Rape Case, Prajwal Revanna Verdict : ಮೈಸೂರಿನ ಕೆಲಸದಾಳು ಮಹಿಳೆಯ ಅತ್ಯಾಚಾರ ಪ್ರಕರಣ ; ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು, ಕೋರ್ಟ್ ಹಾಲಿನಲ್ಲೇ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಮಾಜಿ ಸಂಸದ 

01-08-25 02:55 pm       Bangalore Correspondent   ಕರ್ನಾಟಕ

ಮೈಸೂರಿನ ಕೆಆರ್​​ ನಗರ ಮೂಲದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ಪ್ರಕಟಿಸಿದೆ. 

ಬೆಂಗಳೂರು, ಆಗಸ್ಟ್ 1 : ಮೈಸೂರಿನ ಕೆಆರ್​​ ನಗರ ಮೂಲದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ಪ್ರಕಟಿಸಿದೆ. 

ಜಡ್ಜ್ ಸಂತೋಷ್ ಗಜಾನನ ಭಟ್, ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದರು. ಇದೀಗ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದು ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 2ರಂದು ಪ್ರಕಟಿಸುವ ಸಾಧ್ಯತೆಯಿದೆ. 

ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಕಣ್ಣೀರಿಟ್ಟಿದ್ದು ಕಣ್ಣು ಒರೆಸುತ್ತಲೇ ಹೊರಗೆ ಬಂದಿದ್ದಾನೆ. ಕೆ.ಆರ್​​ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜುಲೈ 30ರಂದೇ ನ್ಯಾಯಾಲಯ ವಿಚಾರಣೆ ಪೂರ್ತಿಗೊಳಿಸಿತ್ತು. ಕೆಲವು ಕಾರಣಗಳಿಂದಾಗಿ ತೀರ್ಪು ಕಾಯ್ದಿರಿಸುತ್ತಿರುವುದಾಗಿ ಜಡ್ಜ್ ತಿಳಿಸಿದ್ದರು. ಗೂಗಲ್ ಮ್ಯಾಪ್ ಮತ್ತು ಮೊಬೈಲ್ ಸಾಕ್ಷ್ಯದ ಬಗ್ಗೆ ಪ್ರಾಸಿಕ್ಯೂಶನ್ ಮತ್ತು ಆರೋಪಿ ಪರ ವಕೀಲರ ಸ್ಪಷ್ಟನೆ ಕೇಳಿದ ಬಳಿಕ ತೀರ್ಪು ಪ್ರಕಟಿಸಿದ್ದಾರೆ. 

ಹಲವಾರು ಮಹಿಳೆಯರ ಮೇಲೆ ಸರಣಿ ಅತ್ಯಾಚಾರ ಎಸಗಿರುವ ಆರೋಪ ಪ್ರಜ್ವಲ್ ರೇವಣ್ಣ ಮೇಲಿದ್ದು, ಮೈಸೂರಿನ ಕೆಆರ್ ನಗರದ ಕೆಲಸದಾಳು ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಒಂದು. ಚುನಾವಣೆ ಸಂದರ್ಭದಲ್ಲಿ ವಿಡಿಯೋ ಲೀಕ್ ಆಗುತ್ತಿದ್ದಂತೆ ದೂರು ನೀಡಲು ಹೋದ ಮಹಿಳೆಯನ್ನು ಅಪಹರಿಸಿ ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿಹಾಕಲಾಗಿತ್ತು ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮಾಜಿ ಸಚಿವ ಹೆಚ್​ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿದಂತೆ ಒಟ್ಟು 9 ಆರೋಪಿಗಳಿದ್ದಾರೆ. ರೇವಣ್ಣ ಮತ್ತು ಭವಾನಿಗೆ ಜಾಮೀನು ಸಿಕ್ಕಿದ್ದರೂ, ಪ್ರಜ್ವಲ್ ಒಂದು ವರ್ಷದಿಂದ ಜೈಲಿನಲ್ಲೇ ಇದ್ದಾನೆ.

In a significant development, the Special Court for People’s Representatives in Bengaluru has declared former Hassan MP Prajwal Revanna guilty in the abduction and rape case involving a working woman from KR Nagar in Mysuru district.