ಬ್ರೇಕಿಂಗ್ ನ್ಯೂಸ್
20-04-22 07:22 pm Source: Vijayakarnataka ಡಿಜಿಟಲ್ ಟೆಕ್
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಗಿದ್ದ Xiaomiಯ ನೂತನ 'Xiaomi Pad 5' ಟ್ಯಾಬ್ಲೆಟ್ ಅನ್ನು ಇದೀಗ ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ದೇಶದಲ್ಲಿ ತನ್ನ ನೂತನ Xiaomi Pad 5 ಟ್ಯಾಬ್ಲೆಟ್ ಆಗಮನವನ್ನು Xiaomi ಕಂಪೆನಿ ಖಚಿತಪಡಿಸಿದ್ದು, ಈ ಬಗ್ಗೆ ವಿಡಿಯೋ ಟೀಸರ್ ಒಂದನ್ನು ಸಹ ಹಂಚಿಕೊಂಡಿದೆ, Xiaomi ಬಿಡುಗಡೆ ಮಾಡಿರುವ ಟೀಸರ್ ವಿಡಿಯೋದಲ್ಲಿ Xiaomi Pad 5 ಸಾಧನದ ವಿನ್ಯಾಸವನ್ನು ಬಹಿರಂಗಪಡಿಸಲಾಗಿದ್ದು, ಇದೇ ಏಪ್ರಿಲ್ 27 ರಂದು ಭಾರತದ ಮಾರುಕಟ್ಟೆಯಲ್ಲಿ ತನ್ನ Xiaomi Pad 5 ಸಾಧನವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಹಾಗಾದರೆ, ಭಾರತದಲ್ಲಿ ನೂತನ 'Xiaomi Pad 5' ಟ್ಯಾಬ್ಲೆಟ್ ಹೊಂದಿರಬಹುದಾದ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
Xiaomi Pad 5 ಟ್ಯಾಬ್‌ನ ಭಾರತೀಯ ರೂಪಾಂತರವು ಜಾಗತಿಕ ರೂಪಾಂತರದಂತೆಯೇ ಹೆಚ್ಚಿನ ಫೀಚರ್ಸ್‌ಗಳನ್ನು ಹೊಂದಿರುವ ಸಾಧ್ಯತೆಯಿದೆ. ಜಾಗತಿಕ ರೂಪಾಂತರದ Xiaomi Pad 5 ಟ್ಯಾಬ್ MIUI 12.5 ಜೊತೆಗೆ Android 11 ನಲ್ಲಿ ರನ್ ಆಗುತ್ತದೆ ಮತ್ತು 11-ಇಂಚಿನ WQHD+ (1,600x2,560 ಪಿಕ್ಸೆಲ್) TrueTone ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 16:10 ಆಕಾರ ಅನುಪಾತವನ್ನು ಹೊಂದಿದೆ. ಇದರ ಪ್ರದರ್ಶನವು ಡಾಲ್ಬಿ ವಿಷನ್ ಮತ್ತು HDR10 ಬೆಂಬಲದೊಂದಿಗೆ ಬರುತ್ತದೆ. ಇದಲ್ಲದೆ, ಟ್ಯಾಬ್ಲೆಟ್ ಫೇಸ್ ಅನ್‌ಲಾಕ್‌ಗೆ ಬೆಂಬಲವನ್ನು ನೀಡುತ್ತದೆ ಮತ್ತು ಬಹುಕಾರ್ಯಕಕ್ಕಾಗಿ ಸ್ಪ್ಲಿಟ್-ಸ್ಕ್ರೀನ್ ವೈಶಿಷ್ಟ್ಯವನ್ನು ಹೊಂದಿದೆ. ಇನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 860 SoC ನಿಂದ ಚಾಲಿತವಾಗಿರುವ ಈ ಸಾಧನವು 6GB LPDDR4X RAM ಜೊತೆಗೆ ಜೋಡಿಸಲ್ಪಟ್ಟಿದೆ.
![]()
Xiaomi Pad 5 ಟ್ಯಾಬ್‌ನ ಕ್ಯಾಮೆರಾ ಸಾಮರ್ಥ್ಯವನ್ನು ನೋಡುವುದಾದರೆ, ಈ ಸಾಧನವು ಎಲ್ಇಡಿ ಫ್ಲ್ಯಾಷ್ ಜೊತೆಗೆ ಹಿಂಭಾಗದಲ್ಲಿ ಒಂದೇ 13-ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಸೆಲ್ಫಿಗಳಿಗಾಗಿ, Xiaomi ಮುಂಭಾಗದಲ್ಲಿ 1080p ರೆಕಾರ್ಡಿಂಗ್ ಸಾಮರ್ಥ್ಯದ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. Xiaomi Pad 5 ನಲ್ಲಿನ ಸಂಪರ್ಕ ಆಯ್ಕೆಗಳಲ್ಲಿ, Wi-Fi, ಬ್ಲೂಟೂತ್ v5 ಮತ್ತು USB ಟೈಪ್-C ಪೋರ್ಟ್ ಫೀಚರ್ಸ್ ಒಳಗೊಂಡಿವೆ. Xiaomi Pad 5 ಟ್ಯಾಬ್ಲೆಟ್ 8,720mAh ಸಾಮರ್ಥ್ಯದ ಬ್ಯಾಟರಿಯಿಂದ ಬೆಂಬಲಿತವಾಗಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಡಾಲ್ಬಿ ಅಟ್ಮಾಸ್‌ಗೆ ಬೆಂಬಲದೊಂದಿಗೆ ನಾಲ್ಕು ಸ್ಪೀಕರ್‌ಗಳನ್ನು ಹೊಂದಿರುವ ಈ ಸಾಧನವು UFS 3.1 ಆನ್‌ಬೋರ್ಡ್ 256GB ವರೆಗೆ ಸಂಗ್ರಹಣೆಯನ್ನು ನೀಡುತ್ತದೆ.

Xiaomi Pad 5 ಟ್ಯಾಬ್ಲೆಟ್ ಅನ್ನು ಭಾರತವನ್ನು ಹೊರತುಪಡಿಸಿ ಜಾಗತಿಕ ಮಾರುಕಟ್ಟೆಗಳಲ್ಲಿ 6GB RAM + 128GB ಸ್ಟೋರೇಜ್ ಆಯ್ಕೆಗಾಗಿ EUR 349 (ಸರಿಸುಮಾರು Rs.30,300) ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿತ್ತು. 6GB RAM + 256GB ಸ್ಟೋರೇಜ್ ಆಯ್ಕೆಗಾಗಿ ಇದರ ಬೆಲೆ EUR 399 (ಸುಮಾರು ರೂ. 34,600) ಗಳಿಗೆ ಬಿಡುಗಡೆ ಮಾಡಲಾಗಿತ್ತು. ಈ ಸಾಧನವು ಜಾಗತಿಕವಾಗಿ ಕಾಸ್ಮಿಕ್ ಗ್ರೇ ಮತ್ತು ಪರ್ಲ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಗೊಂಡಿತ್ತು. ಇದೀಗ ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಇದೇ ಸಾಧನದ ಬೆಲೆಗಳನ್ನು ಹೇಗೆ ನಿಗದಿಪಡಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಏಪ್ರಿಲ್ 27 ರಂದು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಲಿದ್ದು, ವಿಜಯಕರ್ನಾಟಕ ಟೆಕ್ ತಾಣದಲ್ಲಿ ಈ ಬಗ್ಗೆ ಸಂಪೂರ್ಣ ಅಪ್‌ಡೇಟ್ ಅನ್ನು ಪಡೆಯಲು ಮರೆಯದಿರಿ.
Xiaomi Pad 5 India Launch Date Set For April 27.
30-07-26 10:28 am
HK News Staffer
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆ ಹೈಕಮಾಂಡ್...
28-07-26 08:12 pm
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
30-07-26 02:16 pm
HK News Staffer
ಪರಿಷತ್ ಸ್ಥಾನ ಕೊಡಿಸುವುದಾಗಿ ಹೇಳಿ ಒಂದೂವರೆ ಕೋಟಿ ಪ...
30-07-26 12:18 pm
ಮಂಗಳೂರು ಪೊಲೀಸರಿಂದ 82 ಕೋಟಿ ರೂ. ಮೌಲ್ಯದ ಡ್ರಗ್ಸ್...
29-07-26 10:45 pm
ಕೋರ್ಟ್ ಆವರಣದಲ್ಲಿ ವಕೀಲರಿಂದಲೇ ವ್ಯಕ್ತಿಯ ಮೇಲೆ ಹಲ್...
29-07-26 09:43 pm
Mangalore crime: ಆರೈಕೆ ನೆಪದಲ್ಲಿ ಬಂದ್ಲು ರಾಕ್ಷಸ...
29-07-26 06:51 pm