ಬ್ರೇಕಿಂಗ್ ನ್ಯೂಸ್
08-10-20 04:09 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್. 08 : ಕೊರೊನಾ ಸೋಂಕಿನಿಂದಾಗಿ ಲಾಕ್ಡೌನ್ ಮಾಡಿದ್ದು ಜಗತ್ತಿನಾದ್ಯಂತ ಜನರ ಸಂಕಷ್ಟಕ್ಕೂ ಕಾರಣವಾಗಿತ್ತು. ಬಹುತೇಕ ದೇಶಗಳಲ್ಲಿ ಜನಸಾಮಾನ್ಯರು ಉದ್ಯೋಗ ಇಲ್ಲದೆ, ಊಟಕ್ಕೂ ಕಷ್ಟಪಡುವ ಸ್ಥಿತಿ ಎದುರಾಗಿತ್ತು. ಇದೇ ಹಿನ್ನೆಲೆಯಲ್ಲಿ ಈಗ ವರ್ಲ್ಡ್ ಬ್ಯಾಂಕ್ ಎಚ್ಚರಿಕೆ ವರದಿ ನೀಡಿದ್ದು, ಕೊರೊನಾ ಕಾರಣದಿಂದ ಲಕ್ಷಾಂತರ ಮಂದಿ ಮಧ್ಯಮ ವರ್ಗದ ಜನರು ಬಡತನ ರೇಖೆಗಿಂತ ಕೆಳಗೆ ಬರಲಿದ್ದಾರೆ. ಇದರಿಂದ ಜಗತ್ತಿನಲ್ಲಿ ಹೊಸ ರೀತಿಯ ಬಡವರು ಸೃಷ್ಟಿಯಾಗಲಿದ್ದಾರೆ ಎಂದು ಎಚ್ಚರಿಸಿದೆ.
ಕೊರೊನಾ ಸೋಂಕಿನ ಕಾರಣದಿಂದಾಗಿ ಈ ವರ್ಷ ಜಗತ್ತಿನಲ್ಲಿ 88ರಿಂದ 115 ಮಿಲಿಯನ್ ಜನರು ಬಡತನದಿಂದ ಕಷ್ಟಕ್ಕೆ ಸಿಲುಕಲಿದ್ದಾರೆ. ಈ ಮಂದಿ ದಿನಕ್ಕೆ 1.90 ಡಾಲರ್ ಗಿಂತ ಹೆಚ್ಚು ಖರ್ಚು ಮಾಡಲು ಸಾಧ್ಯವಾಗಲ್ಲ ಎಂದು ವಿಶ್ವ ಬ್ಯಾಂಕ್ ಪ್ರಕಟಿಸಿರುವ ವರದಿ ತಿಳಿಸಿದೆ.
ಈ ಪೈಕಿ ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ಖಂಡದ ಸೋಂಕು ಪೀಡಿತ ದೇಶಗಳಲ್ಲಿ ಜನರು ಹೆಚ್ಚು ಸಂಕಷ್ಟಕ್ಕೀಡಾಗಲಿದ್ದಾರೆ. ಮೇಲೆ ಹೇಳಿದ ಅಂದಾಜು ಸಂಖ್ಯೆಯಲ್ಲಿ 80 ಶೇಕಡಾ ಜನ ಬಡತನದಿಂದ ನಲುಗಲಿದ್ದಾರೆ ಎಂದು ವರದಿಯಲ್ಲಿ ಹೇಳಿದೆ. ಈ ದೇಶಗಳ ಬಹುತೇಕ ಜನರು ಕಳೆದ ಎರಡು ದಶಕದಲ್ಲಿ ಸ್ವಲ್ಪಮಟ್ಟಿಗೆ ಬಡತನ ಸಂಕಷ್ಟದಿಂದ ಮೇಲೆ ಬಂದಿದ್ದರು. ವಿಶ್ವರಾಷ್ಟ್ರಗಳ ಪ್ರಗತಿಯ ನಡುವೆ ಈ ಭಾಗದ ಬಡ ರಾಷ್ಟ್ರಗಳು ಕೂಡ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದವು. ಆದರೆ, ಈಗ ಕೊರೊನಾ ಸೋಂಕಿನಿಂದಾಗಿ ಅಲ್ಲಿನ ಬಡಜನರು ಮತ್ತಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ. ಜನ ಇಷ್ಟೊಂದು ಸಂಕಷ್ಟಕ್ಕೀಡಾಗುತ್ತಿರುವುದು ಕಳೆದ ಎರಡು ದಶಕದಲ್ಲಿ ಇದೇ ಮೊದಲಿರಬಹುದು ಎಂದು ಅಂದಾಜು ಮಾಡಿದೆ.
ಕೋವಿಡ್ 19 ಮತ್ತು ಅದರಿಂದಾಗುವ ಆರ್ಥಿಕ ಸಂಕಷ್ಟಗಳು ಹಾಗೂ ಅಗ್ರರಾಷ್ಟ್ರಗಳ ಸಂಘರ್ಷದ ವಾತಾವರಣದಿಂದಾಗಿ 1998ರ ಬಳಿಕ ಮೊದಲ ಬಾರಿಗೆ ಕೆಲವು ರಾಷ್ಟ್ರಗಳಿಗೆ ದೊಡ್ಡ ಮಟ್ಟಿನ ಆಪತ್ತು ಎದುರಾಗಿದೆ. ಇದರಿಂದ ಎರಡು ದಶಕದ ಬಳಿಕ ಜಗತ್ತಿನ ಬಡತನದ ಮೂಲಾಂಶಗಳು ಹೆಚ್ಚುತ್ತಿವೆ. ಹೀಗಿದ್ದರೂ, 2021ರ ಬಳಿಕ ಆರ್ಥಿಕ ಪ್ರಗತಿ ಐತಿಹಾಸಿಕ ಎನ್ನುವಂತೆ ಹೆಚ್ಚಲಿದೆ ಎನ್ನುವ ವರದಿಯನ್ನು ವಿಶ್ವಸಂಸ್ಥೆ ಹೇಳಿಕೊಂಡಿದೆ. ಕೊರೊನೋತ್ತರ ಸಂದರ್ಭದಲ್ಲಿ ಆಯಾ ದೇಶಗಳು ತಮ್ಮ ಜನರ ಆರ್ಥಿಕ ಚೇತರಿಕೆಗೆ ಗಮನಾರ್ಹ ಕೊಡುಗೆ ನೀಡಬೇಕಾಗಿದೆ. ಕಾರ್ಮಿಕರಿಗೆ ಉದ್ಯೋಗ ಮತ್ತು ಕೌಶಲ್ಯ ಇದ್ದವರಿಗೆ ಹೊಸ ಬಿಸಿನೆಸ್ ಅವಕಾಶಗಳನ್ನು ತೆರೆಸಬೇಕಾಗಿದೆ ಎಂದು ಸಲಹೆ ಮಾಡಿದೆ. ಬಡತನದ ಬೇಗೆ ನಗರ ಭಾಗದಲ್ಲಿ ಹೆಚ್ಚಾಗಿ ಬಾಧಿತವಾಗಲಿದೆ. ಕೊರೊನಾ ಕಾರಣದಿಂದ ಅತಿ ಹೆಚ್ಚು ನಗರ ಭಾಗದ ಜನ ಉದ್ಯೋಗ ಕಳಕೊಂಡಿದ್ದಾರೆ. ಇದರಿಂದಾಗಿ ಅಲ್ಲಿ ಮತ್ತೆ ಚೇತರಿಕೆ ಕಾಣುವುದು ನಿಧಾನವಾಗಿರುತ್ತದೆ ಎಂದು ವರದಿಯಲ್ಲಿ ಹೇಳಿದೆ.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm