ಬ್ರೇಕಿಂಗ್ ನ್ಯೂಸ್
07-09-21 09:20 pm Source ; One India Kannada ಉದ್ಯೋಗ
ಬೆಂಗಳೂರು, ಸೆಪ್ಟೆಂಬರ್ : ಅಮೆಜಾನ್.ಕಾಂ ಅಂತಾರಾಷ್ಟ್ರೀಯ ಕಂಪನಿಯು ಜಾಗತಿಕ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡುತ್ತಿದೆ. ಸೆಪ್ಟೆಂಬರ್ 15ರಿಂದ ವಿಶ್ವದೆಲ್ಲೆಡೆ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಂಡಿ ಜಸ್ಸಿ ಹೇಳಿದ್ದಾರೆ.
ರೀಟೇಲ್ ಹಾಗೂ ಕ್ಲೌಡ್, ಜಾಹೀರಾತು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲ ಬೇಡಿಕೆ ಹೆಚ್ಚಾಗಿದೆ. ಸಂಸ್ಥೆ ಆರಂಭಿಸಲಿರುವ ಪ್ರಾಜೆಕ್ಟ್ ಕ್ಯುಪಿರ್ ಜಾರಿಗೊಳಿಸಲು ಹೊಸ ನೇಮಕಾತಿ ಆರಂಭ ಅಗತ್ಯವಿದೆ. ಉಪಗ್ರಹ ಆಧಾರಿತವಾಗಿ ಬ್ರಾಡ್ಬ್ಯಾಂಡ್ ವಿಸ್ತರಣೆಗೆ ಅಮೆಜಾನ್ ಮುಂದಾಗಿದೆ.
ಜಾಗತಿಕವಾಗಿ 275,000 ಮಂದಿ ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್ ಈಗ ಕೆರಿಯರ್ ಡೇ ಮೂಲಕ ಇನ್ನೂ ಶೇ. 20 ರಷ್ಟು (55 ಸಾವಿರ ಮಂದಿ) ಟೆಕ್ ಮತ್ತು ಕಾರ್ಪೊರೇಟ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ಕಂಪನಿಯ ಮುಖ್ಯಸ್ಥ ಆಂಡಿ ಜಸ್ಸಿ ಹೇಳಿದ್ದಾರೆ
ಈ ಪೈಕಿ 40,000 ಮಂದಿ ಸಿಬ್ಬಂದಿ ಅಮೆರಿಕದಲ್ಲಿ ನೇಮಕವಾಗಲಿದ್ದು, ಮಿಕ್ಕಂತೆ ಭಾರತ, ಜರ್ಮನಿ ಮತ್ತು ಜಪಾನ್ ದೇಶಗಳಿಂದ ಉಳಿದವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಜಸ್ಸಿ ಹೇಳಿದರು.
ಕೋವಿಡ್ ಸಂದರ್ಭದಲ್ಲಿ ನೇಮಕಾತಿ; ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 22 ಸಾವಿರ ಮಂದಿಯನ್ನು ಭಾರತದಿಂದ ನೇಮಕ ಮಾಡಿಕೊಳ್ಳಲಾಗಿದೆ. ಭಾರತದ ವಿವಿಧ ಭಾಷೆ ಮತ್ತು ವಿಶ್ವದ ಇತರ ರಾಷ್ಟ್ರಗಳಲ್ಲಿನ ಗ್ರಾಹಕರಿಗೆ ನೆರವಾಗಲು ತಾತ್ಕಾಲಿಕವಾಗಿ 20 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು.
ಹೈದರಾಬಾದ್, ಪುಣೆ, ಕೊಯಮತ್ತೂರು, ನೋಯ್ಡಾ, ಕೋಲ್ಕತ್ತಾ, ಜೈಪುರ, ಚಂಡೀಗಢ್, ಮಂಗಳೂರು, ಇಂಧೋರ್, ಭೋಪಾಲ್ ಮತ್ತು ಲಕ್ನೋದಲ್ಲಿ ಈಗ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಅಮೆಜಾನ್ ತನ್ನ ವರ್ಚುವಲ್ ಕಸ್ಟಮರ್ ಸರ್ವೀಸ್ ಯೋಜನೆಯಡಿ ಈ ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಯೋಜನೆಯಡಿ ಕೆಲಸ ಪಡೆದವರಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಸಹ ನೀಡಲಾಗುತ್ತಿದೆ.
ಅಸೋಸಿಯೇಟ್ ಕಸ್ಟಮರ್ ಸರ್ವೀಸ್ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಗ್ರಾಹಕರ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಇ-ಮೇಲ್, ಚಾಟ್, ಸಾಮಾಜಿಕ ಜಾಲತಾಣ, ಫೋನ್ ಮೂಲಕ ಗ್ರಾಹಕರ ಸಮಸ್ಯೆಯನ್ನು ಬಗೆಹರಿಸುತ್ತಿದ್ದಾರೆ.
ಅಮೆಜಾನ್.ಇನ್ 15 ರಾಜ್ಯಗಳಲ್ಲಿ 60 ಕ್ಕೂ ಹೆಚ್ಚು ಗೋದಾಮುಗಳು ಅಥವಾ ಈಡೇರಿಕೆ ಕೇಂದ್ರಗಳನ್ನು ಹೊಂದಿದೆ. ಈಗ ಇಂಜಿನಿಯರಿಂಗ್, ಸಂಶೋಧನಾ ವಿಜ್ಞಾನ, ರೊಬೋಟಿಕ್ಸ್ ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ ನೇಮಕಾತಿ ನಡೆಯಲಿದೆ ಎಂದು ಅಖಿಲ್ ಸಕ್ಸೇನಾ,ಉಪಾಧ್ಯಕ್ಷ,ಗ್ರಾಹಕ ಪೂರೈಸುವ ಕಾರ್ಯಾಚರಣೆ, ಎಪಿಎಸಿ, ಅಮೆಜಾನ್ ಇಂಡಿಯಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Amazon CEO, Andy Jassy, unveils 55,000 Tech Jobs in his first Hiring push.
18-09-25 05:34 pm
Bangalore Correspondent
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
18-09-25 08:14 pm
HK News Desk
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
18-09-25 11:11 pm
Mangalore Correspondent
Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್...
18-09-25 09:12 pm
ಮಾಜಿ ಸೈನಿಕರಿಗೆ ಸರ್ಕಾರಿ ಸವಲತ್ತು ನೀಡದೆ ನಿರ್ಲಕ್ಷ...
18-09-25 09:09 pm
Banglegudde, Dharmasthala, SIT: ಬಂಗ್ಲೆಗುಡ್ಡೆ...
18-09-25 07:40 pm
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm