ಬ್ರೇಕಿಂಗ್ ನ್ಯೂಸ್
27-06-26 04:21 pm HK News Staffer ಕರ್ನಾಟಕ
ಬೆಂಗಳೂರು, ಜೂ 27: ರಾಮ ಮಂದಿರಕ್ಕೆ ಅಂಬಾನಿ 900 ಕೋಟಿ ಹಣ ದೇಣಿಗೆ ನೀಡಿದ್ದರು. ಅದಕ್ಕೆ ಲೆಕ್ಕ ಇಲ್ಲ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ಇತಿಹಾಸದಲ್ಲಿ ಮಹಮ್ಮದ್ ಘಜ್ನಿ ಬಿಟ್ಟರೆ ಬಿಜೆಪಿಯವರೇ ದೇಶವನ್ನ ಲೂಟಿ ಮಾಡಿದ್ದು ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮಮಂದಿರ ದೇಣಿಗೆ ವಿವಾದ ಕುರಿತು ಶಿವಸೇನೆ ಸಂಜಯ್ ರಾವತ್ ಪ್ರಶ್ನೆಕೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇತಿಹಾಸ ಅಂದ್ರೆ ಮಹಮ್ಮದ್ ಘಜ್ನಿ ಅಂತಾರೆ, ಲೂಟಿ ಹೊಡೆದವನು ಅಂತ ಬಿಜೆಪಿಯವರು ಪದೇ ಪದೇ ಹೇಳ್ತಾರೆ. ಘಜ್ನಿ ಬಿಟ್ಟರೆ ಬಿಜೆಪಿಯವರೇ ಲೂಟಿ ಮಾಡಿದ್ದು. ಈ ಹಿಂದೆ ರಾಮಮಂದಿರ ಕಟ್ತೇವೆ ಅಂತ ಲೂಟಿ ಹೊಡೆದಿದ್ರು. ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ. ಈಗ ಪೇಜಾವರ ಶ್ರೀಗಳು ಲೆಕ್ಕ ಕೇಳಿದ್ದಾರೆ. ಪ್ರಹ್ಲಾದ್ ಜೋಶಿ ಶ್ರೀಗಳ ವಿರುದ್ಧ ಇದ್ದಾರಾ? ಶ್ರೀಗಳ ಮಾತಿಗೆ ಏನು ಹೇಳ್ತಾರೆ ಎಂದು ಪ್ರಶ್ನಿಸಿದರು.
ರಾಮಮಂದಿರ ದೇಣಿಗೆ ವಿವಾದ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಜೋಶಿ ಅವರು ಕೇಂದ್ರದ ಮಂತ್ರಿ, ಅಪಾರ ಜ್ಞಾನಭಂಡಾರದ ಮೂರ್ತಿ. ನನಗೆ ಹೇಳ್ತಾರಂತೆ ನಾನ್ಯಾಕೆ ಅವರ ಮಾತು ಕೇಳಬೇಕು? ಹಿಂದೆ ಯಡಿಯೂರಪ್ಪ ಪಕ್ಷ ತೊರೆದಿದ್ರು ಆಗ ಅವರ ಬಗ್ಗೆ ಜೋಶಿ ಏನೇನೆಲ್ಲ ಹೇಳಿದ್ರು? ಈಗ ಅವರ ಪಾದಪೂಜೆ ಮಾಡ್ತಾರೆ ರಾಮಮಂದಿರ ಟ್ರಸ್ಟ್ ನವರು ಲೆಕ್ಕ ಕೊಡಲ್ಲ ಅಂತಾರೆ. ಇವರು ರಾಮನನ್ನೂ ಬಿಟ್ಟಿಲ್ಲ. ರಾಮನ ಹೆಸರಲ್ಲಿ ಕಳ್ಳತನ, ಲೂಟಿ ಮಾಡಿದ್ರು ಎಂದು ಕಿಡಿ ಕಾರಿದರು.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm