ಬ್ರೇಕಿಂಗ್ ನ್ಯೂಸ್
10-10-20 04:55 pm Headline Karnataka News Network ದೇಶ - ವಿದೇಶ
ಅಮೆರಿಕ, ಅಕ್ಟೋಬರ್ 10: ವಿಶ್ವದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದಾದ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಡೀನ್ ಆಗಿ ಭಾರತ ಮೂಲದ ಶ್ರೀಕಾಂತ್ ದಾತಾರ್ ಅವರನ್ನು ಹಾರ್ವರ್ಡ್ ವಿವಿ ನೇಮಕ ಮಾಡಿದೆ.
ಪ್ರಸ್ತುತ ಆರ್ಥರ್ ಲೊವೆಸ್ ಡಿಕಿನ್ಸನ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪ್ರಾಧ್ಯಾಪಕ ಮತ್ತು ಎಚ್‌ಬಿಎಸ್‌ನಲ್ಲಿ ವಿಶ್ವವಿದ್ಯಾಲಯ ವ್ಯವಹಾರಗಳ ಹಿರಿಯ ಸಹಾಯಕ ಡೀನ್ ಆಗಿರುವ ದತಾರ್ ಜನವರಿ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ವಿಸ್ತೃತ ಅಂತಾರಾಷ್ಟ್ರೀಯ ದೃಷ್ಟಿಕೋನ, ವ್ಯವಹಾರ ಕ್ಷೇತ್ರದಲ್ಲಿ ದಶಕದ ಕಾಲ ತೊಡಗಿಸಿಕೊಂಡ ಅನುಭವ, ವೈವಿಧ್ಯಮಯ ಹಾಗೂ ಎಲ್ಲರ ಪಾಲ್ಗೊಳ್ಳುವಿಕೆಯ ಎಚ್‌ಬಿಎಸ್ ಸಮೂಹವನ್ನು ಸೃಷ್ಟಿಸುವಲ್ಲಿ ಬದ್ಧತೆ ಹೊಂದಿದ ಶ್ರೀಕಾಂತ್ ಡೀನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ" ಎಂದು ಹಾರ್ವರ್ಡ್ ವಿವಿ ಅಧ್ಯಕ್ಷ ಲಾರೆನ್ಸ್ ಬಕಾವ್ ತಿಳಿಸಿದ್ದಾರೆ.
ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನ 112 ವರ್ಷಗಳ ಇತಿಹಾಸದಲ್ಲಿ 11ನೇ ಡೀನ್ ಆಗಿ ದಾತಾರ್ ನೇಮಕವಾಗಿದ್ದು ,ಒಂದರ ಹಿಂದೆ ಮತೊಬ್ಬ ಭಾರತೀಯ ಈ ಹುದ್ದೆಯನ್ನು ಅಲಂಕರಿಸುತ್ತಿರುವುದು ಇದೆ ಮೊದಲು.
ಕಳೆದ ನವೆಂಬರ್ ನಲ್ಲಿ 10 ವರ್ಷಗಳ ವಿಶೇಷ ಸೇವೆಯ ನಂತರ 2020 ರ ಜೂನ್ ಅಂತ್ಯದಲ್ಲಿ ಡೀನ್ ಶಿಪ್ ಮುಕ್ತಾಯಗೊಳಿಸುವ ಯೋಜನೆಯನ್ನು ಪ್ರಕಟಿಸಿದ್ದ ಭಾರತ ಮೂಲದ ನಿತಿನ್ ನೊಹ್ರಿಯಾ, ಕೋವಿಡ್-19 ಕಾರಣದಿಂದಾಗಿ ಡಿಸೆಂಬರ್ ವರೆಗೂ ಮುಂದುವರೆಯಂತೆ ಒಪ್ಪಿಕೊಂಡಿದ್ದರು.
ಭಾರತ ಮೂಲದ ದಾತಾರ್, ಸ್ಟಾನ್‌ಫೋರ್ಡ್ ವಿವಿಯ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಬಿಸಿನೆಸ್‌ನಿಂದ 1996ರಲ್ಲಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಸೇರಿದ್ದರು. ವೆಚ್ಚ ನಿರ್ವಹಣೆ ಮತ್ತು ಕಾರ್ಪೊರೇಟ್ ಆಡಳಿತ ಕ್ಷೇತ್ರದಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಡಾಟಾ ಸೈನ್ಸ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ವಿನೂತನ ಸಮಸ್ಯೆ ಬಗೆಹರಿಸುವಿಕೆ ಮತ್ತು ಮೆಷಿನ್ ಲರ್ನಿಂಗ್ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ನೊರ್ವಾಟೀಸ್ ಎಜಿ ಮತ್ತು ಟಿ-ಮೊಬೈಲ್ ಯುಎಸ್ ಇಂಕ್ ಸೇರಿದಂತೆ ಹಲವು ಕಂಪನಿಗಳ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ.
Srikant Datar, Professor of Business Administration and the senior associate Dean for University Affairs at Harvard Business School (HBS), will become the second consecutive dean hailing from India to lead the prestigious 112-year-old institution.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm