ಬ್ರೇಕಿಂಗ್ ನ್ಯೂಸ್
20-05-26 11:23 pm HK News Desk ದೇಶ - ವಿದೇಶ
ತಿರುವನಂತಪುರಂ, ಮೇ 20 ಕೇರಳದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಯುಡಿಎಫ್ ಸರ್ಕಾರವು ಎರಡು ದಿನದ ಹೊಯ್ದಾಟದ ಬಳಿಕ ಕಡೆಗೂ ಸಚಿವ ಸಂಪುಟದ ಖಾತೆ ಹಂಚಿಕೆಯನ್ನು ಮಾಡಿ ಅಧಿಕೃತವಾಗಿ ಪ್ರಕಟಿಸಿದೆ. ಮುಖ್ಯಮಂತ್ರಿ ವಿ.ಡಿ. ಸತೀಶನ್ ಕಾಂಗ್ರೆಸ್ ಹೈಕಮಾಂಡ್ ಸೂಚನೆಯನ್ನು ಪಾಲಿಸುತ್ತಿಲ್ಲ ಎಂಬ ಆರೋಪ, ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನ ನಡುವೆಯೇ ಸಿಎಂ ಸಂಪುಟ ಖಾತೆಗಳನ್ನು ಹಂಚಿಕೆ ಮಾಡಿ ರಾಜ್ಯಪಾಲರಿಂದ ಅನುಮೋದನೆ ಪಡೆದಿದ್ದಾರೆ. ಸಚಿವ ಸಂಪುಟದ ಪ್ರಮುಖ ಖಾತೆಗಳ ವಿವರಗಳು ಹೀಗಿವೆ.
ವಿ.ಡಿ. ಸತೀಶನ್ (ಮುಖ್ಯಮಂತ್ರಿ): ಹಣಕಾಸು, ಕಾನೂನು, ಕೇರಳ ಫೈನಾನ್ಷಿಯಲ್ ಕಾರ್ಪೊರೇಷನ್, ಬಂದರುಗಳು, ಮಾಲಿನ್ಯ ನಿಯಂತ್ರಣ, ವಿಮಾನ ನಿಲ್ದಾಣಗಳು, ಮೆಟ್ರೋ ರೈಲು, ರೈಲ್ವೆ ಮತ್ತು ಇತರೇ ಉಳಿದಿರುವ ಖಾತೆಗಳು
ರಮೇಶ್ ಚೆನ್ನಿತ್ತಲ: ಗೃಹ ಇಲಾಖೆ, ವಿಜಿಲೆನ್ಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಕಾರಾಗೃಹಗಳು
ಸನ್ನಿ ಜೋಸೆಫ್ (ಕೆಪಿಸಿಸಿ ಅಧ್ಯಕ್ಷ): ವಿದ್ಯುತ್, ಪರಿಸರ, ಸಂಸದೀಯ ವ್ಯವಹಾರಗಳು ಮತ್ತು ಅನೆರ್ಟ್ (ANERT).
ಕೆ. ಮುರಳೀಧರನ್: ಆರೋಗ್ಯ, ವೈದ್ಯಕೀಯ ಶಿಕ್ಷಣ, ವೈದ್ಯಕೀಯ ವಿಶ್ವವಿದ್ಯಾಲಯ, ಆಯುಷ್, ಡ್ರಗ್ಸ್ ಕಂಟ್ರೋಲ್ ಮತ್ತು ದೇವಸ್ವಂ.
ಎ.ಪಿ. ಅನಿಲ್ ಕುಮಾರ್: ಭೂ ಕಂದಾಯ, ಸಮೀಕ್ಷೆ ಮತ್ತು ಭೂ ದಾಖಲೆಗಳು ಮತ್ತು ಭೂ ಸುಧಾರಣೆಗಳು.
ಪಿ. ಸಿ. ವಿಷ್ಣುನಾಥ್: ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ (KSFDC).
ಎಂ. ಲಿಜು: ಸಹಕಾರ ಮತ್ತು ಅಬಕಾರಿ.
ರೋಜಿ ಎಂ. ಜಾನ್: ಕಾಲೇಜು ಶಿಕ್ಷಣ, ತಾಂತ್ರಿಕ ಶಿಕ್ಷಣ, ವಿಶ್ವವಿದ್ಯಾಲಯಗಳು (ಕೃಷಿ, ಪಶುವೈದ್ಯಕೀಯ, ಮೀನುಗಾರಿಕೆ, ವೈದ್ಯಕೀಯ ಮತ್ತು ಡಿಜಿಟಲ್ ಹೊರತುಪಡಿಸಿ), ಪ್ರವೇಶ ಪರೀಕ್ಷೆ, ಎನ್‌ಸಿಸಿ (NCC) ಮತ್ತು ಅಸ್ಯಾಪ್ ಕೇರಳ (ASAP Kerala).
ಟಿ. ಸಿದ್ದಿಕಿ: ಕೃಷಿ, ಮಣ್ಣಿನ ಸಮೀಕ್ಷೆ ಮತ್ತು ಮಣ್ಣಿನ ಸಂರಕ್ಷಣೆ, ಕೇರಳ ಕೃಷಿ ವಿಶ್ವವಿದ್ಯಾಲಯ ಮತ್ತು ಉಗ್ರಾಣ ನಿಗಮ.
ಕೆ.ಎ. ತುಳಸಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ.
ಬಿಂದು ಕೃಷ್ಣ: ಕಾರ್ಮಿಕ, ಪಶುಸಂಗೋಪನೆ, ಹಾಲು ಮಾರಾಟ ಸಹಕಾರ ಸಂಘಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ.
ಒ.ಜೆ. ಜನೀಶ್: ಕ್ರೀಡೆ, ಯುವಜನ ವ್ಯವಹಾರಗಳು, ಪ್ರಾಣಿ ಸಂಗ್ರಹಾಲಯಗಳು ಮತ್ತು ವಸ್ತು ಸಂಗ್ರಹಾಲಯ
ಪಿ.ಕೆ. ಕುಂಞಾಲಿಕುಟ್ಟಿ (ಮುಸ್ಲಿಂ ಲೀಗ್) : ಕೈಗಾರಿಕೆ ಮತ್ತು ವಾಣಿಜ್ಯ, ಮಾಹಿತಿ ತಂತ್ರಜ್ಞಾನ (IT) ಮತ್ತು ಕೃತಕ ಬುದ್ಧಿಮತ್ತೆ (AI).
ಎನ್. ಶಂಸುದ್ದೀನ್(ಲೀಗ್) : ಸಾರ್ವಜನಿಕ ಶಿಕ್ಷಣ, ವಕ್ಫ್, ಹಜ್ ಯಾತ್ರೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ.
ಕೆ.ಎಂ. ಶಾಜಿ (ಲೀಗ್) : ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ.
ಪಿ.ಕೆ. ಬಶೀರ್ ( ಲೀಗ್) : ಸಾರ್ವಜನಿಕ ಲೋಕೋಪಯೋಗಿ ಇಲಾಖೆ (PWD).
ವಿ.ಇ. ಅಬ್ದುಲ್ ಗಫೂರ್ (ಲೀಗ್) : ಮೀನುಗಾರಿಕೆ, ಹಾರ್ಬರ್ ಇಂಜಿನಿಯರಿಂಗ್ ಮತ್ತು ಸಾಮಾಜಿಕ ನ್ಯಾಯ.
ಮೊನ್ಸ್ ಜೋಸೆಫ್ (ಕೇರಳ ಕಾಂಗ್ರೆಸ್): ನೀರಾವರಿ ಇಲಾಖೆ
ಅನೂಪ್ ಜೇಕಬ್ (ಕೇರಳ ಕಾಂಗ್ರೆಸ್ - ಜೇಕಬ್): ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ.
ಶಿಬು ಬೇಬಿ ಜಾನ್ (ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ - RSP): ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ.
ಸಿ.ಪಿ. ಜಾನ್ (ಕಮ್ಯುನಿಸ್ಟ್ ಮಾರ್ಕ್ಸ್‌ವಾದಿ ಪಕ್ಷ - CMPKSC): ರಸ್ತೆ ಸಾರಿಗೆ, ಮೋಟಾರು ವಾಹನಗಳು ಮತ್ತು ಜಲ ಸಾರಿಗೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am