ಬ್ರೇಕಿಂಗ್ ನ್ಯೂಸ್
13-08-26 02:22 pm HK News Staffer ಕರ್ನಾಟಕ
ಬೆಂಗಳೂರು, ಆ.13: ಖಾಸಗಿ ಐಷಾರಾಮಿ ಹೋಟೆಲ್ಗಳು, ಪಬ್ಗಳ ಬಳಿಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಪ್ರಮುಖ ಸರ್ಕಾರಿ ಕಚೇರಿಗಳ ಕ್ಯಾಂಟೀನ್ಗಳ ಮೇಲೂ ದಾಳಿ ನಡೆಸಿದ್ದು, ಅವಧಿ ಮೀರಿದ ಆಹಾರ, ಜಿರಳೆಗಳಿದ್ದ ಆಹಾರಗಳನ್ನು ಪತ್ತೆಹಚ್ಚಿದೆ.
ಜೊಮ್ಯಾಟೋದ ಹೈಪರ್ಪ್ಯೂರ್ ಗೋದಾಮಿನಲ್ಲಿ ತಪಾಸಣೆ ನಡೆಸಿದ ವೇಳೆ, ಹಲವು ಹೋಟೆಲ್ಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಈ ಘಟಕದಲ್ಲಿ ಸುರಕ್ಷತಾ ಮಾನದಂಡ ಅನುಸರಿಸದ 146 ಕೆ.ಜಿ. ಕೋಳಿ ಮಾಂಸ ಪತ್ತೆಯಾಗಿತ್ತು. ಇದಲ್ಲದೆ, 300 ಕೆ.ಜಿ. ಪ್ಯಾಕ್ ಮಾಡಲಾದ ಅಕ್ಕಿ, 20 ಕೆ.ಜಿ. ಡ್ರೈಫ್ರೂಟ್ಸ್ ಹಾಗೂ 15 ಕೆ.ಜಿ. ಮಸಾಲೆ ಪದಾರ್ಥಗಳಲ್ಲಿ ತಪ್ಪಾದ ಲೇಬಲಿಂಗ್ ಕಂಡುಬಂದಿದೆ. ಶೈತ್ಯೀಕರಣದಲ್ಲಿ ಇಡಬೇಕು ಎಂದು ಲೇಬಲ್ನಲ್ಲಿ ಸೂಚಿಸಿದ್ದರೂ 10 ಕೆ.ಜಿ. ಆಮದು ಮಾಡಿದ ಮೂಲಂಗಿ ಉಪ್ಪಿನಕಾಯಿಯನ್ನು ಶೈತ್ಯೀಕರಣವಿಲ್ಲದೆ ಸಂಗ್ರಹಿಸಿದ್ದನ್ನು ಪತ್ತೆ ಮಾಡಿದ್ದರು.
ಆಗಸ್ಟ್ 12ರಂದು ಆರೋಗ್ಯ ಸೌಧ, ವಿಧಾನಸೌಧ, ಶಾಸಕರ ಭವನ, ವಿಕಾಸಸೌಧ ಹಾಗೂ ಎಂ.ಎಸ್. ಕಟ್ಟಡದಲ್ಲಿರುವ ಹೋಟೆಲ್ ಮತ್ತು ಆಹಾರ ಮಳಿಗೆಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದರು. ಆಹಾರದ ಗುಣಮಟ್ಟ, ಲೇಬಲಿಂಗ್, ಸಂಗ್ರಹಣೆ, ಸ್ವಚ್ಛತೆ ಮತ್ತು ಆಹಾರ ನಿರ್ವಹಣಾ ಕ್ರಮಗಳನ್ನು ಪರಿಶೀಲಿಸಿದರು. ವಿಕಾಸಸೌಧ ಆವರಣದ ಕ್ಯಾಂಟೀನ್ ಒಂದರಲ್ಲಿ 500 ಗ್ರಾಂ ಅವಧಿ ಮೀರಿದ ರವಾ ಹಾಗೂ 500 ಗ್ರಾಂ ಅವಧಿ ಮೀರಿದ ಕೊಕೊಕಾಂಟ್ ಪೌಡರ್ ಪತ್ತೆಯಾಗಿದ್ದು, ವಶಪಡಿಸಲಾಗಿದೆ. ಅಲ್ಲದೆ, ಕ್ಯಾಂಟೀನ್ನಲ್ಲಿ ಅಸ್ವಚ್ಛ ಪರಿಸ್ಥಿತಿಯೂ ಕಂಡುಬಂದಿದೆ.
ಇದೇ ವೇಳೆ, ಮಲ್ಲಿಗೆ ಹೋಟೆಲ್ನಲ್ಲಿ ಅಸ್ವಚ್ಛ ಮತ್ತು ಆಹಾರದಲ್ಲಿ ಜಿರಳೆಗಳು ಪತ್ತೆಯಾಗಿವೆ. ಹೋಟೆಲ್ನಲ್ಲಿ ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಂಡಿರದೇ ಇರುವುದಕ್ಕೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲಿಯೇ ಮತ್ತೊಂದು ಹೋಟೆಲ್ನಲ್ಲೂ ಅಸ್ವಚ್ಛ ವಾತಾವರಣ ಕಂಡುಬಂದಿದ್ದು ಸಲಹಾ ನೋಟಿಸ್ ನೀಡಲಾಗಿದೆ. ಎಂ.ಎಸ್. ಕಟ್ಟಡದಲ್ಲಿರುವ ಹೋಟೆಲ್ವೊಂದರಲ್ಲಿ ಅಸ್ವಚ್ಛ ಪರಿಸ್ಥಿತಿಯಲ್ಲಿ ಆಹಾರ ತಯಾರು, ವಹಿವಾಟು ನಡೆಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹೋಟೆಲ್ ಬಂದ್ ಮಾಡಲಾಗಿದೆ.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm