1 crore job offer, Job News Kannada: ಸಿಲಿಕಾನ್ ಸಿಟಿಯಲ್ಲಿ ಕೋಟಿ ವೇತನದ ಜಾಬ್ ಆಫರ್ ; ಈ ಅರ್ಹತೆ ನಿಮಗಿದ್ದರೆ ವರ್ಷಕ್ಕೆ ಒಂದು ಕೋಟಿ, ಅನಿವಾಸಿ ಉದ್ಯಮಿಯ ಆಫರ್ ವೈರಲ್ 

09-07-25 10:43 am       HK News Desk   ಉದ್ಯೋಗ

ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಅದೆಷ್ಟೋ ಯುವಕ, ಯುವತಿಯರು ಉದ್ಯೋಗಕ್ಕೆ ಬರುತ್ತಾರೆ. ಎಲ್ಲರಿಗೂ ಎನಿಸಿದಷ್ಟು ವೇತನ, ಸೌಲಭ್ಯ ಸಿಗೋದಿಲ್ಲ. ಇದೀಗ ಉದ್ಯೋಗ ಹುಡುಕ್ತಿರೋರಿಗೆ ಭರ್ಜರಿ ವೇತನದ ಆಫರ್ ಒಂದನ್ನು ಉದ್ಯಮಿಯೊಬ್ಬರು ನೀಡಿದ್ದಾರೆ.  

ಬೆಂಗಳೂರು, ಜುಲೈ 8 : ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಅದೆಷ್ಟೋ ಯುವಕ, ಯುವತಿಯರು ಉದ್ಯೋಗಕ್ಕೆ ಬರುತ್ತಾರೆ. ಎಲ್ಲರಿಗೂ ಎನಿಸಿದಷ್ಟು ವೇತನ, ಸೌಲಭ್ಯ ಸಿಗೋದಿಲ್ಲ. ಇದೀಗ ಉದ್ಯೋಗ ಹುಡುಕ್ತಿರೋರಿಗೆ ಭರ್ಜರಿ ವೇತನದ ಆಫರ್ ಒಂದನ್ನು ಉದ್ಯಮಿಯೊಬ್ಬರು ನೀಡಿದ್ದಾರೆ.  ಭಾರತೀಯ ಮೂಲದ ಅನಿವಾಸಿ ಉದ್ಯಮಿಯೊಬ್ಬರು ನಾಲ್ಕು ವರ್ಷಗಳ ಅನುಭವ ಇರುವ ಅಭ್ಯರ್ಥಿಗಳಿಗೆ ವಾರ್ಷಿಕ 1 ಕೋಟಿ ರೂ. ಸಂಬಳದ ಆಫರ್ ಘೋಷಿಸಿದ್ದಾರೆ. 

ಈ ಹುದ್ದೆಗೆ ಯಾವುದೇ ಪದವಿ ಹಿನ್ನೆಲೆ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಈ ಕುರಿತ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯ ಭಾರೀ ಗಮನ ಸೆಳೆದಿದೆ. ಸ್ಮಾಲೆಸ್ಟ್ ಎಐ (Smallest AI) ಎಂಬ ಕಂಪನಿಯ ಸಂಸ್ಥಾಪಕ ಸುದರ್ಶನ ಕಾಮತ್ ಈ ಜಾಬ್‌ ಆಫರ್ ಮಾಡಿದ್ದಾರೆ.

ತಮ್ಮ ಎಕ್ಸ್ ಖಾತೆ @kamath_sutra ಮೂಲಕ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು ಬೆಂಗಳೂರಿನಲ್ಲಿ ಫುಲ್ ಸ್ಟಾಕ್ ಲೀಡ್ ಹುದ್ದೆಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ. ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ವಾರ್ಷಿಕ 1 ಕೋಟಿ ರೂಪಾಯಿ ಸಂಬಳ ನೀಡುವುದಾಗಿ ಹೇಳಿದ್ದಾರೆ.

ಈ ಉದ್ಯೋಗಕ್ಕೆ ಯಾವುದೇ ಪದವಿ ಅಥವಾ ರೆಸ್ಯೂಮ್ ಅಗತ್ಯವಿಲ್ಲ ಎಂದು ಸುದರ್ಶನ್ ಕಾಮತ್ ಸ್ಪಷ್ಟಪಡಿಸಿದ್ದಾರೆ. ಆದರೆ, ಅಭ್ಯರ್ಥಿಗಳು ಕನಿಷ್ಠ 4 ರಿಂದ 5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಅಲ್ಲದೆ, ಈ ಕೆಳಗಿನ ತಾಂತ್ರಿಕ ಕೌಶಲ್ಯಗಳಲ್ಲಿ ಪರಿಣತಿ ಹೊಂದಿರಬೇಕು ಎಂದು ಬರೆದಿದ್ದಾರೆ. ನೆಕ್ಸ್ಟ್ ಜೆಎಸ್ (Next.js), ಪೈಥಾನ್ (Python), ಮತ್ತು ರಿಯಾಕ್ಟ್ ಜೆಎಸ್ (React.js) ಕೋಡಿಂಗ್‌ನಲ್ಲಿ ಪರಿಣತಿ. 0 ಇಂದ 100 ರ ವರೆಗಿನ ಸಿಸ್ಟಮ್ ಸ್ಕೇಲಿಂಗ್ (System Scaling) ಸಿಸ್ಟಮ್‌ಗಳೊಂದಿಗೆ ಕೆಲಸ ಮಾಡಿದ ಅನುಭವವಿದ್ದರೆ ಪ್ರಯೋಜನ ಆಗಲಿದ್ಯಂತೆ.

ಜುಲೈ 7, 2025 ರಂದು ಶೇರ್ ಮಾಡಲಾದ ಈ ಪೋಸ್ಟ್ ಎಕ್ಸ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ಆಫರ್‌ನ ಸಾಧಕ-ಬಾಧಕಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮನ್ನು ಪರಿಚಯಿಸಿಕೊಳ್ಳುವ 100 ಪದಗಳ ಒಂದು ಟೆಕ್ಸ್ಟ್‌‌ ಜೊತೆಗೆ ಮತ್ತು ನಿಮ್ಮ ಅತ್ಯುತ್ತಮ ಕೃತಿಗಳ ಲಿಂಕ್‌ಗಳನ್ನು info@smallest.ai ಗೆ 'ಕ್ರ್ಯಾಕ್ಡ್ ಫುಲ್ ಸ್ಟ್ಯಾಕ್ ಲೀಡ್' ಶೀರ್ಷಿಕೆಯೊಂದಿಗೆ ಕಳುಹಿಸಿ ಎಂದು ಬರೆದಿದ್ದಾರೆ. ಆಸಕ್ತ ಅಭ್ಯರ್ಥಿಗಳು ಅವರ ಖಾತೆಯ ಮೂಲಕ (@kamath_sutra) ಸಂಪರ್ಕಿಸಬಹುದಾಗಿದೆ. ಆದರೆ, ಈ ಆಫರ್‌ಗೆ ಸಂಬಂಧಿಸಿದಂತೆ ಅಧಿಕೃತ ದೃಢೀಕರಣವನ್ನು ಅವರ ಸಂಸ್ಥೆಯಿಂದಲೇ ಪಡೆಯಬೇಕಷ್ಟೆ.

In a city known as India’s Silicon Valley, job opportunities are abundant — but one recent offer has stood out and gone viral for its impressive salary and unconventional requirements. A non-resident Indian (NRI) entrepreneur has announced a ₹1 crore annual salary for the right candidate, and surprisingly, no formal degree or resume is required.