ಬ್ರೇಕಿಂಗ್ ನ್ಯೂಸ್
09-02-22 07:24 pm Source: Vijayakarnataka ಡಿಜಿಟಲ್ ಟೆಕ್
ಭಾರತದ ನಂ.1 ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ತನ್ನ JioBook ಲ್ಯಾಪ್‌ಟಾಪ್ ತಯಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಷಯ ಬಹುತೇಕ ಎಲ್ಲರಿಗೂ ತಿಳಿಸಿದೆ ಎನ್ನಬಹುದು. ಭಾರತದ ಡಿಜಿಟಲ್ ಜಗತ್ತಿಗೆ ಮುಂಚೂಣಿ ನಾಯಕತ್ವವನ್ನು ವಹಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜಿಯೋ ತನ್ನ 4G ಸ್ಮಾರ್ಟ್‌ಫೋನ್ ಬಿಡುಗಡೆ ನಂತರ, ಇದೀಗ ತನ್ನ JioBook ಲ್ಯಾಪ್‌ಟಾಪ್ ಅನ್ನು ಹೊರತರಲು ಭರ್ಜರಿ ತಯಾರಿ ನಡೆಸಿದೆ. ಇದಕ್ಕಾಗಿ, ಅಂದರೆ JioBook ಲ್ಯಾಪ್‌ಟಾಪ್ ತಯಾರಿಕೆಗಾಗಿ Emdoor Digital Technology Co., Ltd ಎಂಬ ಹೆಸರಿನ ಚೀನಾದ ಪಾಲುದಾರ ಕಂಪೆನಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.
ಹೌದು, JioBookನ ಪಟ್ಟಿಯನ್ನು ಜನಪ್ರಿಯ ಟಿಪ್‌ಸ್ಟಾರ್ ಮುಕುಲ್ ಶರ್ಮಾ ಅವರು ಗುರುತಿಸಿದ್ದು, JioBook ಸಾಧನದ 'ಉತ್ಪನ್ನ ಹೆಸರು' "QL218_V2.2_JIO_11.6_20220113_v2" ಆಗಿರುತ್ತದೆ. Emdoor ಡಿಜಿಟಲ್ ಟೆಕ್ನಾಲಜಿ ವೆಬ್‌ಸೈಟ್‌ನಲ್ಲಿ "218-ಸರಣಿ" ಸಾಧನಗಳ ಸರಣಿಯು ಸಹ ಕಂಡುಬಂದಿದೆ. Emdoor ಡಿಜಿಟಲ್ ಟೆಕ್ನಾಲಜಿ ಶೆನ್ಜೆನ್ ಮೂಲದ ಕಂಪನಿಯಾಗಿದ್ದು, ಅದು ARM-ಚಾಲಿತ ವಿಂಡೋಸ್ ಲ್ಯಾಪ್‌ಟಾಪ್‌ಗಳನ್ನು ತಯಾರಿಸುತ್ತದೆ. ಇತ್ತೀಚೆಗೆ JioBook ಅನ್ನು ಹಾರ್ಡ್‌ವೇರ್ ಪ್ರಮಾಣೀಕರಣ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಆದಾಗ್ಯೂ ಇದು ಮುಂಬರುವ ಲ್ಯಾಪ್‌ಟಾಪ್ ಬಗೆಗಿನ ಯಾವುದೇ ವೈಶಿಷ್ಟ್ಯಗಳನ್ನು ಅಬಹಿರಂಗಪಡಿಸಿಲ್ಲ.

ಈ Emdoor ಚೀನೀ ವೆಬ್‌ಸೈಟ್‌ನಲ್ಲಿರುವ ಸಾಧನಗಳು ಇಂಟೆಲ್ ಅಥವಾ AMD x86 CPU ಅನ್ನು ಬಳಸುತ್ತವೆ. ಅವೆಲ್ಲವೂ ವಿನ್ಯಾಸಗಳಲ್ಲಿ ಭಿನ್ನವಾಗಿರುತ್ತವೆ ಆದ್ದರಿಂದ ಲ್ಯಾಪ್‌ಟಾಪ್ ಅನ್ನು ಈ ಕಂಪನಿಯು ತಯಾರಿಸಬಹುದು, ಆದರೆ ರಿಲಯನ್ಸ್‌ನ JioBook ಬ್ರ್ಯಾಂಡಿಂಗ್ ಅಡಿಯಲ್ಲಿ ಪ್ರಾರಂಭಿಸಬಹುದು ಎನ್ನಲಾಗಿದೆ. ನಾವು ತಿಳಿದಿರುವಂತೆ, JioBook ಅನ್ನು ಈ ಹಿಂದೆ 2GB RAM ನೊಂದಿಗೆ ಗುರುತಿಸಲಾಗಿತ್ತು. ಇದು ಸಿಂಗಲ್-ಕೋರ್‌ನಲ್ಲಿ 1,178 ಅಂಕಗಳನ್ನು ಮತ್ತು ಮಲ್ಟಿ-ಕೋರ್ ವಿಭಾಗದಲ್ಲಿ 4,246 ಅಂಕಗಳನ್ನು ಗಳಿಸಿದೆ. JioBook ಲ್ಯಾಪ್‌ಟಾಪ್ ತನ್ನ ಭಾರತ ಬಿಡುಗಡೆಯನ್ನು ದೃಢೀಕರಿಸುವ ಮೊದಲು BIS ನಲ್ಲಿ ಕಾಣಿಸಿಕೊಂಡಿದನ್ನು ನೋಡಬಹುದು.
ರಿಲಯನ್ಸ್ ಜಿಯೋವಿನ ಜಿಯೋಬುಕ್‌ನ ಇತರ ವೈಶಿಷ್ಟ್ಯಗಳ ವಿಷಯದಲ್ಲಿ, JioBook 1,366 x 768 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಡಿಸ್‌ಪ್ಲೇಯನ್ನು ಹೊಂದಿರುತ್ತದೆ ಮತ್ತು ಲ್ಯಾಪ್‌ಟಾಪ್ 4G LTE ಸಂಪರ್ಕಕ್ಕಾಗಿ ಸ್ನಾಪ್‌ಡ್ರಾಗನ್ X12 4G ಮೋಡೆಮ್ ಜೊತೆಗೆ Qualcomm Snapdragon 665 SoC ನಿಂದ ಚಾಲಿತವಾಗುತ್ತದೆ ಎನ್ನಲಾಗಿದೆ. ಜಿಯೋ ಕಂಪನಿಯು ಅನೇಕ JioBook ರೂಪಾಂತರಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಗುರುತಿಸಲಾದ ಮಾದರಿಗಳಲ್ಲಿ ಒಂದು 2GB LPDDR4x RAM ಮತ್ತು 32GB eMMC ಸಂಗ್ರಹಣೆಯನ್ನು ಹೊಂದಿದೆ. ಮತ್ತೊಂದು ಮಾದರಿಯು 4GB LPDDR4x RAM ಮತ್ತು 64GB eMMC 5.1 ಸಂಗ್ರಹಣೆಯನ್ನು ಹೊಂದಿದೆ.

JioBook ಮಿನಿ HDMI ಕನೆಕ್ಟರ್, ಡ್ಯುಯಲ್-ಬ್ಯಾಂಡ್ Wi-Fi ಮತ್ತು ಬ್ಲೂಟೂತ್ ಅನ್ನು ಒಳಗೊಂಡಿರುವ ಸಂಪರ್ಕ ಆಯ್ಕೆಗಳನ್ನು ನೀಡುತ್ತದೆ. ಇದು ಮೂರು-ಆಕ್ಸಿಸ್ ಅಕ್ಸೆಲೆರೊಮೀಟರ್ ಮತ್ತು ಕ್ವಾಲ್ಕಾಮ್ ಆಡಿಯೊ ಚಿಪ್ ಅನ್ನು ಸಹ ಹೊಂದಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಒದಗಿಸಲಾಗಿರುವ ಎಲ್ಲಾ ಮಾಹಿತಿಗಳು ಲ್ಯಾಪ್‌ಟಾಪ್ ಉದ್ಯಮ ಮೂಲದಿಂದ ದೊರೆತಿರುವ ನಂಬಲರ್ಹ ಮಾಹಿತಿಗಳಾಗಿದ್ದು, ಈ ಬಗ್ಗೆ ರಿಲಯನ್ಸ್ ಜಿಯೋ ಕಂಪೆನಿ ಯಾವುದೇ ಅಧಿಕೃತ ಮಾಹಿತಿಯನ್ನು ಒದಗಿಸಿಲ್ಲ. ಆದರೆ, ಶೀಘ್ರದಲ್ಲೇ ಜಿಯೋ ಈ ಬಗ್ಗೆ ಮಾಹಿತಿ ನೀಡಬಹುದು ಎಂದು ಊಹಿಸಬಹುದು. ಏಕೆಂದರೆ, ಮಾರ್ಚ್ ತಿಂಗಳ ವೇಳೆಗೆ JioBook ಬಿಡುಗಡೆ ಮಾಡುವ ಬಗ್ಗೆ ಕಂಪೆನಿ ಯೋಜಿಸಿದೆಯಂತೆ.
Reliance Jio Working With A Chinese Partner For Jiobook.
30-07-26 10:28 am
HK News Staffer
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆ ಹೈಕಮಾಂಡ್...
28-07-26 08:12 pm
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
30-07-26 02:16 pm
HK News Staffer
ಪರಿಷತ್ ಸ್ಥಾನ ಕೊಡಿಸುವುದಾಗಿ ಹೇಳಿ ಒಂದೂವರೆ ಕೋಟಿ ಪ...
30-07-26 12:18 pm
ಮಂಗಳೂರು ಪೊಲೀಸರಿಂದ 82 ಕೋಟಿ ರೂ. ಮೌಲ್ಯದ ಡ್ರಗ್ಸ್...
29-07-26 10:45 pm
ಕೋರ್ಟ್ ಆವರಣದಲ್ಲಿ ವಕೀಲರಿಂದಲೇ ವ್ಯಕ್ತಿಯ ಮೇಲೆ ಹಲ್...
29-07-26 09:43 pm
Mangalore crime: ಆರೈಕೆ ನೆಪದಲ್ಲಿ ಬಂದ್ಲು ರಾಕ್ಷಸ...
29-07-26 06:51 pm