ಬ್ರೇಕಿಂಗ್ ನ್ಯೂಸ್
16-08-20 11:41 am Headline Karnataka News Network ಕರ್ನಾಟಕ
ಬೆಂಗಳೂರು, ಆಗಸ್ಟ್ 16: ಡಿ.ಜೆ.ಹಳ್ಳಿಯ ಗಲಭೆಗೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯ ಅಳಿಯ ನವೀನ್ ಹಾಕಿದ್ದ ಅವಹೇಳನಕಾರಿ ಪೋಸ್ಟ್ ಎಷ್ಟು ಕಾರಣವೋ, ಅಷ್ಟೇ ಕಾರಣ ಎಸ್ ಡಿಪಿಐ ಮತ್ತು ಅದರ ಕಾರ್ಯಕರ್ತ ಫೈರೋಜ್ ಪಾಷಾ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಟ್ಟರ್ ಹಿಂದುತ್ವವಾದಿಯೂ ಅಲ್ಲದ ನವೀನ್ ಯಾವಾಗಲೊಮ್ಮೆ ಹಿಂದುತ್ವದ ವಿಚಾರ ಬಂದಾಗ ಟೀಕೆ, ಟಿಪ್ಪಣಿಯುಳ್ಳ ಪೋಸ್ಟ್ ಗಳನ್ನು ಫೇಸ್ ಬುಕ್ ನಲ್ಲಿ ಹರಿಯಬಿಡುತ್ತಿದ್ದ. ಇತ್ತೀಚೆಗೆ ಪಾದರಾಯನಪುರದಲ್ಲಿ ನಡೆದ ಗಲಾಟೆ ಹಾಗೂ ದೆಹಲಿಯ ತಬ್ಲಿಘಿ ಪ್ರಕರಣಗಳನ್ನು ಟೀಕಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ. ಅಲ್ಲಿಂದಲೇ ಎಸ್‌ಡಿಪಿಐ ಜೊತೆ ಆತನ ಫೇಸ್ಬುಕ್ ಪೋಸ್ಟ್ ವಾರ್ ಶುರುವಾಗಿದ್ದವು.
ಫೇಸ್‌ಬುಕ್‌ನಲ್ಲಿ ಐದು ಸಾವಿರ ಸ್ನೇಹಿತರು ಹಾಗೂ 2,500 ಫಾಲೋವರ್ಸ್ ಹೊಂದಿದ್ದ ನವೀನ್ ಗೆ ಆರ್.ಟಿ.ನಗರದ ಎಸ್‌ಡಿಪಿಐ ಮುಖಂಡ ಫೈರೋಜ್ ಪಾಷಾ ಸಹ ಸ್ನೇಹಿತರ ಲಿಸ್ಟ್ ನಲ್ಲಿದ್ದ. ಪಾದರಾಯನಪುರ ಗಲಾಟೆ ವಿಚಾರದಲ್ಲಿ ನವೀನ್ ಪೋಸ್ಟ್ ಗಮನಿಸಿದ ಫೈರೋಜ್, ಪ್ರತಿಯಾಗಿ ಆತನ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಲು ಆರಂಭಿಸಿದ್ದ. ಹೀಗೆ ಆರಂಭಗೊಂಡ ಪೋಸ್ಟ್ ವಾರ್, ನಿರಂತರವಾಗಿ ಒಂದೊಂದು ವಿಚಾರಕ್ಕೂ ಇಬ್ಬರೂ ಎಗರಿ ಬೀಳುತ್ತಿದ್ದರು.
ಅಯೋಧ್ಯೆಯಲ್ಲಿ ಆ.5 ರಂದು ರಾಮಮಂದಿರ ಶಿಲಾನ್ಯಾಸ ದಿನ ನವೀನ್, ಕಾವಲ್ ಬೈರಸಂದ್ರದಲ್ಲಿ ಜನರಿಗೆ ಅನ್ನ ಸಂತರ್ಪಣೆಯನ್ನು ಆಯೋಜಿಸಿದ್ದ. ಫೇಸ್‌ಬುಕ್‌ನಲ್ಲಿ ರಾಮಮಂದಿರ ಸ್ಥಾಪನೆಗೆ ಶುಭಕೋರಿ ಪೋಸ್ಟ್ ಕೂಡ ಹಾಕಿದ್ದ. ಆಗಲೂ 'ದೇವರ' ವಿಷಯಕ್ಕೆ ನವೀನ್ ಮತ್ತು ಫೈರೋಜ್ ಪಾಷಾ ನಡುವೆ ಪೋಸ್ಟ್ ವಾರ್ ನಡೆದಿತ್ತು. ಈ ನಡುವೆ, ಆಗಸ್ಟ್ 11 ರಂದು ಫೇಸ್‌ಬುಕ್‌ನಲ್ಲಿ ರಾಮನ ಕುರಿತ ಮಾಜಿ ಸಚಿವರೊಬ್ಬರು ಆಡಿದ್ದ ಹೇಳಿಕೆಯ ಮಾಧ್ಯಮದ ಸುದ್ದಿಯನ್ನು ನವೀನ್‌ಗೆ ಫೈರೋಜ್ ಟ್ಯಾಗ್ ಮಾಡಿ ಟಾಂಗ್ ಕೊಟ್ಟಿದ್ದ. ಫೈರೋಜ್ ಪೋಸ್ಟ್ ನೋಡಿ ಕೆರಳಿದ ನವೀನ್, ಫೈರೋಜ್‌ಗೆ ಪ್ರತ್ಯುತ್ತರ ನೀಡಲು ಮುಂದಾಗಿದ್ದಾನೆ. ಗೂಗಲ್‌ನಲ್ಲಿ ಹುಡುಕಾಡಿ ಇಸ್ಲಾಂ ಧರ್ಮಗುರು ಪೈಗಂಬರ್ ಕುರಿತ ಆಕ್ಷೇಪಾರ್ಹ ಬರಹದ ಇಮೇಜ್ ಅನ್ನು ಸ್ಕ್ರೀನ್ ಶಾಟ್ ಮಾಡಿ ಸಂಜೆ 5.30ಕ್ಕೆ ಫೈರೋಜ್ ಪಾಷಾಗೆ ಟ್ಯಾಗ್ ಮಾಡಿದ್ದಾನೆ. ನವೀನ್ ಹಾಕಿದ ವಿವಾದಾತ್ಮಕ ಪೋಸ್ಟ್ ಅನ್ನು ಗಮನಿಸಿದ ಫೈರೋಜ್ ಪಾಷಾ, ಸ್ಕ್ರೀನ್ ಶಾಟ್ ಹೊಡೆದು ಎಸ್‌ಡಿಪಿಐ ಗುಂಪಿನಲ್ಲಿ ವೈರಲ್ ಮಾಡಿದ್ದಾನೆ. ಅಷ್ಟೇ ಅಲ್ಲ , ಎಸ್ ಡಿಪಿಐ ಕಾರ್ಯಕರ್ತರನ್ನು ಪ್ರಚೋದಿಸಲು ಬಳಸಿದ್ದಾನೆ. ಒಂದೇ ಗುರಿಯಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲಾನ್ ಮಾಡಿದ್ದಾರೆ. ಒಂದ್ಕಡೆ ನವೀನ್, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮತ್ತು ಆತನ ಅಳಿಯ ನವೀನನ ಹಿಂದುತ್ವವಾದ ಮಟ್ಟ ಹಾಕಬೇಕೆಂದು ಖೆಡ್ಡಾ ತೋಡಿದ್ದಾರೆ.
ಪೋಸ್ಟ್ ವೈರಲ್ ಮಾಡಿದ್ದ ಫೈರೋಜ್
ಆದರೆ, ಈ ಒಂದು ಪೋಸ್ಟ್ ಮಾಡಬಹುದಾದ ಪರಿಣಾಮಗಳ ಬಗ್ಗೆ ಯೋಚಿಸದ ನವೀನ್ ತನ್ನ ಪಾಡಿಗಿದ್ದ. ರಾತ್ರಿ ಎಂಟು ಗಂಟೆ ಸುಮಾರಿಗೆ ಡಿಜೆ ಹಳ್ಳಿ ಠಾಣೆ ಮುಂದೆ ಜನ ಜಮಾಯಿಸಿ ಗಲಾಟೆ ಮಾಡುವುದನ್ನು ಅರಿತ ಕುಟುಂಬದ ಸದಸ್ಯರು ನವೀನ್ ಗೆ ಕರೆ ಮಾಡಿದ್ದಾರೆ. 'ನಿನಗೆ ಹುಚ್ಚು ಹಿಡಿದಿದ್ಯಾ... ನೀನು ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್‌ನಿಂದ ಗಲಾಟೆಯಾಗುತ್ತಿದೆ. ಮೊದಲು ಪೋಸ್ಟ್ ಡಿಲೀಟ್ ಮಾಡು' ಎಂದು ಬೈದಿದ್ದಾರೆ. ತಕ್ಷಣವೇ ನವೀನ್, ಫೇಸ್‌ಬುಕ್‌ನಲ್ಲಿ ಆ ವಿವಾದಾತ್ಮಕ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಆದರೆ ಅಷ್ಟರಲ್ಲಾಗಲೇ ಆಗೋದೆಲ್ಲ ಆಗಿ ಹೋಗಿತ್ತು. ಫೈರೋಜ್ ಪಾಷಾ ಕರೆಯಂತೆ ಕೆರಳಿದ್ದ ಎಸ್ ಡಿಪಿಐ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ್ದರು.
01-08-25 02:55 pm
Bangalore Correspondent
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
ಕೆಆರ್ ಐಡಿಎಲ್ ನಿಗಮವನ್ನೇ ಗುಡಿಸಿ ಹಾಕಿದ ಗುಮಾಸ್ತ !...
01-08-25 11:47 am
ಪಾಕಿಸ್ತಾನದಿಂದಲೇ ಭಾರತವನ್ನು ಸ್ಫೋಟಿಸುತ್ತೇನೆ ! ಗೋ...
31-07-25 11:20 pm
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
01-08-25 11:44 am
HK News Desk
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
01-08-25 11:45 am
Mangalore Correspondent
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
01-08-25 02:31 pm
HK News Desk
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am