ಬ್ರೇಕಿಂಗ್ ನ್ಯೂಸ್
08-10-20 07:31 pm Headline Karnataka News Network ದೇಶ - ವಿದೇಶ
ಮುಂಬೈ, ಅಕ್ಟೋಬರ್ 8: ಸುಶಾಂತ್ ಸಿಂಗ್ ಸಾವಿನ ಬಗ್ಗೆ ಆತ್ಮಹತ್ಯೆಯಲ್ಲ, ಕೊಲೆಯೆಂದು ಸುದ್ದಿ ಮಾಡಿ ಮುಖಭಂಗಕ್ಕೀಡಾಗಿರುವ ರಿಪಬ್ಲಿಕ್ ಟಿವಿ ವಿರುದ್ಧ ಮುಂಬೈ ಪೊಲೀಸರೇ ತಿರುಗಿ ಬಿದ್ದಿದ್ದಾರೆ. ರಿಪಬ್ಲಿಕ್ ಸೇರಿದಂತೆ ಮೂರು ಟಿವಿ ವಾಹಿನಿಗಳು ಟಿಆರ್ ಪಿ ಹೆಚ್ಚಿಸಿಕೊಂಡು ಆದಾಯ ಪಡೆದುಕೊಳ್ಳುವುದಕ್ಕಾಗಿ ತಂತ್ರ ಹೂಡಿದ್ದರು. ಮೋಸದ ಜಾಲದ ಮೂಲಕ ಮನೆ, ಮನೆಗೆ ತಮ್ಮ ಎಕ್ಸಿಕ್ಯೂಟಿವ್ ಗಳನ್ನು ಕಳಿಸಿ ಬಡವರಿಗೆ ಹಣಕೊಟ್ಟು ಟಿಆರ್ ಪಿ ಹೆಚ್ಚಿಸಿಕೊಳ್ಳುತ್ತಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮುಂಬೈ ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್, ಅರ್ನಾಬ್ ಗೋಸ್ವಾಮಿ ಒಡೆತನದ ರಿಪಬ್ಲಿಕ್ ಟಿವಿ, ಮರಾಠಿ ಭಾಷೆಯ ಫ್ಯಾಕ್ಟ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ವಾಹಿನಿಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಮರಾಠಿ ಟಿವಿ ವಾಹಿನಿಗಳ ಇಬ್ಬರು ಮಾಲೀಕರನ್ನು ಬಂಧಿಸಲಾಗಿದೆ. ರಿಪಬ್ಲಿಕ್ ಟಿವಿ ಡೈರೆಕ್ಟರ್ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸುಳ್ಳು ಸುದ್ದಿಗಳನ್ನು ಪ್ರಚಾರ ನೀಡುವುದಕ್ಕಾಗಿ ಮತ್ತು ತಮ್ಮದೇ ಚಾನೆಲ್ ಹಾಕುವಂತೆ ಬಡ ಮನೆಗಳ ಮಂದಿಗೆ ಹಣ ಕೊಟ್ಟು ಪ್ರೇರಿಸುತ್ತಿದ್ದರು. ಈ ಮೂಲಕ ಟಿಆರ್ ಪಿ ಹೆಚ್ಚಿರುವುದಾಗಿ ತೋರಿಸಿಕೊಂಡು ಹೆಚ್ಚು ಆದಾಯ ಬರುವ ಜಾಹೀರಾತು ಪಡೆಯುತ್ತಿದ್ದರು. ಈ ಮೂಲಕ ಹೆಚ್ಚು ಪಡೆದಿದ್ದು ತನಿಖೆಯಲ್ಲಿ ದೃಢ ಪಟ್ಟರೆ ವಾಹಿನಿಗಳ ಖಾತೆಯನ್ನು ಸೀಝ್ ಮಾಡುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ, ಮುಂಬೈ ಪೊಲೀಸ್ ಕಮಿಷನರ್ ಸುಳ್ಳು ಮಾಹಿತಿಗಳನ್ನು ಹೇಳುತ್ತಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
Fake TRP racket busted! Names republic TV as one of the 3 channels under scanner. People paid off to manipulate viewership numbers. 2 Accused arrested
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm