ಬ್ರೇಕಿಂಗ್ ನ್ಯೂಸ್
31-10-20 12:50 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 31: ಮತಾಂತರಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೇವಲ ಮದುವೆಯ ಕಾರಣಕ್ಕೆ ಮತಾಂತರ ಆಗುವುದನ್ನು ಒಪ್ಪಲಾಗಲ್ಲ. ಸಮಾಜಕ್ಕೆ ಸ್ವೀಕಾರಾರ್ಹವಲ್ಲ ಎಂದು ಪ್ರಕರಣ ಒಂದಕ್ಕೆ ಸಂಬಂಧಿಸಿ ಅಭಿಪ್ರಾಯ ಪಟ್ಟಿದೆ. ತಮಗೆ ಪೊಲೀಸರ ರಕ್ಷಣೆ ನೀಡಬೇಕೆಂದು ಹೇಳಿ ವಿವಾಹಿತ ದಂಪತಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ಪಟ್ಟಿದ್ದು, ದಂಪತಿ ಸಲ್ಲಿಸಿದ್ದ ಅರ್ಜಿಯನ್ನ ವಜಾಗೊಳಿಸಿದೆ.
ನ್ಯಾಯಾಧೀಶ ಮಹೇಶ್ ಚಂದ್ರ ತ್ರಿಪಾಠಿ, 2014ರ ತಮ್ಮದೇ ಕೋರ್ಟಿನ ತೀರ್ಪನ್ನು ಉಲ್ಲೇಖಿಸಿ ಈ ಅಭಿಪ್ರಾಯ ನೀಡಿದ್ದಾರೆ. ಯುವತಿ ಮುಸ್ಲಿಂ ಹಾಗೂ ಯುವಕ ಹಿಂದು ಎನ್ನುವುದು ತಿಳಿದಿದ್ದು, ಯುವತಿ ತಿಂಗಳ ಹಿಂದೆ ಮತಾಂತರ ಆಗಿರುವುದೂ ತಿಳಿದಿದೆ. ಇಂಥ ಸಂದರ್ಭದಲ್ಲಿ ಕೇವಲ ಮದುವೆಯ ಉದ್ದೇಶಕ್ಕೆ ಮತಾಂತರ ಆಗಿರುವುದು ಕಂಡುಬರುತ್ತದೆ. ಇದನ್ನು ಸ್ವೀಕಾರ ಮಾಡಲಾಗುವುದಿಲ್ಲ ಎಂದು ಹೇಳಿದೆ. ಅಲ್ಲದೆ, ಇದು ಸಂವಿಧಾನದ 226ನೇ ವಿಧಿ ಅನ್ವಯ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.


2014ರಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಅಲಹಾಬಾದ್ ಕೋರ್ಟ್ ಮದುವೆಯಾಗುವ ಕಾರಣಕ್ಕೆ ಮತಾಂತರ ಆಗುವುದು ಸ್ವೀಕಾರಾರ್ಹವಲ್ಲ ಎಂದು ತೀರ್ಪು ನೀಡಿತ್ತು. ಅಂದಿನ ಪ್ರಕರಣದಲ್ಲಿ ಯುವತಿ ಹಿಂದುವಾಗಿದ್ದು, ಯುವಕ ಮುಸ್ಲಿಂ ಆಗಿದ್ದ. ಯುವತಿ ಮತಾಂತರ ಆದ ತಿಂಗಳ ಬಳಿಕ ಮದುವೆಯಾಗಿ, ಕೋರ್ಟಿನಲ್ಲಿ ರಕ್ಷಣೆಗಾಗಿ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯನ್ನು ವಜಾಗೊಳಿಸಿ, ಇದೇ ರೀತಿಯ ತೀರ್ಪು ನೀಡಿತ್ತು.
ಅಲ್ಲದೆ, ಇಸ್ಲಾಂ ಧರ್ಮದ ಹುಡುಗನ ಜೊತೆ ಸ್ನೇಹ ಇದ್ದ ಕಾರಣಕ್ಕೆ ಇಸ್ಲಾಂ ಬಗ್ಗೆ ನಂಬಿಕೆ ಇಲ್ಲದ ಯುವತಿ ಕೇವಲ ಮದುವೆಯ ಕಾರಣಕ್ಕೆ ತನ್ನ ಧರ್ಮ ಬದಲಿಸುವುದು ಸರಿಯೇ ಎಂದು ಪ್ರಶ್ನೆ ಮಾಡಿತ್ತು.
Religious conversion only for the purpose of marriage is unacceptable, the Allahabad high court has dismissed a petition filed by an interfaith couple seeking directions to police and the girl’s father not to interfere in their married life.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
12-01-26 05:01 pm
Mangaluru Staffer
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm