ಬ್ರೇಕಿಂಗ್ ನ್ಯೂಸ್
22-09-21 06:31 pm Source ; One India Kannada ಉದ್ಯೋಗ
ಕೊಪ್ಪಳ, ಸೆಪ್ಟೆಂಬರ್ 22 : ಎಲೆಕ್ಟ್ರಿಷಿಯನ್ ಟ್ರೇಡ್ ವಿಷಯ ಬೋಧಿಸಲು ಕೊಪ್ಪಳ ಜಿಲ್ಲೆಯಲ್ಲಿ ಅತಿಥಿ ಬೋಧಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 30ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
2021-22ನೇ ಸಾಲಿಗೆ ಮಂಗಳೂರು ಗ್ರಾಮ ಹಾಗೂ ಮುಧೋಳ ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ Electrician Trade ವಿಷಯಕ್ಕೆ ತಲಾ ಒಬ್ಬ ಅತಿಥಿ ಬೋಧಕರನ್ನು ನೇಮಕಾರಿ ಮಾಡಿಕೊಳ್ಳಲಾಗುತ್ತಿದೆ.
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಎನ್‌ಟಿಸಿ (ಓಖಿಅ), ಎನ್‌ಎಸಿ (ಓಂಅ) ವ್ಯಾಸಂಗ ಮಾಡಿರಬೇಕು. 3 ವರ್ಷ ಅನುಭವ ಹೊಂದಿರಬೇಕು ಅಥವಾ ಡಿಇಇ (ಆ.ಇ.ಇ) ವಿದ್ಯಾರ್ಹತೆ ಹೊಂದಿದ ಮತ್ತು 2 ವರ್ಷ ಅನುಭವವಿರುವವರು ಅರ್ಜಿ ಹಾಕಬಹುದು. ಬಿಇ ಎಲೆಕ್ಟ್ರಾನಿಕ್ಸ್ ಹೊಂದಿದ 1 ವರ್ಷ ಅನುಭವ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಹ ಅಭ್ಯರ್ಥಿಗಳು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕುಕನೂರು ಈ ವಿಳಾಸಕ್ಕೆ ಸೆಪ್ಟೆಂಬರ್ 30 ರೊಳಗಾಗಿ ಖುದ್ದಾಗಿ ಭೇಟಿ ನೀಡಿ ತಮ್ಮ ಬಯೋಡೆಟಾ ಹಾಗೂ ಶೈಕ್ಷಣಿಕ ಹಾಗೂ ಅನುಭವದ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕುಕನೂರ 583232 ಭೇಟಿ ಮಾಡಬಹುದು ಅಥವ 9740358208 ಸಂಖ್ಯೆಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಸೆ. 24 ರಂದು ಉದ್ಯೋಗ ಮೇಳ; ಕಲಬುರಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಸೆಪ್ಟೆಂಬರ್ 24ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಪ್ರತಿಷ್ಠಿತ 20 ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಸೆಪ್ಟೆಂಬರ್ 24 ರಂದು ಬೆಳಗ್ಗೆ 10 ರಿಂದ ಸಂಜೆ 5.30ರ ತನಕ ಕಲಬುರಗಿ ನಗರದ ಸರ್ಕಾರಿ (ಪುರುಷ) ತರಬೇತಿ ಸಂಸ್ಥೆಯಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಉದ್ಯೋಗ ಮೇಳದಲ್ಲಿ ತಾಂತ್ರಿಕ ಹಾಗೂ ತಾಂತ್ರಿಕೇತರ ಸೇವೆಗಳು, ಅಟೋಮೊಬೈಲ್ಸ್ ಫೈನಾನ್ಸ್, ರಿಟೇಲ್ ಇತರೆ ಸೇವೆಗಳಲ್ಲಿ ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
10ನೇ ತರಗತಿಯ ವಿದ್ಯಾರ್ಹತೆಯಿಂದ ವಿವಿಧ ವಿಷಯಗಳಲ್ಲಿ ಶೈಕ್ಷಣಿಕ ಪದವಿ ಪಡೆದ ಅರ್ಹತೆ ಹೊಂದಿದವರು ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಬಹುದಾಗಿದೆ.
ಉದ್ಯೋಗ ಮೇಳಕ್ಕೆ ಆಗಮಿಸುವಾಗ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಪ್ರಮಾಣ ಪತ್ರ, ಆಧಾರ್ ಕಾರ್ಡ್, ವೈಯಕ್ತಿಕ ಬಯೋಡಾಟಾದೊಂದಿಗೆ ಬರಬೇಕು. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472-225569, ಮೊಬೈಲ್ ಸಂಖ್ಯೆ 8317384664, 9538155569 ಸಂಪರ್ಕಿಸಲು ಕೋರಲಾಗಿದೆ.

ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ; ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯದ ಮಡಿಕೇರಿ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಗೌರವ ಸಂಭಾವನೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಜಿ ಕರೆಯಲಾಗಿದೆ.
ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಾಗಿರಬೇಕು. ಅರ್ಜಿಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಂದ ಪಡೆದು ಭರ್ತಿ ಮಾಡಿ ಸಲ್ಲಿಸಲು ಅಕ್ಟೋಬರ್ 21 ಕೊನೆಯ ದಿನವಾಗಿದೆ.
ಮೀಸಲಾತಿ ವಿವರ; ವಿರಾಜಪೇಟೆ ತಾಲೂಕಿನ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಾದ ಹೊಸೂರು, ಸಾ. ಅ (ಮ. ಅ), ಚೆಂಬೆಬೆಳ್ಳೂರು ಪ್ರವರ್ಗ-1 (ಅಂ. ವಿ) ಮತ್ತು ಕೆದಮಯಳ್ಳೂರು ಸಾ. ಅ (ಸಾ. ಅ) ಆಗಿದೆ. ಅರ್ಜಿಯ ಜೊತೆ ವಿದ್ಯಾರ್ಹತೆ ಹಾಗೂ ಇತರೆ ದಾಖಲೆಗಳ ದೃಢೀಕರಿಸಿದ ಪ್ರತಿಗಳನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಸಲ್ಲಿಸಬೇಕು.
ಆಸಕ್ತರು ಹೆಚ್ಚಿನ ವಿವರಗಳಿಗೆ ಮುಖ್ಯ ಗ್ರಂಥಾಲಯಾಧಿಕಾರಿಯವರ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಮಡಿಕೇರಿ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08272 225463. ಸದರಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.
Apply for Electrician Trade Guest Teacher post at Koppal. Candidates can apply till September 30, 2021.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm