ಬ್ರೇಕಿಂಗ್ ನ್ಯೂಸ್
18-04-21 04:23 pm Headline Karnataka News Network ಕರ್ನಾಟಕ
ಬೆಂಗಳೂರು, ಎ 18: ನಗರದಲ್ಲಿ ಟಫ್ ರೂಲ್ಸ್ ಜಾರಿ ಮಾಡಲೇಬೇಕು. ಆದ್ರೆ ಲಾಕ್‌ಡೌನ್ ಮಾಡೋದಿಲ್ಲ ಅಂತ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಸೋಂಕು ಹೆಚ್ಚಳವಾಗ್ತಿರೋ ಹಿನ್ನೆಲೆ ಇಂದು ಅಶೋಕ್, ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬೆಂಗಳೂರಿನ ಕುಮಾರಕೃಪಾದಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಆಕ್ತರ್ ಭಾಗಿಯಾಗಿದ್ರು.

ಕೊರೊನಾ ನಿಯಂತ್ರಣದ ಬಗ್ಗೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅಶೋಕ್, There is no lockdown, no lockdown, no lockdown ಎಂದು ಪುನರುಚ್ಛರಿಸಿದ್ರು. ದಿನನಿತ್ಯದ ಜೀವನಕ್ಕೆ ಯಾವುದೇ ತೊಂದರೆಯಾಗದೇ ವ್ಯವಸ್ಥೆಯನ್ನ ನಾವು ನಿರ್ಮಾಣ ಮಾಡಬೇಕು. ಕೆಲವೊಂದು ಕ್ಷೇತ್ರದಲ್ಲಿ ಎಸಿಗಳಲ್ಲೇ ಕಾರ್ಯನಿರ್ವಹಿಸುವವರಿಗೆ ಕಠಿಣ ಕ್ರಮ ಆಗಬೇಕಿದೆ ಎಂದರು. ಅಕ್ಕಪಕ್ಕದ ರಾಜ್ಯಗಳನ್ನು ನೋಡಿ.. ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿದೆ. ಅದನ್ನು ಗಮನಿಸಿ ನಾವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ರು.

ನಾಳೆ ಬೆಂಗಳೂರಿನ ಮಟ್ಟಿಗೆ ಸರ್ವಪಕ್ಷ ಮುಖಂಡರ ಸಭೆ ಕರೆಯಲಾಗಿದೆ. ಹೀಗಾಗಿ ನಾಳೆ ಬೆಂಗಳೂರಿನ ಪಾಲಿಗೆ ಮಹತ್ವದ ದಿನ ನಿಜ. ಕೊರೊನಾ ಸೋಂಕು ತಡೆಗಟ್ಟಲು ಟಫ್ ರೂಲ್ಸ್ ಜಾರಿ ಮಾಡುವ ಉದ್ದೇಶದಿಂದಲೇ ಸಭೆ ಕರೆಯಲಾಗಿದೆ. ಇದನ್ನು ಬಿಟ್ಟು ಲಾಕ್‌ಡೌನ್ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಲಾಕ್‌ಡೌನ್ ಮಾಡುವುದಿಲ್ಲ. ಲಾಕ್‌ಡೌನ್ ಮಾಡಿ, ಜನಸಾಮಾನ್ಯರಿಗೆ ಸಂಕಷ್ಟಕ್ಕೆ ದೂಡುವುದಿಲ್ಲ. ಕಳೆದ ಲಾಕ್‌ಡೌನ್ ಮಾಡಿದಾಗ ಏನೆಲ್ಲಾ ಘಟನೆಗಳು ಸಂಭವಿಸಿದೆ ಎಂಬುದು ತಿಳಿದಿದೆ. ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾತ್ರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ರು.

ನಾಳೆ ವಿಪತ್ತು ನಿರ್ವಹಣಾ ತಂಡದಿಂದ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿಗಳು ವಿಪತ್ತು ನಿರ್ವಹಣಾ ದಳದ ಅಧ್ಯಕ್ಷರಾಗಿರುತ್ತಾರೆ, ಕಂದಾಯ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಸಿಎಂ ಅನುಪಸ್ಥಿತಿಯಲ್ಲಿ ನಾಳೆ ನಾನು ಸಭೆ ನಡೆಸಲಿದ್ದೇನೆ. ಬೆಂಗಳೂರಿನ ಮಟ್ಟಿಗೆ ನಾಳೆ ಮಹತ್ವದ ದಿನ.ನಾಳೆ ಸರ್ವಪಕ್ಷ ಮುಖಂಡರ ಸಭೆಯಲ್ಲಿ ಎಲ್ಲಾ ಪಕ್ಷಗಳ ನಾಯಕರ ಮಾತನ್ನು ಪರಿಗಣಿಸಲಾಗುತ್ತದೆ. ಬಳಿಕ ಟಫ್‌ರೂಲ್ಸ್ ಜಾರಿ ಹೇಗಿರಲಿದೆ? ಎಂಬುದನ್ನು ತಿಳಿಸುತ್ತೇವೆ ಎಂದು ಹೇಳಿದ್ರು.
Covid second wave but no lockdown in Karnataka clarified minister R Ashok to media persons here in Bangalore.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 07:34 pm
HK News Desk
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am