ಬ್ರೇಕಿಂಗ್ ನ್ಯೂಸ್
28-07-22 11:04 am Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 28 : ಬಿಜೆಪಿ ಕಾರ್ಯಕರ್ತನ ಕೊಲೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಒಳಗಡೆಯೇ ಆಕ್ರೋಶದ ಕಿಡಿ ಎದ್ದಿದ್ದು ರಾಜ್ಯ ಸರಕಾರದ ಮೇಲೆ ತೀವ್ರ ಒತ್ತಡ ಬಿದ್ದಿದೆ. ಇದೇ ವೇಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮುಖ್ಯಮಂತ್ರಿ ಬೊಮ್ಮಾಯಿಗೆ ಫೋನ್ ಮಾಡಿ ತೀವ್ರ ಚಾಟಿ ಬೀಸಿದ್ದಾರೆ. ಹೈಕಮಾಂಡ್ ಚಾಟಿಯಿಂದ ಎಚ್ಚೆತ್ತ ಸಿಎಂ ಬೊಮ್ಮಾಯಿ ತನ್ನ ಸರಕಾರಕ್ಕೆ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಏರ್ಪಡಿಸಿದ ಜನೋತ್ಸವ ಸಮಾರಂಭವನ್ನು ರಾತ್ರೋರಾತ್ರಿ ಬಂದ್ ಮಾಡಿದ್ದಾರೆ.
ನನ್ನ ಸರ್ಕಾರಕ್ಕೆ ಒಂದು ವರ್ಷ, ಯಡಿಯೂರಪ್ಪ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿದೆ. ಜನಪರವಾಗಿ ಮಾಡಿರುವ ಕೆಲಸಕ್ಕೆ ಜನೋತ್ಸವ ಮಾಡಲು ನಿಶ್ಚಯಿಸಿದ್ದೆವು. ಆದರೆ ಕಾರ್ಯಕರ್ತರ ನೋವಿನ ಮಧ್ಯೆ ಜನೋತ್ಸವ ಮಾಡುವುದು ಬೇಡವೆಂದು ಕಾರ್ಯಕ್ರಮ ರದ್ದು ಮಾಡುತ್ತಿದ್ದೇನೆ ಎಂದು ಹೇಳಿದರು.

ಹತ್ಯೆ ಘಟನೆ ಮತ್ತು ಕಾರ್ಯಕರ್ತರ ಆಕ್ರೋಶದ ಬಗ್ಗೆ ಮಾಹಿತಿ ಪಡೆದಿರುವ ಹೈಕಮಾಂಡ್, ಇಂಥ ಸಂದರ್ಭದಲ್ಲಿ ಜನೋತ್ಸವ ಮಾಡಿ ಏನು ಸಂದೇಶ ಕೊಡುತ್ತಿದ್ದೀರಿ ಎಂದು ತರಾಟೆಗೆತ್ತಿಕೊಂಡಿತ್ತು. ಸ್ವತಃ ರಾಷ್ಟ್ರೀಯ ಅಧ್ಯಕ್ಷರೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೆಂದು ಹೇಳಲಾಗಿತ್ತು. ಆದರೆ ನಡ್ಡಾ ಫೋನ್ ಮಾಡಿ, ತನಗೆ ರಕ್ತದೋಕುಳಿಯ ಸ್ವಾಗತ ಬೇಡ ಎಂದು ಹೇಳಿದ್ದು ರಾಜ್ಯ ಬಿಜೆಪಿಗೆ ಶಾಕ್ ಆಗಿದೆ.



ಪ್ರವೀಣ್ ಹತ್ಯೆಯನ್ನು ಖಂಡಿಸಿ ಇಡೀ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಲವು ಜಿಲ್ಲಾ ಘಟಕದಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಜವಾಬ್ದಾರಿಗೆ ರಾಜಿನಾಮೆ ನೀಡಿದ್ದಾರೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸಾಂತ್ವನ ಹೇಳಲು ಹೋಗಿದ್ದ ವೇಳೆ ಅವರ ಕಾರನ್ನೇ ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಹಲ್ಲೆಗೂ ಯತ್ನಿಸಲಾಗಿತ್ತು. ಇಂಥ ಬೆಳವಣಿಗೆ ಆಗಿದ್ದರೂ, ಕಾರ್ಯಕ್ರಮ ರದ್ದು ಪಡಿಸುವ ಇರಾದೆ ರಾಜ್ಯ ಬಿಜೆಪಿಗೆ ಇರಲಿಲ್ಲ. ಸಚಿವ ಸುಧಾಕರ್ ನೇತೃತ್ವದಲ್ಲಿ ಕಾರ್ಯಕ್ರಮ ಏರ್ಪಾಡು ಆಗಿತ್ತು. ಆದರೆ ಹೈಕಮಾಂಡ್ ಚಾಟಿ ಬೀಸುತ್ತಲೇ ರಾತ್ರೋರಾತ್ರಿ ಸುದ್ದಿಗೋಷ್ಟಿ ಕರೆದು ಮುಖ್ಯಮಂತ್ರಿಯೇ ಕಾರ್ಯಕ್ರಮ ರದ್ದುಪಡಿಸಿದ್ದಾರೆ.
Chief Minister Basavaraj Bommai, in the early hours of Thursday, 28 July 2022, called an emergency press meeting and announced that he would be cancelling all events celebrating his one-year anniversary as chief minister and three years of the BJP's rule in Karnataka.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm