ಬ್ರೇಕಿಂಗ್ ನ್ಯೂಸ್
16-11-20 12:02 pm Headline Karnataka News Network ದೇಶ - ವಿದೇಶ
ಇಥಿಯೋಪಿಯಾ, ನವೆಂಬರ್ 16: ಇಥಿಯೋಪಿಯಾದ ಪೂರ್ವ ಭಾಗದಲ್ಲಿ ಶನಿವಾರ ರಾತ್ರಿ ಬಸ್ ಮೇಲೆ ದಾಳಿ ನಡೆಸಿದ ಬಂದೂಕುಧಾರಿಗಳು ಕನಿಷ್ಠ 34 ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ.
ಉತ್ತರ ಭಾಗದಲ್ಲಿ ಸೇನಾ ಪಡೆಯು ಸಮರದಲ್ಲಿ ನಿರತರಾಗಿರುವ ನಡುವೆ ಇಥಿಯೋಪಿಯಾದಲ್ಲಿ ಮತ್ತಷ್ಟು ಭದ್ರತೆಯ ಕುರಿತಾದ ಭೀತಿ ಆವರಿಸಿದೆ. ಬೆನಿಶಂಗುಲ್-ಗುಮುಜ್ ಪ್ರಾಂತ್ಯದಲ್ಲಿ ಪ್ರಯಾಣಿಕ ಬಸ್ ಮೇಲೆ ನಡೆದ ಹೇಯ ದಾಳಿ ಇದು ಎಂದು ಇಥಿಯೋಪಿಯನ್ ಮಾನವ ಹಕ್ಕುಗಳ ಆಯೋಗ ತಿಳಿಸಿದ್ದು, ಘಟನೆಯಲ್ಲಿ ಬಲಿಯಾದವರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದಿದೆ. ಈ ಭಾಗದ ಇತರೆ ಸ್ಥಳಗಳಲ್ಲಿಯೂ ಇದೇ ರೀತಿಯ ದಾಳಿಗಳು ನಡೆದ ವರದಿಯಾಗಿದ್ದು, ಜನರಲ್ಲಿ ತೀವ್ರ ಭಯ ಉಂಟಾಗಿದೆ ಎಂದು ಅದು ಹೇಳಿದೆ.
ಬೆನಿಶಂಗುಲ್-ಗುಮುಜ್ ಪ್ರಾಂತ್ಯದಲ್ಲಿ ಪದೇ ಪದೇ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಾದೇಶ ಮತ್ತು ಫೆಡರಲ್ ಆಡಳಿತವು ಇಲ್ಲಿ ಭದ್ರತೆ ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ಡೇನಿಯಲ್ ಬೆಕೆಲೆ ಒತ್ತಾಯಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಇದೇ ಜಾಗದಲ್ಲಿ ನಡೆದಿದ್ದ ಸಶಸ್ತ್ರ ಭಯೋತ್ಪಾದಕರು ನಡೆಸಿದ ದಾಳಿಗೆ ಕನಿಷ್ಠ 45 ಮಂದಿ ಬಲಿಯಾಗಿದ್ದರು.
ಇಥಿಯೋಪಿಯಾ ಸರ್ಕಾರ ಮತ್ತು ದೇಶದ ಉತ್ತರ ಭಾಗದ ಟಿಗ್ರೇ ಪ್ರದೇಶದ ನಡುವೆ 12 ದಿನಗಳಿಂದ ಯುದ್ಧ ನಡೆಯುತ್ತಿದೆ. ಈ ಸಂಘರ್ಷವು ಇತರೆ ಮೂಲ ಗುಂಪುಗಳನ್ನು ಮತ್ತಷ್ಟು ಉದ್ರೇಕಿಸುವ ಮೂಲಕ ಇನ್ನಷ್ಟು ಹಿಂಸಾಚಾರಕ್ಕೆ ಕಾರಣವಾಗಬಹುದು ಎಂಬ ಆತಂಕ ಉಂಟಾಗಿದೆ. ಟಿಗ್ರೇ ಪ್ರದೇಶದಲ್ಲಿ ಸೇನಾ ಪಡೆಗಳನ್ನು ಮರು ನಿಯೋಜನೆ ಮಾಡುತ್ತಿರುವುದು ಇತರೆ ಪ್ರದೇಶಗಳಲ್ಲಿ ಜನರು ಭದ್ರತೆಯಿಂದ ವಂಚಿತರಾಗುವಂತೆ ಮಾಡಿದೆ.
“The latest attack is a grim addition to the human cost which we bear collectively." - @DanielBekele@EthioHRC is saddened to learn of gruesome attack on passenger bus heading from Wonbera to Chagni in Benishangul-Gumuz on Nov 14. Fatalities estimated at 34, but likely to rise.
— Ethiopian Human Rights Commission (@EthioHRC) November 15, 2020
Gunmen have killed dozens of people in a “gruesome” attack on a bus carrying civilians in western Ethiopia, according to the country’s human rights body.
06-05-25 01:35 pm
HK News Desk
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 04:02 pm
Mangalore Correspondent
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm