ಬ್ರೇಕಿಂಗ್ ನ್ಯೂಸ್
28-09-20 01:46 pm Headline Karnataka News Network ದೇಶ - ವಿದೇಶ
ಪಾಟ್ನಾ, ಸೆಪ್ಟಂಬರ್ 28: ಮಕ್ಕಳು ಕೆಲವೊಮ್ಮೆ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುವುದಿದೆ. ಆದರೆ, ತಾಯಿ ಯಾವತ್ತೂ ಮಕ್ಕಳ ಬಗ್ಗೆ ಹಾಗೆ ಅನಿಸ್ಕೊಳಲ್ಲ. ಹೆತ್ತ ಮಗು ಹೆಗ್ಗಣ ಆದ್ರೂ ಮುದ್ದು ಅಂತಲೇ ಭಾವಿಸುತ್ತಾರೆ. ಆದರೆ ಇಲ್ಲೊಬ್ಬಳು ತಾಯಿ ಇದಕ್ಕೆ ಅಪವಾದ ಎನ್ನುವ ರೀತಿ ನಡೆದುಕೊಂಡಿದ್ದಾಳೆ. ತನ್ನ ನಾಲ್ಕನೇ ಮದುವೆಗೆ ಅಡ್ಡಿಯಾಗುತ್ತಾನೆಂದು ನಾಲ್ಕು ವರ್ಷದ ಮಗುವನ್ನೇ ಕೊಂದು ಹಾಕಿದ್ದಾಳೆ.
ಈ ಘಟನೆ ನಡೆದಿರೋದು ಪಾಟ್ನಾ ಜಿಲ್ಲೆಯ ಹಸನ್ ಪುರ ಖಾಂಡಾ ಎನ್ನುವ ಪ್ರದೇಶದಲ್ಲಿ. 23 ವರ್ಷದ ಧರ್ಮಶೀಲಾ ದೇವಿ ಎನ್ನುವ ಯುವತಿ ಈಗಾಗ್ಲೇ ಮೂರು ಮದುವೆಯಾಗಿದ್ದಳು. ಮೊದಲ ಪತಿ ಅರುಣ್ ಚೌಧರಿಯ ಜೊತೆಗಿದ್ದಾಗ ಮಗು ಹುಟ್ಟಿತ್ತು. ಸಜನ್ ಕುಮಾರ್ ಎಂದು ಹೆಸರಿಟ್ಟಿದ್ದರು. ಮೊದಲ ಮದುವೆಯಾದ ಒಂದೇ ವರ್ಷದಲ್ಲಿ ಯುವತಿ, ಪತಿಯನ್ನು ಬಿಟ್ಟು ಮಗುವಿನ ಜೊತೆ ಬೇರೊಬ್ಬನ ಜೊತೆ ತೆರಳಿದ್ದಳು. ಕೆಲವೇ ತಿಂಗಳಲ್ಲಿ ಅನಾರೋಗ್ಯಕ್ಕೆ ಒಳಗಾದ 2ನೇ ಪತಿ ಆನಂತರ ಮೃತಪಟ್ಟಿದ್ದ. ಆ ಬಳಿಕ ಮಹೇಶ್ ಚೌಧರಿ ಎಂಬಾತನನ್ನು ಮೂರನೇ ಬಾರಿಗೆ ಕಟ್ಟಿಕೊಂಡಿದ್ದಳು. ಆದರೆ, ಯುವತಿ ಧರ್ಮಶೀಲಾ ದೇವಿಯ ದುರಾದೃಷ್ಟವೋ ಏನೋ, ಮಹೇಶ್ ರಸ್ತೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದ.
ಇದರಿಂದ ಮತ್ತೆ ಏಕಾಂಗಿಯಾಗಿದ್ದ ಯುವತಿ ನಾಲ್ಕನೇ ಮದುವೆಗೆ ರೆಡಿಯಾಗಿದ್ದಳು. ಆದರೆ, ಆಕೆಗೆ ನಾಲ್ಕು ವರ್ಷದ ಮಗು ಹೊರೆಯಾಗಿತ್ತು. ಸರಿಯಾಗಿ ಮಾತನಾಡಲು ಬಾರದ ಮತ್ತು ಕಿವಿ ಕೇಳಿಸದ ಮಗುವನ್ನು ಕೊಲ್ಲಲು ನಿರ್ಧರಿಸಿದ್ದಾಳೆ. ನಾಲ್ಕನೇ ಮದುವೆಗೆ ಮಗು ಅಡ್ಡಿಯಾಗುತ್ತದೆಂದು ತಾಯಿಯೇ ಸ್ವತಃ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಮಗು ನೀರಿನಲ್ಲಿ ಶವ ಆಗಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಮಹಿಳೆಯನ್ನು ವಿಚಾರಿಸಿದಾಗ, ತಪ್ಪು ಒಪ್ಪಿಕೊಂಡಿದ್ದಾಳೆ. ಆಕೆಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm