ಬ್ರೇಕಿಂಗ್ ನ್ಯೂಸ್
04-04-22 08:33 pm Source: Vijayakarnataka ಡಿಜಿಟಲ್ ಟೆಕ್
ರಿಯಲ್‌ಮಿ ಕಂಪೆನಿಯ ಜನಪ್ರಿಯ Realme 9 ಸ್ಮಾರ್ಟ್‌ಫೋನ್ ಸರಣಿಗೆ ಇದೇ ಏಪ್ರಿಲ್ 7 ರಂದು ನೂತನ Realme 9 4G ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗುತ್ತಿದೆ. ಇದೀಗಷ್ಟೇ ಟ್ವಿಟರ್‌ನಲ್ಲಿ Realme 9 4G ಬಿಡುಗಡೆಯ ದಿನಾಂಕವನ್ನು ಘೋಷಿಸಿರುವ ರಿಯಲ್‌ಮಿ ಕಂಪೆನಿಯು, ಇದೇ ಏಪ್ರಿಲ್ 7 ರಂದು ಮಧ್ಯಾಹ್ನ 12:30 ಕ್ಕೆ ನಡೆಯುವ ವರ್ಚುವಲ್ ಈವೆಂಟ್‌ನಲ್ಲಿ ಭಾರತದಲ್ಲಿ Realme 9 4G ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುವ ಬಗ್ಗೆ ಖಚಿತಪಡಿಸಿದೆ. ಟೀಸರ್ ಒಂದರ ಮೂಲಕ ನೂತನ Realme 9 4G ಹೊಂದಿರುವ ಪ್ರಮುಖ ವೈಶಿಷ್ಟ್ಯಗಳನ್ನು ಪ್ರಕಟಿಸಿರುವ ಕಂಪೆನಿಯು, Realme 9 4G ಸ್ಮಾರ್ಟ್‌ಫೋನಿನ ಲಾಂಚ್ ಈವೆಂಟ್ ಅನ್ನು ಕಂಪನಿಯ ಯೂಟ್ಯೂಬ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಲೈವ್‌ಸ್ಟ್ರೀಮ್ ಮಾಡಲಾಗುವುದು ಎಂದು ಹೇಳಿದೆ.
ಈಗಾಗಲೇ Realme 9i, Realme 9 5G, Realme 9 5G ಸ್ಪೀಡ್, Realme 9 Pro 5G, ಮತ್ತು Realme 9 Pro+ 5G ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರುವ Realme 9 ಸ್ಮಾರ್ಟ್‌ಫೋನ್ ಸರಣಿಗೆ, ಇದೇ ಏಪ್ರಿಲ್ 7 ರಂದು ಬಿಡುಗಡೆಯಾಗಲಿರುವ ನೂತನ Realme 9 4G ಸ್ಮಾರ್ಟ್‌ಫೋನಿನ 108-ಮೆಗಾಪಿಕ್ಸೆಲ್ 'ಪ್ರೊಲೈಟ್' ಕ್ಯಾಮೆರಾವನ್ನು ಹೊತ್ತು ಬರುತ್ತಿದೆ ಎಂದು ರಿಯಲ್‌ಮಿ ಕಂಪೆನಿ ಹೇಳಿದೆ. ಈ Realme 9 ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ISOCELL HM6 ಇಮೇಜ್ ಸಂವೇದಕವನ್ನು ಹಾಗೂ AMOLED ಡಿಸ್‌ಪ್ಲೇಯನ್ನು ಹೊಂದಿರುವುದನ್ನು ಕಂಪೆನಿಯು ಖಚಿತಪಡಿಸಿದ್ದರೆ, ಈ ಹಿಂದೆ ವಿವಿಧ ಪ್ರಮಾಣೀಕರಣ ವೆಬ್‌ಸೈಟ್‌ಗಳಲ್ಲಿ ಗುರುತಿಸಲಾಗಿರುವಂತೆ Realme 9 4G ಸ್ಮಾರ್ಟ್‌ಫೋನ್ ಹೊಂದಿರಬಹುದಾದ ವೈಶಿಷ್ಟ್ಯಗಳು ಯಾವುವು ಎಂಬುದು ಸಹ ತಿಳಿದುಬಂದಿದೆ.

ಈ ಹಿಂದೆ ವಿವಿಧ ಪ್ರಮಾಣೀಕರಣ ವೆಬ್‌ಸೈಟ್‌ಗಳಲ್ಲಿ ಗುರುತಿಸಲಾಗಿತ್ತು, ಅದರಂತೆ, ಮುಂಬರುವ Realme 9 4G ಸ್ಮಾರ್ಟ್‌ಫೋನ್ 33W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿರಬಹುದು ಹಾಗೂ ಸ್ಮಾರ್ಟ್‌ಫೋನ್ ಅನ್ನು 6GB + 128GB ಸ್ಟೋರೇಜ್ ಮಾದರಿಯಲ್ಲಿ ಮತ್ತು 8GB + 128GB ಸ್ಟೋರೇಜ್ ಮಾದರಿಯಲ್ಲಿ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.6-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಖಚಿತವಾಗಿ 108-ಮೆಗಾಪಿಕ್ಸೆಲ್ 'ಪ್ರೊಲೈಟ್' ಕ್ಯಾಮೆರಾ ಮತ್ತು AMOLED ಡಿಸ್‌ಪ್ಲೇ ಹೊತ್ತು ಬರಲಿರುವ Realme 9 4G ಫೋನಿನ ಅಧಿಕೃತ ವಿಶೇಷತೆಗಳನ್ನು ನಾವು ಮುಂದಿನ ದಿನಗಳಲ್ಲಿ ರಿಯಲ್‌ಮಿ ಕಂಪೆನಿಯಿಂದಲೇ ನಿರೀಕ್ಷಿಸಬಹುದು ಅಥವಾ ಏಪ್ರಿಲ್ 7ರ ವರೆಗೆ ಕಾಯಬೇಕಿದೆ.
ಭಾರತದಲ್ಲಿ Realme 9 4G ನಿರೀಕ್ಷಿತ ಬೆಲೆ

ಹಿಂದಿನ ಹಲವು ವರದಿಗಳ ಪ್ರಕಾರ, ಭಾರತದಲ್ಲಿ ಮುಂಬರುವ Realme 9 4G ಬೆಲೆಯನ್ನು 15,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ನಿಗದಿಪಡಿಸಬಹುದು ಎಂದು ಹೇಳಲಾಗಿದೆ. ಅಲ್ಲದೇ, ಈ ಸ್ಮಾರ್ಟ್‌ಫೋನ್ ಉಲ್ಕೆಯ ಕಪ್ಪು, ಸನ್‌ಬರ್ಸ್ಟ್ ಗೋಲ್ಡ್ ಮತ್ತು ಸ್ಟಾರ್‌ಗೇಜ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗುವ ಬಗ್ಗೆ ಹೇಳಲಾಗಿದೆ. ಆದಾಗ್ಯೂ, ಮುಂಬರುವ Realme 9 4G ಸ್ಮಾರ್ಟ್‌ಫೋನಿ ಯಾವುದೇ ಬೆಲೆ ವಿವರಗಳನ್ನು Realme ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ ಎಂಬುದನ್ನು ಗಮನಿಸಿ. ಬಜೆಟ್ ಬೆಲೆಯಲ್ಲಿ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ Realme 9 4G ಸ್ಮಾರ್ಟ್‌ಫೋನಿನ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆಯಲು ಮರೆಯದಿರಿ. ಏಪ್ರಿಲ್ 7 ರಂದು ಬಿಡುಗಡೆಯಾಗಲಿರುವ Realme 9 4G ಸ್ಮಾರ್ಟ್‌ಫೋನಿನ ಲೈವ್ ಅಪ್‌ಡೇಟ್ಸ್ ಅನ್ನು ನಿಮ್ಮ ವಿಕೆ ಟೆಕ್ ತಾಣದಲ್ಲಿ ಪರೀಶೀಲಿಸಿ.
Realme 9 4g India Launch Date Set For April 7 Expected Price, Specifications.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
14-06-26 09:46 pm
HK News Staffer
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
ದಿನಕ್ಕೆ ಒಂದು ವಾಹನಕ್ಕೆ 200 ಲೀಟರ್ ಡೀಸೆಲ್ ಮಾತ್ರ...
13-06-26 03:01 pm
14-06-26 09:47 pm
HK News Staffer
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
ಎಂಬಿಎ ಲ್ಯಾಬ್ ಶುಲ್ಕ ಅಕ್ರಮ; ಮಂಗಳೂರು ವಿವಿಯ ಆಡಳಿತ...
12-06-26 08:44 pm
14-06-26 05:08 pm
HK News Staffer
ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಅಪಪ್ರಚಾರ; ಸ್ನೇಹಿ...
13-06-26 09:17 pm
ಬೆಂಗಳೂರಿನ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಲ್ಲಿ ಅನ್...
13-06-26 08:43 pm
ಕಾಲೇಜು ಫೀಸ್ಗೆ ಕೊಟ್ಟ 10 ಸಾವಿರವೇ ಜೀವ ತೆಗೆಯಿತು!...
13-06-26 06:14 pm
ಪತ್ನಿ ಹತ್ಯೆಗೆ ಜೈಲಿನಿಂದಲೇ ಸುಪಾರಿ ; ಬುರ್ಖಾ ಧರಿಸ...
12-06-26 11:58 am