ಬ್ರೇಕಿಂಗ್ ನ್ಯೂಸ್
11-05-22 07:51 pm Source: Vijayakarnataka ಡಿಜಿಟಲ್ ಟೆಕ್
OnePlus ಸಹ-ಸಂಸ್ಥಾಪಕ ಕಾರ್ಲ್ ಪೀ ಪ್ರಾರಂಭಿಸಿರುವ ಹೊಸ ಟೆಕ್ ಕಂಪನಿ ನಥಿಂಗ್ (Nothing) ತನ್ನ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಲು ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ. ಭಾರತದ ಸೇರಿದಂತೆ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ನಥಿಂಗ್ ಕಂಪೆನಿಯ ಮೊದಲ ಸ್ಮಾರ್ಟ್‌ಪೋನ್ 'Nothing Phone 1' ಇದೇ "ಬೇಸಿಗೆ 2022" ಯಲ್ಲಿ ಬಿಡುಗಡೆಗೊಳ್ಳಲಿದ್ದು, ಫ್ಲಿಪ್‌ಕಾರ್ಟ್ ಮೂಲಕ ಎಸ್‌ಕ್ಲೂಸಿವ್ ಆಗಿ ಮಾರಾಟಕ್ಕೆ ತರಲಾಗುವುದು ಎಂದು ಕಂಪೆನಿ ತಿಳಿಸಿದೆ. ಕಂಪೆನಿಯಿಂದ ಇಷ್ಟು ವಿಷಯ ಅಧಿಕೃತವಾಗಿ ಬಿಡುಗಡೆಯಾಗಿದ್ದರೆ, ವದಂತಿಗಳಂತೆ ಇದೇ ಜುಲೈ ತಿಂಗಳಿನಲ್ಲಿ ನೂತನ 'Nothing Phone 1' ಸ್ಮಾರ್ಟ್‌ಫೋನನ್ನು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗುತ್ತಿರುವ ಬಗ್ಗೆ ಸುದ್ದಿಗಳು ಹರಿದಾಡಿವೆ .ಇತ್ತೀಚಿನ ವದಂತಿಗಳಂತೆ ನೂತನ 'Nothing Phone 1' ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ಅನ್ನು ಹೊಂದಿರಲಿದೆಯಂತೆ
ಹೌದು, ಉನ್ನತ ಗುಣಮಟ್ಟದ ಸ್ಮಾರ್ಟ್‌ಫೋನ್ ಪರಿಕರಗಳ ತಯಾರಿಕೆಯಲ್ಲಿ ಭಾರೀ ಹೆಸರುಗಳಿಸಿರುವ 'ನಥಿಂಗ್'(Nothing) ಕಂಪೆನಿಯು ತನ್ನ ಮೊಟ್ಟ ಮೊದಲ 'Nothing Phone 1' ಸ್ಮಾರ್ಟ್‌ಫೋನ್ ಬಿಡುಗಡೆಯ ಬಗ್ಗೆ ನಿಖರವಾದ ಲಾಂಚ್ ಟೈಮ್‌ಲೈನ್ ಅನ್ನು ಪ್ರಕಟಿಸಿಲ್ಲ. ಆದರೆ, ಇದೇ "ಬೇಸಿಗೆ 2022" ನಲ್ಲಿ ಸ್ಮಾರ್ಟ್‌ಫೋನ್ ಅನ್ನು ಪ್ರಾರಂಭಿಸಲಾಗುವುದು ಎಂದು ಇತ್ತೀಚಿಗಷ್ಟೇ ಹೇಳಿತ್ತು. ಇಷ್ಟೇ ಅಲ್ಲದೇ, ನೂತನ Nothing Phone 1 ಸ್ಮಾರ್ಟ್‌ಫೋನನ್ನು ಕ್ವಾಲ್ಕಾಮ್ ಪ್ರೊಸೆಸರ್ನೊಂದಿಗೆ ಪ್ರಾರಂಭಿಸಲಾಗುವುದು ಮತ್ತು ಕಂಪನಿಯ ಸ್ವಂತ ಆಂಡ್ರಾಯ್ಡ್ ಆಧಾರಿತ ಬಳಕೆದಾರ ಇಂಟರ್ಫೇಸ್ ನಥಿಂಗ್ ಓಎಸ್‌ನೊಂದಿಗೆ Nothing Phone 1 ಸ್ಮಾರ್ಟ್‌ಫೋನ್ ಕೆಲಸ ಮಾಡಲಿದೆ ಎಂದು ನಥಿಂಗ್ ಕಂಪೆನಿ ತಿಳಿಸಿದೆ. ಪ್ರಸ್ತುತ ಸಮಯದಲ್ಲಿ, ಈ ಎರಡು ವೈಶಿಷ್ಟ್ಯಗಳ ಹೊರತಾಗಿ Nothing Phone 1 ಸ್ಮಾರ್ಟ್‌ಫೋನಿನ ಇತರೆ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಬಗೆಗೆ ಹೆಚ್ಚು ಮಾಹಿತಿಯು ಲಭ್ಯವಿಲ್ಲ. ಆದರೆ, ಇದೀಗ 'Nothing Phone 1' ಸ್ಮಾರ್ಟ್‌ಫೋನಿನ ಕುರಿತಂತೆ ಹಲವು ವದಂತಿಯ ಮಾಹಿತಿಗಳು ಹರಿದಾಡಿವೆ.
ನಥಿಂಗ್ ಕಂಪೆನಿಯ ಮಾಲಿಕ ಕಾರ್ಲ್ ಪೀ ಅವರು ಹೇಳಿರುವಂತೆ, ಅವರು ತಮ್ಮ ನೂತನ 'Nothing Phone 1' ಸ್ಮಾರ್ಟ್‌ಫೋನನ್ನು ಆಪಲ್‌ನ ಐಫೋನ್ ನೊಂದಿಗೆ ಸ್ಪರ್ಧಿಸಲು ನೋಡುತ್ತಿರುವ ಕಾರಣ, ನೂತನ Nothing Phone 1 ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲದೇ, ಈ ಸ್ಮಾರ್ಟ್‌ಫೋನಿನಲ್ಲಿ HDR10+ ಬೆಂಬಲದೊಂದಿಗೆ 6.43-ಇಂಚಿನ Full HD+ 90Hz AMOLED ಡಿಸ್ಪ್ಲೇಯನ್ನು ತರಲಾಗುತ್ತಿದೆ ಎಂಬ ವದಂತಿಯ ಸುದ್ದಿಗಳನ್ನು ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ. ಇವುಗಳ ಜೊತೆಗೆ, 4,500 mAh ಬ್ಯಾಟರಿ, 8GB RAM, 128GB ಸಂಗ್ರಹಣೆ ಮತ್ತು 50MP ಪ್ರಾಥಮಿಕ ಸಂವೇದಕದೊಂದಿಗೆ 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸಂವೇದಕ ಟ್ರಿಪಲ್ ಹಿಂಬದಿಯ ಕ್ಯಾಮರಾ ಸೆಟಪ್ ಹಾಗೂ 32MP ಸೆಲ್ಫಿ ಕ್ಯಾಮೆರಾ ವೈಶಿಷ್ಟ್ಯಗಳ ನೂತನ 'Nothing Phone 1' ಸ್ಮಾರ್ಟ್‌ಫೋನ್ ಹೊಂದಿರಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ನೂತನ Nothing Phone 1 ಸ್ಮಾರ್ಟ್‌ಫೋನಿನಲ್ಲಿ ಸ್ಟಾಕ್ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನ ವೈಶಿಷ್ಟ್ಯಗಳನ್ನು ಬಳಸುವುದಿಲ್ಲ. ಬದಲಾಗಿ 'ನಥಿಂಗ್ ಓಎಸ್' ಅನ್ನು ತರಲಾಗುತ್ತಿದ್ದು, ನಥಿಂಗ್ ಕಂಪೆನಿಯ ಮಾಲಿಕ ಕಾರ್ಲ್ ಪೀ ಅವರು ಸಾಫ್ಟ್‌ವೇರ್ ಹೇಗೆ ವೇಗವಾಗಿ ಮತ್ತು ಮೃದುವಾಗಿದೆ ಎಂಬುದರ ಬಗ್ಗೆ ತಿಳಿಸಿದ್ದಾರೆ. ಆದರೆ, Nothing Phone 1 ಮೂರು ವರ್ಷಗಳ ಸಾಫ್ಟ್‌ವೇರ್ ನವೀಕರಣಗಳನ್ನು ಮತ್ತು ನಾಲ್ಕು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ OnePlus ತನ್ನ OxygenOS ನೊಂದಿಗೆ ನೀಡುತ್ತಿರುವ ಅತ್ಯುತ್ತಮ ಬದಲಾವಣೆಗಳನ್ನು ನಾವು ಈ ಸ್ಮಾರ್ಟ್‌ಫೋನಿನಲ್ಲಿಯೂ ಕಾಣಬಹುದು ಎಂದು ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. ಫ್ಲಿಪ್‌ಕಾರ್ಟ್‌ನಲ್ಲಿ Nothing Phone 1 ಫೋನಿನ ಬಗ್ಗೆ “ಅಲರ್ಟ್ ಮಿ” ಆಯ್ಕೆಯನ್ನು ನೀಡಲಾಗಿದ್ದು, ಇಲ್ಲಿ Nothing Phone 1 ಸ್ಮಾರ್ಟ್‌ಫೋನ್ ಬಿಡುಗಡೆಯ ಕುರಿತಂತೆ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
Flipkart Will Sell Nothings First Smartphone.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 02:58 pm
Mangalore Correspondent
Mangalore Suhas Shetty Murder, Instagram, Pol...
02-05-25 10:47 pm
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm