುತ್ತಿದ್ದ ವಿನೇಶ್ ಗೆ ಭಾರತೀಯ ಕುಸ್ತಿ ಫೆಡರೇಶನ್ ಒಪ್ಪಿಗೆ ನೀಡಿರಲಿಲ್ಲ. ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ ಸಿಂಗ್ ವಿರುದ್ಧ ವಿನೇಶ್ ಫೋಗಟ್ ಮತ್ತು ಇತರ ಕ್ರೀಡಾಳುಗಳು ಪ್ರತಿಭಟನೆ ನಡೆಸಿದ ಬಳಿಕ 50 ಕೇಜಿಯೋ, 53 ಕೇಜಿಯೊ ಎನ್ನುವ ಜಿಜ್ಞಾಸೆ ಉಂಟಾಗಿತ್ತು. ಕೊನೆಗೆ, ಆಕೆಯನ್ನು 50 ಕೇಜಿ ವಿಭಾಗದಲ್ಲಿ ಇರಿಸಲಾಗಿತ್ತು. 2016ರ ಒಲಿಂಪಿಕ್ಸ್ ನಲ್ಲಿ ವಿನೇಶ್ 48 ಕೇಜಿ ವಿಭಾಗದಲ್ಲಿ ಆಡಿದ್ದರು. ಈ ಬಾರಿ ವಿನೇಶ್ ಫೋಗಟ್ ನಿರೀಕ್ಷಿಸಿದ್ದ 53 ಕೇಜಿ ವಿಭಾಗಕ್ಕೆ ಅಂತಿಮ್ ಪಂಘಲ್ ಅವರನ್ನು ತರಲಾಗಿತ್ತು. ಕುಸ್ತಿ ಫೆಡರೇಶನ್ ಎಡವಟ್ಟಿಗೆ ವಿನೇಶ್ ಬೆಲೆ ತೆರುವಂತಾಗಿದೆ.
Indian wrestler Vinesh Phogat on Thursday (August 8, 2024) announced her retirement from wrestling a day after she was disqualified from the 50kg category Paris Olympics finals. The seasoned wrestler was disqualified after weighing 100 grams more than the permissible limit in the morning weigh-in ahead of the final.
02-05-25 01:40 pm
Bangalore Correspondent
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:10 pm
Mangalore Correspondent
Udupi crime, Attempt, Suhas Shetty Murder: ಉಡ...
02-05-25 12:44 pm
Suhas Shetty Murder, Liquor Ban: ಸುಹಾಸ್ ಶೆಟ್ಟ...
02-05-25 12:23 pm
Suhas Shetty Murder, Bajpe, Mangalore: ಟಾರ್ಗೆ...
02-05-25 03:52 am
Suhas Shetty murder, Mangalore Bandh: ಸುಹಾಸ್...
02-05-25 03:29 am
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm