ಬ್ರೇಕಿಂಗ್ ನ್ಯೂಸ್
22-05-26 02:45 pm HK News Staffer ಕರ್ನಾಟಕ
ಮಂಗಳೂರು, ಮೇ 22: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಚುನಾವಣಾ ಆಯೋಗ ಸಂಶಯಾಸ್ಪದ ರೀತಿಯಲ್ಲಿ ನಡೆದುಕೊಂಡಿದೆ. ಹಾಗಾಗಿ ವಿರೋಧ ಪಕ್ಷಗಳಿಗೆ ಅದರ ಮೇಲೆ ವಿಶ್ವಾಸ ಇಲ್ಲದಾಗಿದೆ. ಇದೊಂದು ಕೆಟ್ಟ ಪರಿಸ್ಥಿತಿ. ದೇಶದಲ್ಲಿ ಚುನಾವಣಾ ಆಯೋಗದ ಬಗ್ಗೆ ಹಿಂದೆ ಯಾರು ಸಹ ಸಂಶಯ ಪಡ್ತಾ ಇರ್ಲಿಲ್ಲ. ನಿಷಕ್ಷಪಾತ, ಸ್ವತಂತ್ರವಾಗಿ ನಿರ್ವಹಣೆ ಮಾಡ್ತಿದ್ರು. ಇವತ್ತು ಚುನಾವಣೆ ಗೆಲ್ಲೋದಕ್ಕೆ ಏನು ಮಾಡಬೇಕು ಅದನ್ನು ಬಿಜೆಪಿ ಮಾಡ್ತಿದೆ. ಎಲ್ಲ ತನಿಖಾ ಏಜನ್ಸಿ, ಸರ್ಕಾರಿ ಸಂಸ್ಥೆಗಳನ್ನೂ ಉಪಯೋಗಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು ಪ್ರವಾಸದಲ್ಲಿರುವ ಅವರು, ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ಪಂಜಾಬ್ ಎಲೆಕ್ಷನ್ ಬಂದಿರೋದ್ರಿಂದ ಇ.ಡಿ, ಐ.ಟಿ ಅಲ್ಲಿ ಹೋಗಿ ಬಿದ್ದಿದ್ದಾರೆ, ಪಂಜಾಬ್ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕಕ್ಕೆ ಬರ್ತಾರೆ. ಇ.ಡಿ, ಐಟಿ ಇಲಾಖೆಯವರು ಬಿಜೆಪಿಗೆ ಸಹಾಯ ಮಾಡ್ತಾರೆ. ಬಿಜೆಪಿಯವರು ಎಲ್ಲಾ ಸಂಸ್ಥೆಗಳನ್ನು ಚುನಾವಣೆ ಗೆಲ್ಲೋದಕ್ಕೆ ಬಳಸುತ್ತಿದ್ದಾರೆ. ಚುನಾವಣಾ ಆಯೋಗವೂ ಇವರ ಆದೇಶವನ್ನು ಪಾಲಿಸುತ್ತಿದೆ. ರಾಜ್ಯದಲ್ಲಿ ಎಸ್ಐಆರ್ ಸಂದರ್ಭದಲ್ಲಿ ಹೇಗೆ ಹೋರಾಡಬೇಕೆಂಬ ಬಗ್ಗೆ ಚರ್ಚೆ ಮಾಡ್ತಿದ್ದೇವೆ. ಇಲ್ಲಿ ಏನು ಹೊಸ ಪ್ರಯೋಗ ಮಾಡ್ತಾರೆ ಅಂತಾ ಗೊತ್ತಿಲ್ಲ.
ಅಲ್ಲಿ ವೋಟರ್ ಲೀಸ್ಟ್ ನಲ್ಲಿ ಇದ್ದ ಹೆಸರುಗಳನ್ನು ಏಕಾಏಕಿ ತೆಗೆದು ಹಾಕಿದ್ರು. ವೋಟ್ ಕಳೆದುಕೊಂಡ್ರೆ ಅದಕ್ಕೆ ಪರಿಹಾರ ಏನು? ಕಾನೂನಾತ್ಮಕವಾಗಿ ಈ ಬಗ್ಗೆ ಹೋರಾಟ ಮಾಡುತ್ತೇವೆ. ಪಶ್ಷಿಮ ಬಂಗಾಳದಲ್ಲಿ ಇದಕ್ಕಾಗಿ ಸಾಫ್ಟ್‌ವೇರ್ ಉಪಯೋಗ ಮಾಡಿದ್ರು. ಯಾವ ಯಾವ ಮತಗಳನ್ನು ತೆಗೆಯಬೇಕೆಂದು ಆ ಸಾಫ್ಟ್‌ವೇರ್ ನಿರ್ಧಾರ ಮಾಡಿತ್ತು. ಆ ರೀತಿ ಆಗೋದಕ್ಕೆ ಇಲ್ಲಿ ಅವಕಾಶ ಸಿಗಬಾರದು. ಅಲ್ಲಿ ಎಐ ತಂತ್ರಜ್ಞಾನ ಬಳಕೆ ಮಾಡಿದ್ರು. ಕರ್ನಾಟಕದಲ್ಲಿ ಏನು ತೆಗೆದುಕೊಂಡು ಬರ್ತಾರೆ ಅಂತ ಗೊತ್ತಿಲ್ಲ. ಚುನಾವಣಾ ಆಯೋಗಕ್ಕೆ ಸುಪ್ರೀಂ ಪವರ್ ಕೊಟ್ಟಿದ್ದಾರೆ.
ಈ ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಕೋರ್ಟ್ ನಲ್ಲೂ ಪ್ರಶ್ನೆ ಮಾಡುವಂತಿಲ್ಲವಂತೆ. ಆ ರೀತಿಯ ಕಾನೂನು ತೆಗೆದುಕೊಂಡು ಬಂದಿದ್ದಾರೆ. ಓಪನ್ ಆಗಿ ಪಕ್ಷಪಾತ, ದುರುಪಯೋಗ ಮಾಡ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯವರು ಎಷ್ಟೇ ಭ್ರಷ್ಟರಾಗಿದ್ದರು ಅವರನ್ನು ಮುಟ್ಟಲ್ಲ. ಚುನಾವಣೆ ಗೆಲ್ಲೋದೆ ಇವರಿಗೆ ಮುಖ್ಯ ಆಗಿದೆ.
ನಮ್ಮ ಪತ್ರಿಕಾ ಸ್ವಾತಂತ್ರ್ಯ ಜಗತ್ತಿನಲ್ಲಿ 157ನೇ ಸ್ಥಾನದಲ್ಲಿದೆ. ಪಾಕಿಸ್ತಾನಕ್ಕಿಂತ ನಾವು ಹಿಂದೆ ಬಿದ್ದಿದ್ದೇವೆ. ಪ್ರಧಾನ ಮಂತ್ರಿ, ಅಮಿತ್ ಶಾಗೆ ಒಂದು ಪ್ರಶ್ನೆ ಕೇಳುವ ರೈಟ್ಸ್ ಇಲ್ಲ. ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವೇ ಇಲ್ಲ. ಅಂತಹ ಸ್ಥಿತಿಯನ್ನು ಮೋದಿ ಸರ್ಕಾರ ತಂದಿಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಜನ
ರಾಜ್ಯದಲ್ಲಿ ನೀಟ್ ಬದಲು ಸಿಇಟಿ ಜಾರಿಗೆ ತರಬೇಕೆಂಬ ಚರ್ಚೆ ವಿಚಾರದ ಪ್ರಶ್ನೆಗೆ, ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಸಾಕಷ್ಟು ಬಾರಿ ಹಗರಣ ನಡೆದಿದೆ. ದೇಶದ ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ ಆಡ್ತಾ ಇದ್ದಾರೆ. ನಮ್ಮಲ್ಲಿ ಸಿಇಟಿ ಇದ್ದಾಗ ಈ ರೀತಿ ತೊಂದ್ರೆ ಆಗ್ತಾ ಇರ್ಲಿಲ್ಲ. ನಮ್ಮ ರಾಜ್ಯದ ಮಕ್ಕಳ ಹಿತರಕ್ಷಣೆ ಕಾಯುವ ಎಲ್ಲಾ ಶಕ್ತಿ ನಮಗಿದೆ. ಎಲ್ಲವನ್ನೂ ಯಾಕೆ ಕೇಂದ್ರಿಕೃತ ಮಾಡಬೇಕು. ಪ್ರತಿಯೊಂದನ್ನು ದೆಹಲಿ ನಿಯಂತ್ರಣ ಯಾಕೆ ? ಗೊತ್ತಾಗದೆ ಇಂತಹ ಎಷ್ಟು ಹಗರಣ ನಡೆದಿದೆಯೋ ಗೊತ್ತಿಲ್ಲ. ಸಿಇಟಿ ನಡೆಸುವುದನ್ನು ರಾಜ್ಯಕ್ಕೆ ಬಿಟ್ಟು ಬಿಡಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm