ಬ್ರೇಕಿಂಗ್ ನ್ಯೂಸ್
31-10-23 08:42 pm Bengaluru Correspondent ಕರ್ನಾಟಕ
ಬೆಂಗಳೂರು, ಅ.31: ಇಸ್ರೋ ಮುಖ್ಯಸ್ಥ ಎಸ್. ಸೋಮನಾಥನ್, ಖ್ಯಾತ ಹಾಸ್ಯ ನಟರಾದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ್, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಸಮಾಜ ಸೇವಕ ಚಾರ್ಮಾಡಿ ಹಸನಬ್ಬ, ಸಾಹಿತಿ ಲಕ್ಷ್ಮೀಪತಿ ಕೋಲಾರ, ಯಕ್ಷಗಾನದ ಖ್ಯಾತ ಮಹಿಳಾ ಭಾಗವತೆ ಲೀಲಾವತಿ ಬೈಪಡಿತ್ತಾಯ ಸೇರಿದಂತೆ 68 ಸಾಧಕರಿಗೆ ಮತ್ತು 10 ಸಂಘಟನೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಎಸ್ ಡಿಎಂ ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ, ಸಂಗೀತ ಕ್ಷೇತ್ರದಲ್ಲಿ ಬೆಂಗಳೂರಿನ ಡಾ.ನಯನ ಎಸ್. ಮೋರೆ, ಧಾರವಾಡದ ನೀಲಾ ಎಂ. ಕೊಡ್ಗಿ, ಬೆಂಗಳೂರಿನ ಶಬ್ಬೀರ್ ಅಹಮದ್, ಚಲನಚಿತ್ರ ಕ್ಷೇತ್ರದಲ್ಲಿ ಬೆಂಗಳೂರಿನ ಡಿಂಗ್ರಿ ನಾಗರಾಜ ಮತ್ತು ಬ್ಯಾಂಕ್ ಜನಾರ್ದನ, ರಂಗಭೂಮಿ ಕ್ಷೇತ್ರದಲ್ಲಿ ಶಿವಮೊಗ್ಗದ ಎ.ಜಿ ಚಿದಂಬರ ರಾವ್ ಜಂಬೆ, ಮೈಸೂರಿನ ಪಿ. ಗಂಗಾಧರ ಸ್ವಾಮಿ, ಧಾರವಾಡದ ಎಚ್.ಬಿ ಸರೋಜಮ್ಮ, ಬಾಗಲಕೋಟೆಯ ತಯ್ಯಬಖಾನ್ ಎಂ. ಇನಾಮದಾರ, ಡಾ. ವಿಶ್ವನಾಥ್ ವಂಶಾಕೃತ ಮಠ, ಚಿತ್ರದುರ್ಗದ ಪಿ ತಿಪ್ಪೇಸ್ವಾಮಿ ಅವರಿಗೆ ಲಭಿಸಿದೆ.
ಶಿಲ್ಪಕಲೆ, ಚಿತ್ರಕಲೆ, ಕರಕುಶಲ ಕ್ಷೇತ್ರಗಳಲ್ಲಿ ದಾವಣಗೆರೆಯ ಟಿ ಶಿವಶಂಕರ್, ರಾಯಚೂರಿನ ಕಾಳಪ್ಪ ವಿಶ್ವಕರ್ಮ, ಬೆಂಗಳೂರಿನ ಮಾರ್ಥಾ ಜಾಕಿಮೋವಿಚ್, ಮೈಸೂರಿನ ಪಿ. ಗೌರಯ್ಯ, ಯಕ್ಷಗಾನ ಮತ್ತು ಬಯಲಾಟ ಕ್ಷೇತ್ರಗಳಲ್ಲಿ ಉಡುಪಿಯ ಅರ್ಗೋಡು ಮೋಹನ್ ದಾಸ್ ಶೆಣೈ, ದಕ್ಷಿಣ ಕನ್ನಡದ ಕೆ. ಲೀಲಾವತಿ ಬೈಪಾಡಿತ್ತಾಯ, ಕೇಶಪ್ಪ ಶಿಳ್ಳೆಕ್ಯಾತರ, ದಳವಾಯಿ ಸಿದ್ದಪ್ಪ(ಹಂದಿಜೋಗಿ) ಅವರಿಗೆ ಪ್ರಶಸ್ತಿ ಘೋಷಣೆಯಾಗಿದೆ.
ಕರ್ನಾಟಕ ಸಂಘ, ಶಿವಮೊಗ್ಗ, ಬಿಎನ್ ಶ್ರೀರಾಮ ಪುಸ್ತಕ ಪ್ರಕಾಶನ ಮೈಸೂರು, ಮಿಥಿಕ್ ಸೊಸೈಟಿ, ಬೆಂಗಳೂರು, ಕರ್ನಾಟಕ ಸಾಹಿತ್ಯ ಸಂಘ ಯಾದಗಿರಿ, ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ (ರಿ), ದಾವಣಗೆರೆ, ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ದಕ್ಷಿಣ ಕನ್ನಡ, ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ, ಬಾಗಲಕೋಟೆ, ಚಿನ್ನರ ಬಿಂಬ, ಮುಂಬೈ, ಮಾರುತಿ ಜನಸೇವಾ ಸಂಘ ದಕ್ಷಿಣ ಕನ್ನಡ, ವಿದ್ಯಾದಾನ ಸಮಿತಿ, ಗದಗ ಜಿಲ್ಲೆ ಎಂಬ ಹತ್ತು ಸಂಸ್ಥೆಗಳಿಗೆ ಪ್ರಶಸ್ತಿ ಲಭಿಸಿದೆ.
ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಬಳಿಕ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವಿಚಾರವಾಗಿ ಐದು ಉಪ ಸಮಿತಿಗಳನ್ನು ಮಾಡಿದ್ದೆವು. ಪ್ರಶಸ್ತಿ ವಿಚಾರವಾಗಿ ಯಾವುದೇ ಒತ್ತಡ ಹೇರಲಿಲ್ಲ. ಪ್ರಶಸ್ತಿ ವಿಜೇತರಿಗೆ ಐದು ಲಕ್ಷ ರೂಪಾಯಿ ಹಣ ಹಾಗೂ 25 ಗ್ರಾಂ ಚಿನ್ನದ ಪದಕ ನೀಡಲಿದ್ದೇವೆ ಎಂದು ತಿಳಿಸಿದರು.
The state government on Tuesday announced a list of 65 Rajyotsava awardees which includes Indian Space Research Organisation (Isro) chairman S Somanath and 10 organisations. Making the announcement, Kannada and Culture Minister Shivaraj Tangadagi said the recipients will also include two people from Davanagere and Uttara Kannada district who have crossed 100 years of age, 13 women, 54 men and one transgender from Bidar. The award includes a purse of Rs 5 lakh and a 25 gm gold medal and citation.
29-08-25 10:51 pm
HK News Desk
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 10:54 pm
Mangalore Correspondent
Talapady Accident, Ksrtc, Death, Mangalore: ತ...
29-08-25 09:08 pm
Mangalore, Eric Ozario, Konkani, Death: ಮಾಂಡ್...
29-08-25 08:13 pm
Mahesh Shetty Thimarodi, SIT, Mangalore: ಬೆಳ್...
29-08-25 03:48 pm
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm