ಬ್ರೇಕಿಂಗ್ ನ್ಯೂಸ್
13-09-25 08:46 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.13: ಕುರುಬ, ಬ್ರಾಹ್ಮಣ, ಲಿಂಗಾಯತ, ದಲಿತ, ವೈಶ್ಯ ಮತ್ತು ಒಕ್ಕಲಿಗರಲ್ಲಿ ಯಾರೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದರೂ ಅವರೆಲ್ಲರೂ ಕ್ರೈಸ್ತರೇ ಆಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮೀಕ್ಷಾ ಕೈಪಿಡಿ ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
'ಮತಾಂತರಗೊಂಡವರ ಧರ್ಮವನ್ನು ಉಲ್ಲೇಖಿಸುವಾಗ ಅವರ ಮೂಲ ಜಾತಿಯ ಹೆಸರು ಸೇರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆಯಲ್ಲ' ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಮತಾಂತರಗೊಂಡವರು ಕ್ರೈಸ್ತರೇ ಆಗುತ್ತಾರೆ. ಅದರಲ್ಲಿ ಜಾತಿ ಭೇದ ಬರುವುದಿಲ್ಲ ಎಂದರು.
'ಸಮೀಕ್ಷೆಗೆ ಬಂದಾಗ ಏನು ಬರೆಯುತ್ತಾರೋ ಬರೆಯಲಿ. ಮತಾಂತರಗೊಂಡವರು ಅಥವಾ ಜಾತಿ-ಧರ್ಮದ ಹೆಸರಿನ ಗೊಂದಲ ಇದ್ದರೆ ಅದನ್ನು ಹಿಂದುಳಿದ ವರ್ಗಗಳ ಆಯೋಗ ವಿಶ್ಲೇಷಣೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ. ನಾವು ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿ ಮಾತ್ರ ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ್ದ ಜಾತಿ ಪಟ್ಟಿಯಲ್ಲಿ ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್ ಸೇರಿ 100ಕ್ಕೂ ಹೆಚ್ಚು ಜಾತಿಗಳನ್ನು ಕ್ರಿಶ್ಚಿಯನ್ ಧರ್ಮದ ಹೆಸರಿನಲ್ಲಿ ಸೇರಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
'ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರು ನಮ್ಮ ಜಾತಿಯೊಳಗೆ ನುಸುಳಿ ನಮ್ಮ ಪಾಲಿನ ಮೀಸಲಾತಿಯನ್ನು ಕಬಳಿಸುವ ಹುನ್ನಾರಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ. ಸರ್ಕಾರ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಕ್ಯಾಥೋಲಿಕ್, ಪ್ರೊಟೆಸ್ಟಂಟ್, ಪೆಂಟಕೋಸ್ಟ್ ಇತ್ಯಾದಿ ಮೂಲ ಕ್ರೈಸ್ತ ಪಂಗಡಗಳ ಹೆಸರೇ ಇಲ್ಲ. ಅವರಿಗೆ ಕೇವಲ ಕ್ರೈಸ್ತರೆಂದು ಗುರುತಿಸಿಕೊಳ್ಳಲು ಅವಕಾಶ ನೀಡಿದೆ' ಎಂದು ಬಿಜೆಪಿ ನಾಯಕರು ದೂರಿದ್ದರು.
'ಈ ರೀತಿಯ ಜಾತಿ ಪಟ್ಟಿಗಳು ಸರ್ಕಾರದ ಅಧಿಕೃತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ ಪಟ್ಟಿಯಲ್ಲಿ ಇವೆಯೇ? ಈ ಪಟ್ಟಿ ಕಾಂತರಾಜ, ನಾಗಮೋಹನದಾಸ್ ಸಮೀಕ್ಷೆಯಲ್ಲಿ ಏಕೆ ಇರಲಿಲ್ಲ. ಯಾವ ಉದ್ದೇಶದಿಂದ ಈಗ ಈ ರೀತಿ ಕ್ರೈಸ್ತ ಜಾತಿಗಳನ್ನು ಸೇರಿಸಲಾಗಿದೆ. ತಕ್ಷಣ ಈ ಪಟ್ಟಿ ಕೈಬಿಡಬೇಕು' ಎಂದು ಬಿಜೆಪಿ ನಾಯಕರ ನಿಯೋಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ ಅವರನ್ನು ಒತ್ತಾಯಿಸಿತ್ತು.
Karnataka Chief Minister Siddaramaiah has stated that individuals who have converted to Christianity — whether from Kuruba, Brahmin, Lingayat, Dalit, Vaishya, or Vokkaliga communities — should be regarded simply as Christians, without any caste distinction.
29-12-25 11:13 pm
Bangalore Correspondent
ಡ್ರಗ್ಸ್ ಫ್ಯಾಕ್ಟರಿ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳಿ...
29-12-25 07:24 pm
ವ್ಯಾಪಕ ಭ್ರಷ್ಟಾಚಾರ ; ಕೋಲಾರದಲ್ಲಿ 25 ಗ್ರಾಪಂ ವಿರು...
28-12-25 09:03 pm
Seabird Bus, Drink and Drive: ಮೆಜೆಸ್ಟಿಕ್ ನಲ್ಲ...
27-12-25 02:40 pm
ಚಿತ್ರದುರ್ಗ ಬಸ್ ದುರಂತ ; ಗಾಯಗೊಂಡಿದ್ದ ಸೀಬರ್ಡ್...
26-12-25 09:38 pm
27-12-25 04:29 pm
HK News Desk
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
29-12-25 11:03 pm
Mangalore Correspondent
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
ಉಡುಪಿ ; ಬುದ್ದಿ ಮಾತು ಹೇಳಿದ್ದಕ್ಕೆ 17 ವರ್ಷದ ಯುವತ...
29-12-25 01:24 pm
ಸಕಲೇಶಪುರ- ಸುಬ್ರಹ್ಮಣ್ಯ 55 ಕಿಮೀ ಘಾಟ್ ವಿದ್ಯುದೀಕರ...
29-12-25 11:45 am
29-12-25 03:02 pm
Mangalore Correspondent
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm
ಬೈಕಿನಲ್ಲಿ 19 ಕೇಜಿ ಗೋಮಾಂಸ ಸಾಗಣೆ ; ಬಜ್ಪೆ ಮಳಲಿಯಲ...
27-12-25 07:42 pm
ಧನದಾಹಕ್ಕೆ ನವ ವಿವಾಹಿತೆ ಗಾನವಿ ಬಲಿ ಪ್ರಕರಣ ; ತಲೆಮ...
27-12-25 02:28 pm