ಬ್ರೇಕಿಂಗ್ ನ್ಯೂಸ್
06-10-20 12:26 pm Headline Karnataka News Network ದೇಶ - ವಿದೇಶ
ವಿಳ್ಳುಪುರಂ, ಅಕ್ಟೋಬರ್ 06: ಕಲ್ಲಕುರಿಚಿ ಶಾಸಕ ತಮ್ಮ ಮನೆಯಲ್ಲಿ ಪ್ರೇಯಸಿಯನ್ನು ವಿವಾಹವಾಗುವ ಮೂಲಕ ಸೋಮವಾರ ವಿವಾದಕ್ಕೀಡಾಗಿದ್ದಾರೆ.
ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಆಪಾದಿಸಿ ಯುವತಿಯ ತಂದೆ ಶಾಸಕನ ಮನೆ ಮುಂದೆಯೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಘಟನೆಯೂ ನಡೆದಿದೆ. ಆ ಬಳಿಕ ನೂತನ ದಂಪತಿ ಮನೆಯಿಂದ ಹೊರಬಂದು "ನಾವು ಪರಸ್ಪರ ಪ್ರೇಮಿಸುತ್ತಿದ್ದೆವು, ಇದೀಗ ಸ್ವ ಇಚ್ಛೆಯಿಂದ ವಿವಾಹ ಬಂಧನಕ್ಕೊಳಗಾಗಿದ್ದೇವೆ" ಎಂದು ತಿಳಿಸಿದರು.

ತಿಯಾಗದುರುಗಂ ನಿವಾಸಿ, ಕಲ್ಲಕುರಿಚಿ ಕ್ಷೇತ್ರವನ್ನು ಪ್ರತಿನಿಧಿಸುವ ಎಐಎಡಿಎಂ ಶಾಸಕ ಎ. ಪ್ರಭು (35), ಅದೇ ಪಟ್ಟಣದ ಸೌಂದರ್ಯ (19) ಎಂಬಾಕೆಯನ್ನು ಸೋಮವಾರ ಮುಂಜಾನೆ ಮನೆಯಲ್ಲೇ ವಿವಾಹವಾದರು. ಈ ವಿಚಾರ ತಿಳಿದ ಯುವತಿಯ ತಂದೆ ಸಾಮಿನಾಥನ್ (48) ಶಾಸಕರ ಮನೆಗೆ ಧಾವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ತಡೆದಿದ್ದರು. ಬಳಿಕ ಸಾಮಿನಾಥನ್ ಅವರನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 309ರ ಅನ್ವಯ ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಕರಣ ದಾಖಲಿಸಲಾಗಿದೆ.
ಇದಕ್ಕೂ ಮುನ್ನ ರವಿವಾರ ಸಂಜೆ ಸಾಮಿನಾಥನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ತಿರುಚಂಗೋಡಿನ ಖಾಸಗಿ ಕಲಾ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವ ತಮ್ಮ ಹಿರಿಯ ಮಗಳನ್ನು ಶಾಸಕ ಪ್ರಭು ಅಪಹರಿಸಿದ್ದಾರೆ ಎಂದು ಆಪಾದಿಸಿದ್ದರು. ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಾರದಂತೆ ಪ್ರಭು ಬೆಂಬಗಲಿಗರು ದೂರವಾಣಿ ಮೂಲಕ ಬೆದರಿಕೆ ಒಡ್ಡಿದ್ದಾರೆ ಎಂದು ಅವರು ದೂರಿದ್ದರು.
ಕಳೆದ ನಾಲ್ಕು ವರ್ಷಗಳಿಂದ ತಮ್ಮ ನಡುವೆ ಪ್ರೇಮಸಂಬಂಧ ಇತ್ತು ಎಂದು ನೂತನ ದಂಪತಿ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ದೃಢಪಡಿಸಿದ್ದಾರೆ. ಸೌಂದರ್ಯ ವಿವಾಹದ ಬಗ್ಗೆ ಪೋಷಕರ ಜತೆ ಮಾತುಕತೆ ನಡೆಸಿದ್ದಾಗಿ ಪ್ರಭು ಹೇಳಿಕೊಂಡಿದ್ದಾರೆ. ಇದಕ್ಕೆ ಅವರು ಒಪ್ಪದಿದ್ದಾಗ ಸೌಂದರ್ಯ ಮನೆ ಬಿಟ್ಟು ಬಂದಿದ್ದಾಗಿ ಅವರು ಹೇಳಿದ್ದಾರೆ.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm