ಬ್ರೇಕಿಂಗ್ ನ್ಯೂಸ್
09-04-22 10:22 pm Source: Vijayakarnataka ಡಿಜಿಟಲ್ ಟೆಕ್
ದೇಶದ ಜನಪ್ರಿಯ ಸ್ಮಾರ್ಟ್‌ಟಿವಿ ಬ್ರ್ಯಾಂಡ್ ಆಗಿಯೂ ರೂಪುಗೊಳುತ್ತಿರುವ OnePlus ಕಂಪೆನಿ ಭಾರತದಲ್ಲಿ ತನ್ನ ಹೊಸದೊಂದು ಸ್ಮಾರ್ಟ್‌ಟಿವಿಯನ್ನು ಸದ್ದಿಲ್ಲದಂತೆ ಬಿಡುಗಡೆಗೊಳಿಸಿದೆ. OnePlus ಕಂಪೆನಿ ತನ್ನ ಇತ್ತೀಚಿನ Y- ಸರಣಿಯಲ್ಲಿ OnePlus TV Y1S Pro ಎಂಬ ಹೆಸರಿನ 43-ಇಂಚಿನ ಹೊಸ ಸ್ಮಾರ್ಟ್‌ಟಿವಿಯನ್ನು ಲಾಂಚ್ ಮಾಡಿದ್ದು, ಬೆಜೆಲ್-ಲೆಸ್ ವಿನ್ಯಾಸ, 4K ಡಿಸ್‌ಪ್ಲೇ, ಮೀಡಿಯಾ ಟೆಕ್ MT9216 ಪ್ರೊಸೆಸರ್ ಮತ್ತು ಡಾಲ್ಬಿ ಆಡಿಯೊದಿಂದ ಟ್ಯೂನ್ ಮಾಡಲಾದ 24W ಸ್ಪೀಕರ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊತ್ತು ಸ್ಮಾರ್ಟ್‌ಟಿವಿ ಮಾರುಕಟ್ಟೆಗೆ ಕಾಲಿಟ್ಟಿದೆ. ನೂತನ OnePlus TV Y1S Pro ನ ಬೆಲೆ ಮತ್ತು ಬಿಡುಗಡೆ ಕೊಡುಗೆಗಳು ಹಾಗೂ ಸ್ಮಾರ್ಟ್‌ಟಿವಿ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ನೂತನ OnePlus TV Y1S Pro ಸ್ಮಾರ್ಟ್‌ಟಿವಿ ಬೆಜೆಲ್-ಲೆಸ್ ವಿನ್ಯಾಸವನ್ನು ಹೊಂದಿದ್ದು, ಅಗಲವಾದ ಅಂಚುಗಳನ್ನು ಹೊಂದಿರುವುದನ್ನು ನಾವು ನೋಡಬಹುದು. ಈ ಸ್ಮಾರ್ಟ್ ಟಿವಿ 3840 x 2160 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು HDR10+ ಬೆಂಬಲದೊಂದಿಗೆ 43-ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು, ಇದು ಹೆಚ್ಚು ಸ್ಪಷ್ಟತೆ, ಉತ್ತಮ ಬಣ್ಣಗಳು, ಡೈನಾಮಿಕ್ ಕಾಂಟ್ರಾಸ್ಟ್ ಮತ್ತು ಕಂಟೆಂಟ್ ಆಪ್ಟಿಮೈಸೇಶನ್ ಸೇರಿದಂತೆ AI- ಚಾಲಿತ ದೃಶ್ಯಗಳನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಮೀಡಿಯಾ ಟೆಕ್ MT9216 ಪ್ರೊಸೆಸರ್ ಜೊತೆಗೆ 2GB RAM ಮತ್ತು 8GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಆಂಡ್ರಾಯ್ಡ್ 11 ಟಿವಿ OS ಸಾಫ್ಟ್‌ವೇರ್ನಲ್ಲಿ ಸ್ಮಾರ್ಟ್‌ಟಿವಿ ಕೆಲಸ ಮಾಡಲಿದೆ. ನೀವು OnePlus TV Y1S Pro ನಲ್ಲಿ ಸಮರ್ಥ ಪ್ರೊಸೆಸರ್‌ನೊಂದಿಗೆ 4K ಡಿಸ್‌ಪ್ಲೇಯನ್ನು ಪಡೆಯುತ್ತೀರಿ.
ಇನ್ನು OnePlus TV Y1S Pro ಸ್ಮಾರ್ಟ್‌ಟಿವಿಯ ಇತರ ವೈಶಿಷ್ಟ್ಯಗಳಲ್ಲಿ, ಬ್ಲೂಟೂತ್ 5.0 ಬೆಂಬಲ, ಅಂತರ್ನಿರ್ಮಿತ Google ಅಸಿಸ್ಟೆಂಡ್, Google Chromecast ಬೆಂಬಲ ಮತ್ತು Amazon Prime ವೀಡಿಯೊ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ಪೂರ್ವ-ಲೋಡ್ ಮಾಡಿದ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಇತರ OnePlus ಸಾಧನಗಳೊಂದಿಗೆ ಸಂಪರ್ಕಕ್ಕಾಗಿ ಇದು OnePlus ಸಂಪರ್ಕ 2.0 ಅನ್ನು ಸಹ ಬೆಂಬಲಿಸಲಿದ್ದು, ಪೋರ್ಟ್‌ಗಳ ಸಂಪರ್ಕ ವಿಷಯದಲ್ಲಿ, OnePlus TV Y1S Pro 1 ಎತರ್ನೆಟ್ ಪೋರ್ಟ್, 2 HDMI 2.0 ಪೋರ್ಟ್‌ಗಳು, 2 USB 2.0 ಪೋರ್ಟ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಯಲ್ಲಿ ಡ್ಯುಯಲ್-ಬ್ಯಾಂಡ್ Wi-Fi ಬೆಂಬಲ ಸೇರಿದಂತೆ ಒಂದು ಮಧ್ಯಮ ಶ್ರೇಣಿಯ ಸ್ಮಾರ್ಟ್ ಟಿವಿ ನೀಡಬೇಕಾದ ಎಲ್ಲಾ ಅಗತ್ಯ ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ಪರಿಚಯಿಸಲಾಗಿದೆ.
ಭಾರತದಲ್ಲಿ ನೂತನ OnePlus TV Y1S Pro ಸ್ಮಾರ್ಟ್‌ಟಿವಿಯು 29,999 ರೂ.ಗಳ ಅತ್ಯುತ್ತಮ ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಇನ್ನು ಇದೇ ಏಪ್ರಿಲ್ 11 ರಿಂದ ಖರೀದಿಗೆ ಲಭ್ಯವಿರಲಿರುವ ನೂತನ OnePlus TV Y1S Pro ಸ್ಮಾರ್ಟ್‌ಟಿವಿ ಖರೀದಿಯ ಕೊಡುಗಡೆಯಾಗಿ SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 2,500 ರೂ.ಗಳ ತ್ವರಿತ ರಿಯಾಯಿತಿಯು ನಿಡಲಾಗಿದ್ದು, OnePlus TV Y1S Pro ಸ್ಮಾರ್ಟ್‌ಟಿವಿಯನ್ನು 27,499 ರೂ.ಗಳ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಸಬಹುದು. ಏಪ್ರಿಲ್ 11 ರಿಂದ ದೇಶದ ಜನಪ್ರಿಯ ಇ-ಕಾಮರ್ಸ್ ಜಾಲತಾಣ ಅಮೆಜಾನ್ ಹಾಗೂ OnePlus ಕಂಪೆನಿಯ ಅಫಿಷಿಯಲ್ ವೆಬ್‌ಸೈಟ್‌ಗಳ ಮೂಲಕ OnePlus TV Y1S Pro ಸ್ಮಾರ್ಟ್‌ಟಿವಿಯನ್ನು ಖರೀದಿಸಬಹುದು ಎಂದು OnePlus ಕಂಪೆನಿ ತಿಳಿಸಿದೆ.
Oneplus Tv Y1s Pro With 24w Speakers Launched At Rs 29,999 Sale Date.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm