ಬ್ರೇಕಿಂಗ್ ನ್ಯೂಸ್
22-09-21 10:31 pm Source; News 18 Kannada ಡಿಜಿಟಲ್ ಟೆಕ್
Lucid Air Dream EV Car: ಲೂಸಿಡ್ ಗ್ರೂಪ್ ತಮ್ಮ ಮೊದಲ ಸಂಪೂರ್ಣ ಐಷಾರಾಮಿ ಸೆಡಾನ್ ಲೂಸಿಡ್ ಏರ್ ಡ್ರೀಮ್ ಎಡಿಷನ್ ರೇಂಜ್ ಎಲೆಕ್ಟ್ರಿಕ್ ಕಾರನ್ನು ಅಧಿಕೃತ ಇಪಿಎ (ಪರಿಸರ ಸಂರಕ್ಷಣಾ ಸಂಸ್ಥೆ) ಒಳಪಡಿಸಿ ರೇಟಿಂಗ್ ಪಡೆದುಕೊಂಡಿದೆ. ಅದರಲ್ಲಿ 520 ರೇಟಿಂಗ್ ಅಂದರೆ ಸರಿಸುಮಾರು 836 ಕಿ.ಮೀ ಮೈಲಿ ಕ್ರಮಿಸಲಿದೆ ಎಂದು ಘೋಷಿಸಿದೆ.
Lucid's 1st Luxury Electric Sedan: ಅಮೆರಿಕ ಮೂಲದ ಲೂಸಿಡ್ ಮೋಟಾರ್ಸ್ ಬಹುನಿರೀಕ್ಷಿತ ಏರ್ ಡ್ರೀಮ್ ಎಡಿಶನ್ ಅನ್ನು ಸಿದ್ಧಪಡಿಸಿದೆ. ಈ ವರ್ಷದ ಕೊನೆಯಲ್ಲಿ ಗ್ರಾಹಕರ ಕೈ ಸೇರುವಂತೆ ಮಾಡುತ್ತಿದೆ. ನೂತನ ಕಾರು ಎಲೆಕ್ಟ್ರಿಕ್ ಮಾದರಿಯಾಗಿದ್ದು, ಅತಿ ಉದ್ದದ ವಾಹನ ಎಂಬ ಹೆಗ್ಗಲಿಕೆ ಪಡೆದುಕೊಂಡಿದೆ. ಲೂಸಿಡ್ ಗ್ರೂಪ್ ತಮ್ಮ ಮೊದಲ ಸಂಪೂರ್ಣ ಐಷಾರಾಮಿ ಸೆಡಾನ್ ಲೂಸಿಡ್ ಏರ್ ಡ್ರೀಮ್ ಎಡಿಷನ್ ರೇಂಜ್ ಎಲೆಕ್ಟ್ರಿಕ್ ಕಾರನ್ನು ಅಧಿಕೃತ ಇಪಿಎ (ಪರಿಸರ ಸಂರಕ್ಷಣಾ ಸಂಸ್ಥೆ) ಒಳಪಡಿಸಿ ರೇಟಿಂಗ್ ಪಡೆದುಕೊಂಡಿದೆ. ಅದರಲ್ಲಿ 520 ರೇಟಿಂಗ್ ಅಂದರೆ ಸರಿಸುಮಾರು 836 ಕಿ.ಮೀ ಮೈಲಿ ಕ್ರಮಿಸಲಿದೆ ಎಂದು ಘೋಷಿಸಿದೆ.
ಸದ್ಯ ಈ ಕಾರಿನ ಮೇಲೆ ಏಜೆನ್ಸಿಯು ನೀಡಿರುವ ದೀರ್ಘ-ಶ್ರೇಣಿಯ ರೇಟಿಂಗ್ ಆಗಿದ್ದು, ಹೊಸ ದಾಖಲೆ ಬರೆದಿದೆ. ಮಾತ್ರವಲ್ಲದೆ, ಮುಂಬರುವ EV ವಾಹನಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಇನ್ನು ಪ್ರತಿಸ್ಪರ್ಧಿ ಟೆಸ್ಲಾ ಮೇಲೆ ಹೆಚ್ಚುವರಿ 100 ಪ್ಲಸ್ ಮೈಲುಗಳ ಶ್ರೇಣಿಯನ್ನು ನೀಡುತ್ತದೆ. ಅಂದಹಾಗೆಯೇ ಎಲಾನ್ ಮಸ್ಕ್ ಅವರ ಟೆಸ್ಲಾ ಎಸ್ ಮಾದರಿಯು 405 ಮೈಲುಗಳ (ಸುಮಾರು 651 ಕಿಮೀ) ಇಪಿಎ-ರೇಟೆಡ್ ಶ್ರೇಣಿಯನ್ನು ಹೊಂದಿದೆ.
ಕಂಪನಿಯ ಸಿಇಒ ಮತ್ತು ಸಿಟಿಒ, ಪೀಟರ್ ರಾವ್ಲಿನ್ಸನ್ ಅವರು ಅಧಿಕೃತ ಹೇಳಿಕೆಯಲ್ಲಿ ಹೊಸ ಸಾಧನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. "ನಮ್ಮ ಲೂಸಿಡ್ ಏರ್ ಡ್ರೀಮ್ ಆವೃತ್ತಿಯು EPA ಯಿಂದ 520 ಮೈಲುಗಳ ವ್ಯಾಪ್ತಿಯೊಂದಿಗೆ ಅಧಿಕೃತವಾಗಿ ಮಾನ್ಯತೆ ಪಡೆದಿರುವುದಕ್ಕೆ ನನಗೆ ಸಂತೋಷವಾಗಿದೆ, ಈ ಸಂಖ್ಯೆ ಮುಂಬರುವ ಹೊಸ EV ವಾಹನಗಳಿಗೆ ಹೊಸ ದಾಖಲೆ ಬರೆಯಲು ಪ್ರೇರಣೆ ಎಂದು ನಾನು ನಂಬುತ್ತೇನೆ" ಎಂದರು.
ನಂತರ ಮಾತು ಮುಂದುವರಿಸಿದ ಅವರು ‘‘ಚಿಕ್ಕ ಗಾತ್ರದ ಬ್ಯಾಟರಿ ಪ್ಯಾಕ್‘‘ ಅನ್ನು ಅಳವಡಿಸಿರುವುದೇ ಈ ನೂತನ ಕಾರಿನ ಹೆಗ್ಗುರುತನ್ನು ಸಾಧಿಸಲು ಸಾಧ್ಯವಾಗಿದೆ. ಲೂಸಿಡ್ ಮೋಟಾರ್ಸ್‌ನ ರೇಸ್-ಪ್ರೂವ್ 900V ಬ್ಯಾಟರಿಯ ಜೊತೆಗೆ BMS ತಂತ್ರಜ್ಞಾನ, ಮಿನಿಯೇಚರೈಸ್ಡ್ ಡ್ರೈವ್ ಯೂನಿಟ್‌ಗಳು ಮತ್ತು ವಂಡರ್‌ಬಾಕ್ಸ್ ತಂತ್ರಜ್ಞಾನ ಹೊಂದಿದೆ. ಕಡಿಮೆ ಬ್ಯಾಟರಿ ಶಕ್ತಿಯಿಂದ ಹೆಚ್ಚು ಮೈಲುಗಳಷ್ಟು ಪ್ರಯಾಣಿಸಲು ಈ ಕಾರು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಲೂಸಿಡ್ ಗ್ರೂಪ್ ವೆಬ್‌ಸೈಟ್‌ನಲ್ಲಿ ಡ್ರೀಮ್ ಎಡಿಷನ್ ಪರ್ಫಾರ್ಮೆನ್ಸ್ ಮತ್ತು ಗ್ರ್ಯಾಂಡ್ ಟೂರಿಂಗ್ ಆವೃತ್ತಿಗಳನ್ನು ಒಳಗೊಂಡಂತೆ ತಮ್ಮ ಇತರ ಕಾರುಗಳು/ಮಾದರಿಗಳ ಇಪಿಎ ರೇಟಿಂಗ್‌ಗಳನ್ನು ಹಂಚಿಕೊಂಡಿದೆ. ಪ್ರಸ್ತುತ, ಲೂಸಿಡ್ ಏರ್ ಮಾದರಿಗಳು ಎಲ್ಲಾ ಇವಿಗಳಲ್ಲಿ ಒಟ್ಟಾರೆ ಇಪಿಎ ಶ್ರೇಣಿಯ ರೇಟಿಂಗ್‌ಗಳಲ್ಲಿ ಅಗ್ರ ಆರು ಸ್ಥಾನಗಳನ್ನು ಪಡೆದಿವೆ.
ಲೂಸಿಡ್ ತಮ್ಮ ಹತ್ತಿರದ ಸ್ಪರ್ಧಿ ಟೆಸ್ಲಾರನ್ನು ರೇಂಜ್ ರೇಟಿಂಗ್‌ನಲ್ಲಿ ಲಾಂಗ್ ಶಾಟ್ ಮೂಲಕ ಉರುಳಿಸಿರಬಹುದಾಗಿದೆ. ಆದರೆ ಅವರ ವಾಹನಗಳ ಬೆಲೆ ತುಂಬಾ ಹೆಚ್ಚಾಗಿದೆ. ಏರ್ ಡ್ರೀಮ್ ಆರ್ ಅಂದಾಜು $ 169,000 (ಅಂದಾಜು ರೂ 1,24,47,000) ಆಗಿದ್ದು, ಆದರೆ ಇತ್ತೀಚಿನ ಮಾಡೆಲ್ S ಅನ್ನು $ 90,000ಕ್ಕೆ (ಸುಮಾರು ರೂ. 66,29,000) ಖರೀದಿಸಬಹುದು.
Lucids 1st Luxury Electric Sedan Air Aream Edition is longest EV car to clock 836 km range which beats Tesla.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm