ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ವಿವರ

07-09-21 07:18 pm       Source ; One India Kannada   ಉದ್ಯೋಗ

ಪ್ರಂಶಸನೀಯ ಕ್ರೀಡಾಪಟುಗಳ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ & ಮಹಿಳಾ) ಹಾಗೂ ಸೇವೆಯಲ್ಲಿರುವವರ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 01 : ಪ್ರಂಶಸನೀಯ ಕ್ರೀಡಾಪಟುಗಳ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ & ಮಹಿಳಾ) ಹಾಗೂ ಸೇವೆಯಲ್ಲಿರುವವರ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ 29/9/2021ರ ಸಂಜೆ 6 ಗಂಟೆಯ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕವನ್ನು ಬ್ಯಾಂಕ್ ಅಥವ ಅಂಚೆ ಕಚೇರಿಗಳ ವೇಳೆಯಲ್ಲಿ ಪಾವತಿ ಮಾಡಲು 1/10/2021 ಕೊನೆಯ ದಿನವಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳು ವೃಂದದ ಹುದ್ದೆ ಹಾಗೂ ವಿಕ್ಕುಳಿದ ವೃಂದದ (ಪರಸ್ಥಳೀಯ) ಹುದ್ದೆ ಈ ಎರಡೂ ವೃಂದದ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಅರ್ಹರಿರುತ್ತಾರೆ. ಒಮ್ಮೆ ಶುಲ್ಕವನ್ನು ಪಾವತಿ ಮಾಡಿದ ಬಳಿಕ ಯಾವುದೇ ಕಾರಣಕ್ಕೂ ವಾಪಸ್ ನೀಡಲಾಗುವುದಿಲ್ಲ.

ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡುವಾಗ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ/ ಸೂಚನೆಗಳನ್ನು ಜಾಗರೂಕತೆಯಿಂದ ಓದಿಕೊಂಡು ಭರ್ತಿ ಮಾಡಬೇಕು. ಖುದ್ದಾಗಿ ಅಥವ ಬೇರೆ ಯಾವುದೇ ಮಾರ್ಗದ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.



ಹುದ್ದೆಗಳ ವಿವರಗಳು

ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್)

* ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (ಪುರುಷ) (ಮಿಕ್ಕುಳಿದ ವೃಂದ) 53

* ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (ಮಿಕ್ಕುಳಿದ ವೃಂದ) 17 ಒಟ್ಟು 70 ಹುದ್ದೆಗಳು.

ಕಲ್ಯಾಣ ಕರ್ನಾಟಕ ಮೀಸಲಾತಿಗೊಳಪಡುವ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್)

* ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (ಪುರುಷ) (ಸ್ಥಳೀಯ) 6

* ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್ ) (ಸ್ಥಳೀಯ) 2

* ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (ಪುರುಷ) (ಮಿಕ್ಕುಳಿದ ವೃಂದ) 2 ಒಟ್ಟು 10 ಹುದ್ದೆಗಳು

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್)

* ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ) (ಮಿಕ್ಕುಳಿದ ವೃಂದ) 11

* ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಮಿಕ್ಕುಳಿದ ವೃಂದ) 3

* ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ) ಸೇವೆಯಲ್ಲಿರುವವರಿಗೆ (ಮಿಕ್ಕುಳಿದ ವೃಂದ) 2

* ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಸೇವೆಯಲ್ಲಿರುವವರಿಗೆ (ಮಿಕ್ಕುಳಿದ ವೃಂದ) 1 ಒಟ್ಟು 17 ಹುದ್ದೆಗಳು

ಕಲ್ಯಾಣ ಕರ್ನಾಟಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್)

* ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ) (ಸ್ಥಳೀಯ) 2

* ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಸ್ಥಳೀಯ) 1 ಒಟ್ಟು 3 ಹುದ್ದೆಗಳು

ವಯೋಮಿತಿ ವಿವರಗಳು

ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 29/9/2021ಕ್ಕೆ ಅಭ್ಯರ್ಥಿಗೆ ಕನಿಷ್ಟ 19 ವರ್ಷ ವಯಸ್ಸಾಗಿರ ಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು. ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.

ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 29/9/2021ಕ್ಕೆ ಅಭ್ಯರ್ಥಿಗೆ ಕನಿಷ್ಟ 21 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 30 ವರ್ಷಗಳು, ಇತರೆ ಅಭ್ಯರ್ಥಿಗಳಿಗೆ 28 ವರ್ಷಗಳು.



ಅರ್ಜಿ ಶುಲ್ಕದ ವಿವರಗಳು

ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಸಾಮಾನ್ಯ, ಪ್ರವರ್ಗ 2(ಎ), 2 (ಬಿ), 3(ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 400 ರೂ.ಗಳು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ. 200 ರೂ.ಗಳು.

ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಸಾಮಾನ್ಯ, ಪ್ರವರ್ಗ 2(ಎ), 2 (ಬಿ), 3(ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 500 ರೂ.ಗಳು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ. 250 ರೂ.ಗಳು.

ನಿಗದಿತ ಅರ್ಜಿ ಶುಲ್ಕವನ್ನು ನಗದು/ ಆನ್‌ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಅಥವ ಎಚ್‌. ಡಿ. ಎಫ್‌. ಸಿ ಬ್ಯಾಂಕ್ ಅಧಿಕೃತ ಶಾಖೆಗಳಲ್ಲಿ ಪಾವತಿಸಿ ನಂತರ ಚಲನ್‌ನ ಪ್ರತಿಯನ್ನು ಅಭ್ಯರ್ಥಿ ಇಟ್ಟುಕೊಂಡಿರಬೇಕು.



ವಿದ್ಯಾರ್ಹತೆ ವಿವರಗಳು

ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು (ಪೊಲೀಸ್ ಕಾನ್ಸ್‌ಟೇಬಲ್, ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಮತ್ತು ಉಪ ಪೊಲೀಸ್ ಅಧೀಕ್ಷಕರ ಹುದ್ದೆಗಳಿಗೆ ಪ್ರಶಂಸನೀಯ ಕ್ರೀಡಾಪಟುಗಳ ನೇರ ನೇಮಕಾತಿ (ವಿಶೇಷ) ನಿಯಮಗಳು 2020ರ ಅನ್ವಯ ಪಿ.ಯು.ಸಿ. ಅಥವ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಯುಜಿಸಿ ಮಾನ್ಯತೆ ಹೊಂದಿರುವ ಪರಿಗಣಿತ ವಿಶ್ವವಿದ್ಯಾಲಯಗಳು, ಖಾಸಗಿ/ ಡೀಮ್ಡ್‌ ಹಾಗೂ ಹೊರ ರಾಜ್ಯದ ವಿಶ್ವವಿದ್ಯಾಲಯಗಳಿಂದ ಪಡೆದ ಪದವಿಗಳು. ಆದರೆ ವಿಶ್ವವಿದ್ಯಾಲಯಗಳ ಪದವಿಯ ತತ್ಸಮಾನದ ಬಗ್ಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಯಾ ವಿಶ್ವವಿದ್ಯಾಲಯ ಮತ್ತುಉದ್ಯೋಗಕ್ಕೆ ಸಂಬಂಧಿಸಿದಂತೆ ಉದ್ಯೋಗ ನೀಡುವ ಪ್ರಾಧಿಕಾರ ತೀರ್ಮಾನ ತೆಗೆದುಕೊಳ್ಳಬೇಕಾಗಿರುತ್ತದೆ.

ಅಂಚೆ ಮತ್ತು ದೂರ ಶಿಕ್ಷಣದ ಮುಖಾಂತರ ಪಡೆದಿರುವ ಪದವಿಗಳು. ಆದರೆ ನಿಯಮಬಾಹಿರವಾಗಿ ಕೆಲವು ವಿಶ್ವವಿದ್ಯಾಲಯಗಳು ಯುಜಿಸಿ ಅನುಮೋದನೆ ಇಲ್ಲದೇ ನಡೆಸುತ್ತಿರುವ ಅಂಚೆ ಮತ್ತು ದೂರ ಶಿಕ್ಷಣದ ಕೋರ್ಸ್‌ಗಳನ್ನು ಹಾಗೂ ಅಂಚೆ ಮತ್ತು ದೂರ ಶಿಕ್ಷಣದ ಮೂಲಕ ಪಡೆದ ತಾಂತ್ರಿಕ ಪದವಿಗಳನ್ನು ನೇಮಕಾತಿಗೆ ಪರಿಗಣಿಸುವಂತಿಲ್ಲ.

ವೆಬ್ ಸೈಟ್ ವಿಳಾಸ, ಇತರ ಮಾಹಿತಿ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಲಾಖೆಯ www.recruitment.ksp.gov.in ನಲ್ಲಿ ನೀಡಲಾಗಿರುವ ಸೂಚನೆಯನ್ನು ಓದಿಕೊಂಡು ಯಾವುದೇ ತಪ್ಪು ಮಾಹಿತಿ ನೀಡದೇ ಅರ್ಜಿಯನ್ನು ಭರ್ತಿ ಮಾಡಬೇಕು. ತಪ್ಪು ಮಾಹಿತಿಯನ್ನು ನೀಡಿದರೆ ಕಾನೂನಿಯ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈಗ ನಮೂದು ಮಾಡಿರುವ ಹುದ್ದೆಗಳ ಸಂಖ್ಯೆ ತಾತ್ಕಾಲಿಕ ವಾಗಿರುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ.

Karnataka state police invited applications from eligible candidates to fill up constable, sub inspector posts. Candidates can submit applications till 29/9/2021.