ಬ್ರೇಕಿಂಗ್ ನ್ಯೂಸ್
25-08-22 12:28 pm HK News Desk ಕರ್ನಾಟಕ
ಶಿವಮೊಗ್ಗ, ಆಗಸ್ಟ್ 25: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ.
ನಾಲಗೆ ಕತ್ತರಿಸುವುದಾಗಿ ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ. ಮಲ್ಲೇಶ್ವರನಗರದಲ್ಲಿರುವ ಈಶ್ವರಪ್ಪ ಮನೆಗೆ ಅನಾಮಧೇಯ ಪತ್ರ ಬಂದಿದೆ.
ಮುಸ್ಲಿಂ ಗೂಂಡಾಗಳು ಎಂದು ಹೇಳುವ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನಲ್ಲಿ ಕಾಲೇಜು ಕಟ್ಟಲು ಬಳಸ್ತಿರುವುದು ಮುಸ್ಲಿಮರು ಕೊಟ್ಟಿರುವ ಸಿಮೆಂಟ್ ಬ್ಯಾಗ್ ಗಳು . ಆದರೂ ನಿನಗೆ ಮುಸ್ಲಿಮರು ಬೇಡ, ನಿನಗೆ ನಾಚಿಕೆಯಾಗಬೇಕು. ಮಗನೆ.. ನಿನ್ನ ನಾಲಗೆ ಕಟ್ ಮಾಡುತ್ತೇವೆ ಹುಷಾರ್ ಎಂದು ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ.
ನಾನು ಹೆದರಲ್ಲ, ಬೆದರಲ್ಲ ;
ಇನ್ನು ಈ ಬಗ್ಗೆ ಮಾತನಾಡಿರುವ ಕೆ.ಎಸ್.ಈಶ್ವರಪ್ಪ, ಯಾರೋ ಹೇಡಿಗಳು ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ನಾನು ಹೆದರಲ್ಲ, ಬೆದರಲ್ಲ. ತನಿಖೆ ನಡೆಸಿ ಹೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದೇನೆ, ಕ್ರಮಕೈಗೊಳ್ಳುವ ವಿಶ್ವಾಸವಿದೆ ಎಂದರು.
ಕೊಲೆ, ದರೋಡೆ ಮಾಡುವ ಮುಸಲ್ಮಾನರಿಗೆ ಗೂಂಡಾ ಎಂದು ಕರೆಯುತ್ತೇನೆ. ಎಲ್ಲಾ ಮುಸಲ್ಮಾರಿಗೆ ನಾನು ಹಾಗೆ ಕರೆದಿಲ್ಲ. ಹಿಂದೂ ಹರ್ಷಾ, ಪ್ರವೀಣ್ ನೆಟ್ಟಾರ್ ಕೊಲೆ ಮಾಡಿದವರು ಹೇಡಿಗಳಂತೆ ಕೃತ್ಯ ಎಸಗಿದ್ದಾರೆ. ಮೊನ್ನೆ ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕು ಇರಿದು ಹೋಗಿದ್ದೂ ಹೇಡಿತನದಿಂದ. ಎದುರು ಬಂದರೆ ಬೇರೆ ತರಹ, ಈ ಪತ್ರವೂ ಹೇಡಿತನದ್ದು, ನಾನು ಹದರೋದಿಲ್ಲ. ಯಾವ ಮುಸ್ಲಿಂ ಗೂಂಡಾ ಪ್ರವೃತ್ತಿ ಮಾಡ್ತಾರೋ ಅಂಥವರಿಗೆ ಗೂಂಡಾ ಅಂತ ಕರೆಯದೇ, ಒಳ್ಳೇಯವರು ಎನ್ನಬೇಕಾ? ಯಾರೋ ಹೇಡಿ ಗುಂಡಾ ಪ್ರವೃತ್ತಿಯವನೇ ಈ ಪತ್ರ ಬರೆದಿರಬೇಕು. ಪತ್ರ ಬಂದಿದೆ, ಎಲ್ಲಿಂದ ಎಂಬುದು ಗೊತ್ತಿಲ್ಲ. ಈ ಹಿಂದೆ ವಿದೇಶದಿಂದಲೂ ಕರೆ ಬಂದಿತ್ತು. ಯಾರೋ ಹೇಡಿ ಗೂಂಡಾ ಪ್ರವೃತ್ತಿಯವನೇ ಇರಬೇಕು' ಎಂದು ಈಶ್ವರಪ್ಪ ತಿಳಿಸಿದರು.
BJP leader and former minister K S Eshwarappa has reportedly received a threat letter by post. Written in Kannada, the letter by an unidentified person threatens to cut the former minister's tongue.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm