ಬ್ರೇಕಿಂಗ್ ನ್ಯೂಸ್
13-09-25 10:38 pm Bangalore Correspondent ಕರ್ನಾಟಕ
ಬೆಂಗಳೂರು, ಸೆ 13 : ಇ-ಚಲನ್ನ ಮೂಲಕ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಘೋಷಿಸಲಾಗಿದ್ದ ಶೇ.50 ರಿಯಾಯಿತಿ ಅವಧಿ ಮುಗಿದಿದ್ದು, ಬೆಂಗಳೂರಲ್ಲಿ ಬರೋಬ್ಬರಿ 106 ಕೋಟಿ ರೂ ದಂಡ ಸಂಗ್ರಹವಾಗಿದೆ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಘೋಷಿಸಲಾಗಿದ್ದ ಶೇ.50 ರಿಯಾಯಿತಿ ಅವಧಿಯ ಅಂತಿಮ ದಿನವಾದ ಸೆಪ್ಟೆಂಬರ್ 12ರ ದಿನದಾಂತ್ಯಕ್ಕೆ ಎಲ್ಲಾ ವಿಧಾನಗಳ ಮೂಲಕ ಒಟ್ಟು 37,83,173 ಪ್ರಕರಣಗಳು ಇತ್ಯರ್ಥವಾಗಿದ್ದು, 106 ಕೋಟಿ ರೂ. ದಂಡ ಸಂಗ್ರಹಣೆಯಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.

ಇ-ಚಲನ್ನ ಮೂಲಕ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಶೇ.50 ರಿಯಾಯಿತಿಯನ್ನ ರಾಜ್ಯ ಸರ್ಕಾರ ಘೋಷಿಸಿತ್ತು. ಬಿಟಿಪಿ ಅಸ್ತ್ರಂ, ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ಆ್ಯಪ್, ಬೆಂಗಳೂರು ಸಂಚಾರ ಪೊಲೀಸ್ ಅಥವಾ ಕರ್ನಾಟಕ ಒನ್ ವೆಬ್ಸೈಟ್ನಲ್ಲಿ ವಾಹನದ ನೊಂದಣಿ ಸಂಖ್ಯೆಯನ್ನ ನಮೂದಿಸಿ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು.
ಅಲ್ಲದೆ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳು, ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರಕ್ಕೆ ತೆರಳಿ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನ ನೀಡುವ ಮೂಲಕವೂ ಸಹ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಎಲ್ಲ ವಿಧಾನಗಳ ಮೂಲಕ ಒಟ್ಟು 106 ಕೋಟಿ ರೂ ದಂಡವನ್ನು ವಾಹನ ಸವಾರರು ಪಾವತಿಸಿದ್ದಾರೆ. ಈ ಮೂಲಕ 50% ರಿಯಾಯಿತಿ ವ್ಯವಸ್ಥೆಗೆ ಉತ್ತಮ ಸ್ಪಂದನೆ ನೀಡಿದ್ದಾರೆ.
The 50% discount on pending traffic fines in Karnataka, which was offered between August 23 and September 12, has resulted in a whopping ₹106 crore collection in Bengaluru alone, according to the city's traffic police department.
14-04-26 02:04 pm
HK News Staffer
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
ಪಿಗ್ಮಿ ಏಜೆಂಟರು ಮಧ್ಯವರ್ತಿಗಳಲ್ಲ, ಬ್ಯಾಂಕುಗಳ ನೌಕರ...
12-04-26 07:58 pm
14-04-26 10:48 pm
HK News Staffer
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
ಅಮೆರಿಕ- ಇರಾನ್ ಸಂಧಾನ ಯಶಸ್ವಿಯಾಗ್ತಿತ್ತು, ನೆತನ್ಯ...
13-04-26 01:27 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
14-04-26 11:16 pm
HK News Desk
ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ,...
14-04-26 11:52 am
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ...
11-04-26 11:14 pm
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm