ಬ್ರೇಕಿಂಗ್ ನ್ಯೂಸ್
12-08-26 07:47 pm HK News Staffer ಕ್ರೈಂ
ಮಂಗಳೂರು, ಆಗಸ್ಟ್ 12: ಪಣಂಬೂರಿನಲ್ಲಿ ಜೂನ್ 29ರಂದು ನಡೆದ ಜುವೆಲ್ಲರಿ ಉದ್ಯಮಿಯ ದರೋಡೆ ಪ್ರಕರಣದಲ್ಲಿ ತನಿಖೆ ನಡೆಸಿರುವ ಪಣಂಬೂರು ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳದ ಕಣ್ಣೂರು ಮೂಲದ ಮಿಥುನ್ ಲಾಲ್, ಶ್ರೀರಾಗ್, ಮಡಿಕೇರಿ ಮೂಲದ ಉಬೇದ್, ಜಿಯಾದ್ ಬಂಧಿತರು.
ಈ ಪೈಕಿ ಶ್ರೀರಾಗ್ ಕಣ್ಣೂರು ಜಿಲ್ಲೆಯಲ್ಲಿ ಸಿಪಿಐ ಪಕ್ಷದಲ್ಲಿ ಸ್ಥಳೀಯ ಮಟ್ಟದ ನಾಯಕನಾಗಿದ್ದು, ಕ್ರಿಮಿನಲ್ ಚಟುವಟಿಕೆಯಲ್ಲಿ ಪಾಲ್ಗೊಂಡು ಪೊಲೀಸರ ಅತಿಥಿಯಾಗಿದ್ದಾನೆ. ದರೋಡೆ ಪ್ರಕರಣದಲ್ಲಿ ಈತ ನೇರವಾಗಿ ಪಾಲ್ಗೊಂಡಿರುವುದು ಗೊತ್ತಾಗಿದ್ದರಿಂದ ಮಂಗಳೂರು ಪೊಲೀಸರು ಆತನ ಮನೆಗೆ ದಾಳಿ ನಡೆಸಿದ್ದರು. ಶ್ರೀರಾಗ್ ಮತ್ತು ಆತನ ಸೋದರರು ಪಕ್ಷದ ಮುಂಚೂಣಿಯಲ್ಲಿ ಇದ್ದುದರಿಂದ ಪೊಲೀಸರು ಮನೆಗೆ ಎಂಟ್ರಿ ಕೊಟ್ಟು ವಾರ್ನ್ ಮಾಡಿದ್ದು ಮನೆಯವರನ್ನು ಇರಿಸು ಮುರಿಸು ಮಾಡಿತ್ತು. ಹೀಗಾಗಿ ಕಿರಿಕಿರಿ ತಪ್ಪಿಸಲು ಶ್ರೀರಾಗ್ ಸ್ವತಃ ವಕೀಲರ ಮೂಲಕ ಮಂಗಳೂರಿಗೆ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ.

ಮಿಥುನ್, ಉಬೇದ್ ಮತ್ತು ಜಿಯಾದ್ ಕೂಡ ವಕೀಲರ ಮೂಲಕ ಮಂಗಳೂರಿನಲ್ಲಿ ನಿರೀಕ್ಷಣಾ ಜಾಮೀನು ಪಡೆಯುವುದಕ್ಕೆ ಮುಂದಾಗಿದ್ದರು. ಈ ವೇಳೆ, ಮಂಗಳೂರಿನ ಮಿಥುನ್ ಕೆಪಿಟಿ ಜಂಕ್ಷನ್ ಬಳಿಯಲ್ಲಿ ಅರೆಸ್ಟ್ ಆಗಿದ್ದರೆ, ಉಬೇದ್ ಮತ್ತು ಜಿಯಾದ್ ಪಡೀಲಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೃತ್ಯದಲ್ಲಿ ಬಳಕೆಯಾಗಿದ್ದ ಇನೋವಾ ಮತ್ತು ಇನ್ನೊಂದು ಸ್ವಿಫ್ಟ್ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಹತ್ತು ಗ್ರಾಮ್ ಚಿನ್ನದ ಉಂಗುರ ಹಾಗೂ ಜುವೆಲ್ಲರಿ ವ್ಯಾಪಾರಿಗೆ ಹಲ್ಲೆ ಮಾಡಲು ಬಳಸಿದ್ದ ಕಬ್ಬಿಣದ ರಾಡ್, ಗ್ಲೌಸ್ ಕೂಡ ವಶಕ್ಕೆ ಪಡೆಯಲಾಗಿದೆ.
ಪ್ರಮುಖ ಆರೋಪಿ ಪತ್ತೆಯಿಲ್ಲ
ಪ್ರಕರಣದಲ್ಲಿ ಪ್ರಮುಖ ಆರೋಪಿಯೆಂದು ಗುರುತಿಸಲ್ಪಟ್ಟ ಶಿಜಿನ್ ಎಂಬಾತ ಇನ್ನೂ ಪತ್ತೆಯಾಗಿಲ್ಲ. ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ನಮಗೆ ಯಾವುದೇ ಚಿನ್ನವಾಗಲೀ, ಹಣವಾಗಲೀ ಸಿಕ್ಕಿಲ್ಲ ಎಂದಿದ್ದಾರೆ. ಒಂದು ಚಿನ್ನದ ಉಂಗುರ ಮಾತ್ರ ಸಿಕ್ಕಿದ್ದು ಅದನ್ನು ಆರೋಪಿಗಳು ಮಾರಾಟ ಮಾಡಿದಲ್ಲಿಂದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಣ್ಣೂರು ಮೂಲದ ಶಿಜಿನ್ ಹಲವು ವರ್ಷಗಳಿಂದ ಗುಜರಾತಿನ ಅಹ್ಮದಾಬಾದ್ ನಲ್ಲಿ ವ್ಯವಹಾರ ನಡೆಸಿಕೊಂಡಿದ್ದ. ಕೆಲವೊಮ್ಮೆ ಮಾತ್ರ ಊರಿಗೆ ಬಂದು ಪೋಸು ಕೊಟ್ಟು ತಂಡ ಕಟ್ಟಿಕೊಂಡು ದರೋಡೆಗೆ ಪ್ಲಾನ್ ಹಾಕುತ್ತಿದ್ದ ಎಂಬುದನ್ನು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಜುವೆಲ್ಲರಿ ಉದ್ಯಮಿ ವಿಕಾಸ್ ಧನವಡೆ ಜೂನ್ 29ರಂದು ಮಹಾರಾಷ್ಟ್ರದ ಸಾಂಗ್ಲಿಯಿಂದ ಹಿಂತಿರುಗುತ್ತಿದ್ದಾಗ ಪಣಂಬೂರು ಬಳಿಯ ಬೈಕಂಪಾಡಿ ಹೆದ್ದಾರಿಯಲ್ಲಿ ಇನ್ನೋವಾ, ಸ್ವಿಫ್ಟ್ ಕಾರಿನಲ್ಲಿ ಬಂದಿದ್ದವರು ಕಾರು ಅಡ್ಡಗಟ್ಟಿ ದರೋಡೆ ನಡೆಸಿದ್ದರು. ಈ ವೇಳೆ, 180 ಗ್ರಾಮ್ ಚಿನ್ನ, ನಗದು ಸೇರಿದಂತೆ 20 ಲಕ್ಷ ಮೌಲ್ಯದ ಸೊತ್ತು ಕಳವಾಗಿದೆ ಎಂದು ವಿಕಾಸ್ ಪಣಂಬೂರು ಠಾಣೆಗೆ ದೂರು ನೀಡಿದ್ದರು. ಇದರ ಮರುದಿನವೇ ದರೋಡೆಯಾಗಿದ್ದ ಸ್ವಿಫ್ಟ್ ಡಿಸೈರ್ ಕಾರು ಬಂಟ್ವಾಳ ಬಳಿಯ ಪಚ್ಚಿನಡ್ಕದಲ್ಲಿ ಪತ್ತೆಯಾಗಿತ್ತು. ಅದರ ಸೀಟನ್ನು ಹರಿದು ಹಾಕಿ ಒಳಗಡೆ ಚಿನ್ನದ ಗಟ್ಟಿ ಅಥವಾ ಹವಾಲಾ ನಗದು ಇದೆಯಾ ಎಂದು ಶೋಧಿಸಿದಂತೆ ಕಂಡುಬಂದಿತ್ತು. ಎರಡು ದಿನದಲ್ಲೇ ಕಣ್ಣೂರು ಮೂಲದ ನಿಮಿಲ್ ಮತ್ತು ಆರೋಪಿಗಳಿಗೆ ಪರಾರಿಯಾಗಲು ಸಹಕರಿಸಿದ್ದಾರೆಂಬ ಆರೋಪದಲ್ಲಿ ಕೊಡಗು ಮೂಲದ ಇರ್ಶಾದ್ ಮತ್ತು ಮುಸ್ತಾಫ ಎಂಬವರನ್ನು ಅರೆಸ್ಟ್ ಮಾಡಲಾಗಿತ್ತು.
ಈ ಮಧ್ಯೆ 13 ಮಂದಿ ಆರೋಪಿಗಳ ಫೋಟೋ ಸಹಿತ ಬಿಡುಗಡೆ ಮಾಡಿ ಇವರ ಪತ್ತೆಗೆ ಸಹಕಾರ ನೀಡುವಂತೆ ಮಂಗಳೂರು ಪೊಲೀಸರು ಕೇಳಿಕೊಂಡಿದ್ದರು. ಇದರಲ್ಲಿ ಶಿಜಿನ್ ಗಂಗಾಧರನ್ ಪ್ರಮುಖ ಆರೋಪಿಯೆಂದು ತೋರಿಸಿದ್ದರು. ಸದ್ಯಕ್ಕೆ ಒಟ್ಟು ಏಳು ಮಂದಿ ಬಂಧನವಾಗಿದ್ದು ಇನ್ನೂ ಹಲವರು ಕೃತ್ಯದಲ್ಲಿ ಶಾಮೀಲಾದ ಶಂಕೆಯಿದ್ದು ಪೊಲೀಸರು ಶೋಧ ಮುಂದುವರಿಸಿದ್ದಾರೆ. ದೋಚಿದ ಬಂಗಾರವನ್ನು ಶಿಬಿನ್ ಕೊಂಡೊಯ್ದಿದ್ದಾನೆಯೇ, ಏನೂ ಸಿಕ್ಕಿರಲಿಲ್ಲವೇ ಎನ್ನುವ ಬಗ್ಗೆ ಪೊಲೀಸರಿಗೂ ಅಂದಾಜು ಸಿಕ್ಕಿಲ್ಲ. ದರೋಡೆ ಸಂದರ್ಭದಲ್ಲಿ ವಿಕಾಸ್ ಪತ್ನಿಯ ಮೈಯಲ್ಲಿ ಸಾಕಷ್ಟು ಚಿನ್ನದ ಒಡವೆಗಳಿದ್ದವು. ಅದ್ಯಾವುದನ್ನೂ ಆರೋಪಿಗಳು ಮುಟ್ಟದೆ ಕಾರನ್ನು ಮಾತ್ರ ಎಗರಿಸಿಕೊಂಡು ಹೋಗಿದ್ದು ಹವಾಲಾ ಹಣ ಇದೆಯೆಂಬ ಶಂಕೆಯಲ್ಲೇ ಕೃತ್ಯ ನಡೆಸಿರುವಂತೆ ಕಂಡುಬರುತ್ತಿದೆ.
12-08-26 06:57 pm
HK News Staffer
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ ; ಹೊಸ ಕ...
10-08-26 07:54 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 02:08 pm
HK News Staffer
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
12-08-26 07:47 pm
HK News Staffer
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm