ಬ್ರೇಕಿಂಗ್ ನ್ಯೂಸ್
30-01-24 02:47 pm HK News Desk ದೇಶ - ವಿದೇಶ
ತಿರುವನಂತಪುರ, ಜ.30: ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್ ಅವರನ್ನು ಪತ್ನಿ ಮಕ್ಕಳ ಎದುರಲ್ಲೇ ಭೀಭತ್ಸ ರೀತಿಯಲ್ಲಿ ಕೊಲೆಗೈದ ಪ್ರಕರಣದಲ್ಲಿ ಕೇರಳದ ಆಲಪ್ಪುಝ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ 15 ಮಂದಿ ಪಿಎಫ್ಐ- ಎಸ್ಡಿಪಿಐ ಗೂಂಡಾಗಳಿಗೆ ಮರಣ ದಂಡನೆ ವಿಧಿಸಿದೆ.
ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರನ್ನು 2021ರ ಡಿಸೆಂಬರ್ 19ರಂದು ಆಳಪ್ಪುಝ ನಗರದಲ್ಲಿ ಮನೆಯಲ್ಲಿದ್ದಾಗಲೇ ಪತ್ನಿ, ತಾಯಿ ಮತ್ತು ಅಪ್ರಾಪ್ತ ಮಕ್ಕಳ ಎದುರಲ್ಲೇ ಗೂಂಡಾಗಳು ತಲವಾರಿನಿಂದ ಕೊಚ್ಚಿ ಕೊಲೆಗೈದಿದ್ದರು. ಪ್ರಕರಣದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಶ್ರೀದೇವಿ 15 ಮಂದಿ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದಾರೆ. ಎಲ್ಲ ಆರೋಪಿಗಳು ನಿಷೇಧಿತ ಸಂಘಟನೆ ಪಿಎಫ್ಐ ಮತ್ತು ಎಸ್ಡಿಪಿಐ ಪಕ್ಷದ ಕಾರ್ಯಕರ್ತರಾಗಿದ್ದರು.
ನೈಝಮ್, ಅಜ್ಮಲ್, ಅನೂಪ್, ಮೊಹಮ್ಮದ್ ಅಸ್ಲಾಮ್, ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಸಫರುದ್ದೀನ್, ಮಾನ್ಶಾದ್, ಜಸೀಬ್ ರಾಜಾ, ನವಾಸ್, ಸಮೀರ್, ನಾಝೀರ್, ಅಬ್ದುಲ್ ಕಲಾಂ, ಝಾಕೀರ್ ಹುಸೇನ್, ಶಾಜಿ ಮತ್ತು ಶೆರ್ನಾಸ್ ಅಶ್ರಫ್ ಶಿಕ್ಷೆಗೊಳಗಾದ ಆರೋಪಿಗಳು. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಂಜಿತ್ ಅವರ ಪತ್ನಿ ಲೀಶಾ, ಅದನ್ನು ಕೇವಲ ಕೊಲೆಯೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇದು ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಒಂದು. ನಮ್ಮ ಕಣ್ಣೆದುರಲ್ಲೇ ನನ್ನ ಪತಿಯನ್ನು ಬರ್ಬರವಾಗಿ ಕಡಿದು ಹತ್ಯೆ ಮಾಡಿದ್ದರು ಎಂದು ಕಣ್ಣೀರು ಹಾಕಿದ್ದಾರೆ.

ಪಿಎಫ್ಐ ಹಿಟ್ ಲಿಸ್ಟಲ್ಲಿತ್ತು ರಂಜಿತ್ ಹೆಸರು ಪೊಲೀಸರ ತನಿಖೆ ಸಂದರ್ಭದಲ್ಲಿ ಪಿಎಫ್ಐ- ಎಸ್ಡಿಪಿಐ ಹಿಟ್ ಲಿಸ್ಟ್ ಮಾಡಿರುವುದು ಪತ್ತೆಯಾಗಿತ್ತು. ಬಂಧಿತ ಅನೂಪ್ ಬಳಿ ಸಿಕ್ಕಿದ್ದ ಮೊಬೈಲಿನಲ್ಲಿ ಹಿಂದು ಸಂಘಟನೆಗಳ ನಾಯಕರನ್ನು ಕೊಲ್ಲಲು ಲಿಸ್ಟ್ ಮಾಡಿರುವುದು ಪತ್ತೆಯಾಗಿತ್ತು. ವೃತ್ತಿಯಲ್ಲಿ ವಕೀಲರೂ ಆಗಿದ್ದ ರಂಜಿತ್ ಶ್ರೀನಿವಾಸನ್ ಈ ಲಿಸ್ಟ್ ನಲ್ಲಿ ಮೊದಲಿಗರಾಗಿದ್ದರು. ಡಿ.18ರಂದು ಸಂಜೆಯ ವೇಳೆಗೆ ಎಸ್ಡಿಪಿಐ ಲೀಡರ್ ಕೆ.ಎಸ್.ಶಾನ್ ಎಂಬ ವ್ಯಕ್ತಿಯನ್ನು ಮಾನಂಜೇರಿ ಎಂಬಲ್ಲಿ ವೈಯಕ್ತಿಕ ದ್ವೇಷದಲ್ಲಿ ಹತ್ಯೆ ಮಾಡಲಾಗಿತ್ತು. ಅದರ ಪ್ರತೀಕಾರಕ್ಕಾಗಿ, ಅಲ್ಲಿಂದ ಹತ್ತು ಕಿಮೀ ದೂರದಲ್ಲಿದ್ದ ರಂಜಿತ್ ಶ್ರೀನಿವಾಸನ್ ಮನೆಗೆ ಮರುದಿನ ಬೆಳಗ್ಗೆ 6 ಗಂಟೆ ವೇಳೆಗೆ ನುಗ್ಗಿದ್ದ ಗೂಂಡಾಗಳು ಹೆಂಡ್ತಿ, ಮಕ್ಕಳ ಎದುರಲ್ಲೇ ರಂಜಿತ್ ಅವರನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದರು. ಆರು ಬೈಕ್ ಗಳಲ್ಲಿ ಬಂದಿದ್ದ 12 ಮಂದಿ ಯುವಕರು ಕೊಲೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ರಂಜಿತ್ ಶ್ರೀನಿವಾಸನ್ 2016ರ ಅಸೆಂಬ್ಲಿ ಚುನಾವಣೆಯಲ್ಲಿ ಆಳಪ್ಪುಝ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದರು.
15 ಮಂದಿ ಆರೋಪಿಗಳಲ್ಲಿ ಎಂಟು ಮಂದಿ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದರು. ಇತರರು ಕೊಲೆಗೆ ಸಹಕಾರ ನೀಡಿದ್ದರು ಎನ್ನುವುದು ತನಿಖೆಯಲ್ಲಿ ಕಂಡುಬಂದಿತ್ತು. ಶಾನ್ ಕೊಲೆಯಾದ ಕೆಲವೇ ಗಂಟೆಗಳಲ್ಲಿ ಸುಲಭದ ಗುರಿಯಾಗಿ ಸಿಕ್ಕಿದ್ದ ರಂಜಿತ್ ಅವರನ್ನು ಕೊಲೆ ಮಾಡಿರುವುದಾಗಿ ಪೊಲೀಸರು ಕೋರ್ಟಿನಲ್ಲಿ ದೋಷಾರೋಪ ಮಾಡಿದ್ದರು. ಮರಣ ದಂಡನೆ ಶಿಕ್ಷೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಂಜಿತ್ ಅವರ ಪತ್ನಿ ಲೀಶಾ, ನಾವು 770 ದಿನಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೆವು. ಕಾದು ಕುಳಿತಿದ್ದಕ್ಕೆ ಕಡೆಗೂ ಬೆಲೆ ಬಂತು ಅನಿಸುತ್ತಿದೆ. ಪೊಲೀಸರು ಮತ್ತು ನಮ್ಮ ಪರವಾಗಿ ವಾದಿಸಿದ ವಕೀಲರಿಗೆ ಅಭಿನಂದನೆ ಹೇಳುತ್ತೇನೆ ಎಂದಿದ್ದಾರೆ. ಕೋರ್ಟ್ ವಿಚಾರಣೆ ವೇಳೆ ಆರೋಪಿಗಳು ಕೊಲೆ ನಡೆಸುವುದಕ್ಕಾಗಿ ತರಬೇತಿ ಪಡೆದಿದ್ದಾರೆ. ಅತ್ಯಂತ ಅಮಾನುಷ ರೀತಿಯಲ್ಲಿ ಪತ್ನಿ, ಮಕ್ಕಳ ಎದುರಲ್ಲೇ ಹತ್ಯೆ ಮಾಡಿದ್ದಾರೆ. ಅತ್ಯಂತ ಹೇಯ ಮತ್ತು ಅಪರೂಪದ ಪ್ರಕರಣ ಆಗಿರುವುದರಿಂದ ಗರಿಷ್ಠ ಶಿಕ್ಷೆ ನೀಡುವಂತೆ ಸರಕಾರಿ ವಕೀಲರು ವಾದಿಸಿದ್ದರು. ಹತ್ಯೆ ಘಟನೆಗೆ ರಂಜಿತ್ ಅವರ ತಾಯಿ, ಪತ್ನಿ ಮತ್ತು ತಂಗಿ ಸಾಕ್ಷಿಯಾಗಿದ್ದರು.
The Alappuzha court in Kerala handed over a death sentence to all the 15 PFI activists, who were convicted of murdering of RSS activist Ranjith Sreenivasan. On December 19, 2021, the BJP OBC Morcha state secretary, was brutally attacked and allegedly killed in his home, in front of his family by PFI activists.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am