ಬ್ರೇಕಿಂಗ್ ನ್ಯೂಸ್
12-04-22 07:50 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ Xiaomi ಕಂಪೆನಿಯ ಇತ್ತಿಚಿನ Xiaomi 12 Pro ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ದೇಶದಲ್ಲಿ ಇದೇ ಏಪ್ರಿಲ್ 27 ರಂದು Xiaomi 12 Pro ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ನಿಗದಿಪಡಿಸಲಾಗಿದೆ ಎಂದು Xiaomi ಕಂಪನಿ ಇಂದು ತಿಳಿಸಿದೆ.ಭಾರತದಲ್ಲಿ Xiaomi 12 Pro 5G ಸ್ಮಾರ್ಟ್ ಬಿಡುಗಡೆ ಮಾಡುವ ಬಗ್ಗೆ Xiaomi ಕಂಪೆನಿ ಮೊನ್ನೆಯಷ್ಟೇ ಖಚಿತಪಡಿಸಿತ್ತು. Xiaomi ಕಂಪೆನಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ Xiaomi 12 Pro 5G ಸ್ಮಾರ್ಟ್‌ಫೋನ್ ಬಿಡುಗಡೆ ಬಗ್ಗೆ ಮಾಹಿತಿ ಒದಗಿಸಿ,ತನ್ನ ನೂತನ Xiaomi 12 Pro ಸ್ಮಾರ್ಟ್‌ಫೋನ್ ಅನ್ನು "ದಿ ಶೋಸ್ಟಾಪರ್" ಎಂದು ಹೇಳುವ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆದಿತ್ತು. ಇದೀಗ ಭಾರತದಲ್ಲಿ ಇದೇ ಏಪ್ರಿಲ್ 27 ರಂದು ರಂದು Xiaomi 12 Pro 5G ಸ್ಮಾರ್ಟ್‌ಫೋನ್ ಬಿಡುಗಡೆ ಖಚಿತವಾಗಿಸಿ 'ಸೇವ್ ದಿ ಡೇಟ್' ಎಂದು ಕಂಪೆನಿ ಟ್ವೀಟ್ ಮಾಡಿದೆ.
Xiaomi ಕಂಪೆನಿಯ ಇತ್ತೀಚಿನ Xiaomi 12 ಸರಣಿಯಲ್ಲಿ Xiaomi 12 Pro 5G ಸ್ಮಾರ್ಟ್‌ಫೋನನ್ನು ಚೀನಾದಲ್ಲಿ ಕಳೆದ ಡಿಸೆಂಬರ್‌ನಲ್ಲಷ್ಟೇ ಬಿಡುಗಡೆ ಮಾಡಲಾಗಿತ್ತು. Xiaomi 12 ಮತ್ತು Xiaomi 12X ಸ್ಮಾರ್ಟ್‌ಫೋನ್‌ಗಳ ಜೊತೆಗೆ ಬಿಡುಗಡೆಯಾದ ಈ ನೂತನ Xiaomi 12 Pro 5G ಸ್ಮಾರ್ಟ್‌ಫೋನ್ 120Hz ಡೈನಾಮಿಕ್ ರಿಫ್ರೆಶ್-ರೇಟ್ ಡಿಸ್ಪ್ಲೇ, Qualcomm Snapdragon 8 Gen 1 SoC ನಿಂದ ಚಾಲಿತವಾದ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿ ಮಾರುಕಟ್ಟೆಗೆ ಎಂಟ್ರಿ ನೀಡಿತ್ತು. ಇವಿಷ್ಟೇ ಅಲ್ಲದೇ, 50-ಮೆಗಾಪಿಕ್ಸೆಲ್ ಪ್ರಾಥಮಿಕ Sony IMX707 ಸಂವೇದಕ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್, 120W ವೇಗದ ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,600mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿತ್ತು. ಹಾಗಾದರೆ, Xiaomi ಕಂಪೆನಿಯ ಬಹುನಿರೀಕ್ಷಿತ Xiaomi 12 Pro 5G ಸ್ಮಾರ್ಟ್‌ಫೋನ್ ಹೇಗಿದೆ?, ಚೀನಾದಲ್ಲಿ Xiaomi 12 Pro 5G ಸ್ಮಾರ್ಟ್‌ಫೋನಿನ ಬೆಲೆಗಳು ಎಷ್ಟಿದ್ದವು ಎಂಬೆಲ್ಲಾ ಮಾಹಿತಿಗಳನ್ನು ತಿಳಿಯೋಣ ಬನ್ನಿ.

ಭಾರತೀಯ ರೂಪಾಂತರದ Xiaomi 12 Pro 5G ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆ ಮಾಡಲಾದ ಮಾದರಿಯಂತೆಯೇ ಅದೇ ವಿಶೇಷಣಗಳನ್ನು ಹೊಂದಿರುವ ಸಾಧ್ಯತೆಯಿದೆ. ಇದನ್ನು ನಾವು ನಂಬುವುದಾದರೆ, ನೂತನ Xiaomi 12 Pro 5G ಸ್ಮಾರ್ಟ್‌ಫೋನ್ MIUI 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.73-ಇಂಚಿನ WQHD+ (1,440x3,200 ಪಿಕ್ಸೆಲ್‌ಗಳು) E5 AMOLED ಡಿಸ್ಪ್ಲೇ ಜೊತೆಗೆ 1,500 nits ಗರಿಷ್ಠ ಹೊಳಪು, 480Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 120Hz ಡೈನಾಮಿಕ್ ದರವನ್ನು ಈ ಫೋನ್ ಹೊಂದಿರಲಿದೆ. ಪ್ರದರ್ಶನವು ಕಡಿಮೆ-ತಾಪಮಾನದ ಪಾಲಿಕ್ರಿಸ್ಟಲಿನ್ ಆಕ್ಸೈಡ್ (LTPO) ಬ್ಯಾಕ್‌ಪ್ಲೇನ್ ತಂತ್ರಜ್ಞಾನವನ್ನು ಆಧರಿಸಿದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿರುತ್ತದೆ. ಈ ಮೊದಲೇ ತಿಳಿಸಿದಂತೆ, Xiaomi 12 Pro ಸ್ಮಾರ್ಟ್‌ಫೋನಿನಲ್ಲಿ ಇತ್ತೀಚಿನ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಅನ್ನು ತರಲಾಗಿದ್ದು, ಇದನ್ನು 12GB ವರೆಗಿನ LPDDR5 RAM ನೊಂದಿಗೆ ಜೋಡಿಸಲಾಗಿದೆ.

ಚೀನಾ ಮಾದರಿಯ Xiaomi 12 Pro 5G ಸ್ಮಾರ್ಟ್‌ಫೋನಿನಲ್ಲಿ 50-ಮೆಗಾಪಿಕ್ಸೆಲ್ ಪ್ರೈಮರಿ ಸೋನಿ IMX707 ಸಂವೇದಕವನ್ನು ಅಳವಡಿಸಲಾಗಿತ್ತು. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಗೆ ಬೆಂಬಲವನ್ನು ಹೊಂದಿದೆ, ಜೊತೆಗೆ 50-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಅನ್ನು ಸಹ ಹೊಂದಿದೆ. ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಂವೇದಕವವಿದೆ. Xiaomi 12 Pro 5G ಫೋನ್ 256GB ವರೆಗೆ UFS 3.1 ಸಂಗ್ರಹಣೆಯನ್ನು ನೀಡುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ v5.2, GPS/ A-GPS, NFC, ಇನ್‌ಫ್ರಾರೆಡ್ (IR), ಮತ್ತು USB ಟೈಪ್-C ಪೋರ್ಟ್ ಸೇರಿವೆ. ಹಾಗೂ ಹರ್ಮನ್ ಕಾರ್ಡನ್ ಟ್ಯೂನಿಂಗ್ ಜೊತೆಗೆ ನಾಲ್ಕು-ಯೂನಿಟ್ ಸ್ಪೀಕರ್ ಸಿಸ್ಟಮ್ ಹೊಂದಿದೆ. Xiaomi 12 Pro ಫೋನ್ 4,600mAh ಬ್ಯಾಟರಿಯನ್ನು ಹೊಂದಿದ್ದು, ಇದು 120W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ ಎಂಬುದನ್ನು ಗಮನಿಸಿ.
Xiaomi 12 Pro 5g India Launch Date Set For April 27.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm