ಬ್ರೇಕಿಂಗ್ ನ್ಯೂಸ್
07-12-25 10:17 pm HK News Desk ಕರ್ನಾಟಕ
ಚಾಮರಾಜನಗರ, ಡಿ 07 : ಪಾದಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ್ದು, ವೃದ್ಧರು ಸೇರಿದಂತೆ 7 ಮಂದಿ ಗಂಭೀರ ಗಾಯಗೊಂಡ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ. ಇದರಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಯಳಂದೂರು ಪಟ್ಟಣದ ಚೌಡಮ್ಮ, ವೈ.ಕೆ.ಮೋಳೆ ಗ್ರಾಮದ ಲಕ್ಷ್ಮಮ್ಮ, ಕೆ.ದೇವರಹಳ್ಳಿ ಗ್ರಾಮದ ರತ್ನಮ್ಮ ಸೇರಿದಂತೆ 7 ಮಂದಿ ಕೈ-ಕಾಲುಗಳಿಗೆ ಪರಚಿ, ಕಚ್ಚಿ ಗಾಯಗೊಳಿಸಿದೆ. ಪಟ್ಟಣದ ಕೆನರಾ ಬ್ಯಾಂಕ್ ಸಮೀಪ ಬಸ್ಗಾಗಿ ಕಾಯುತ್ತಾ ನಿಂತಿದ್ದವರ ಹಾಗೂ ಪಾದಾಚಾರಿಗಳ ಮೇಲೆ ಎಗರಿಬಿದ್ದಿದೆ. ಅಲ್ಲದೇ, ಕಂಡಕಂಡವರ ಮೇಲೆ ದಾಳಿ ಮಾಡಿ ಪರಾರಿಯಾಗಿದೆ.
ಗಾಯಗೊಂಡವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಗಾಯಗೊಂಡವರಲ್ಲಿ ಹೆಚ್ಚಿನವರು ವೃದ್ಧರಾಗಿದ್ದಾರೆ.
ಇನ್ನು ಬಾಗಲಕೋಟೆಯಲ್ಲಿ ಶಾಲೆಯಿಂದ ಮರಳುತ್ತಿದ್ದ 5 ವರ್ಷದ ಎಲ್‌ಕೆಜಿ ವಿದ್ಯಾರ್ಥಿನಿ ಮೇಲೆ ಬೀದ ನಾಯಿ ದಾಳಿ ಮಾಡಿದ ಘಟನೆ ನಡೆದಿದೆ. ಬಾಗಲಕೋಟೆ ನಗರದ ವಿದ್ಯಾಗಿರಿಯ ಬಳಿ ಘಟನೆ ನಡೆದಿದೆ. 5 ವರ್ಷದ ಮಗು ಅನನ್ಯಾ ತೆಗ್ಗಿ ಮೇಲೆ ಬೀದ ನಾಯಿಗಳು ದಾಳಿ ಮಾಡಿದೆ. ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೊನ್ನೆ ದಾವರಣೆಗೆರೆಯಲ್ಲಿ ರಾಟ್‌ವೀಲರ್ ನಾಯಿ ದಾಳಿಗೆ ಮಹಿಳೆ ಅನಿತಾ ಎಂಬ ಮಹಿಳೆ ಬಲಿಯಾಗಿದ್ದಾರೆ. ದೇಹದ ಯಾವ ಭಾಗವನ್ನೂ ಬಿಡದೇ ನಾಯಿಗಳು ಕಚ್ಚಿ ಹಾಕಿತ್ತು. ಜನಸಾಮಾನ್ಯರ ದಿನನಿತ್ಯದ ಜೀವನವೇ ಆತಂಕದಲ್ಲಿ ಸಾಗುತ್ತಿದೆ. ಮನೆಗಳ ಮುಂದೆ, ಶಾಲಾ ಮಾರ್ಗಗಳಲ್ಲಿ, ಕಾಲೋನಿ ಬೀದಿಗಳಲ್ಲಿ, ಗಾರ್ಡನ್‍ಗಳಲ್ಲಿ-ಎಲ್ಲೆಡೆ ನಾಯಿಗಳ ಗುಂಪುಗಳು ಅಲೆದಾಡುತ್ತಿರುವುದು ಇದೀಗ ಸಾಮಾನ್ಯ ದೃಶ್ಯವಾಗಿದೆ. ವಿಶೇಷವಾಗಿ ಮಕ್ಕಳು ಮತ್ತು ವಯೋವೃದ್ಧರು ಈ ದಾಳಿಗಳ ಪ್ರಮುಖ ಬಲಿಯಾಗುತ್ತಿರುವುದು ಪ್ರದೇಶದ ಪೋಷಕರಲ್ಲಿ ಹೊಸದೊಂದು ಭೀತಿಯನ್ನು ಹುಟ್ಟಿಸಿದೆ.
A sudden attack by a rabid dog left seven pedestrians seriously injured in Yelandur town, causing widespread panic among the local residents. The dog reportedly attacked people near the Canara Bank area, where some were waiting for buses while others were walking along the roadside. The victims, including Choudamma, Lakshmamma from Y.K. Mole village, and Ratnamma from K. Devarahalli village, suffered severe bite injuries on their hands and legs. Most of the injured are elderly individuals.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am