ಬ್ರೇಕಿಂಗ್ ನ್ಯೂಸ್
24-08-21 05:02 pm Mayuri N ಡಿಜಿಟಲ್ ಟೆಕ್
ನವದೆಹಲಿ, ಆಗಸ್ಟ್ 24: ಇನ್ನು ಮುಂದೆ ಕೊರೊನಾ ವೈರಸ್ ಸೋಂಕು ವಿರುದ್ದದ ಲಸಿಕೆ ಪಡೆಯುವ ಫಲಾನುಭವಿಗಳು ಈಗ ವಾಟ್ಸಾಪ್ ಮೂಲಕವೂ ಕೋವಿಡ್ ಲಸಿಕೆಯ ಸ್ಲಾಟ್ ಬುಕ್ ಮಾಡಬಹುದು. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದ್ದು, ಕೋವಿಡ್ ಲಸಿಕೆ ಪಡೆಯಬಹುದಾದ ಫಲಾನುಭವಿಗಳು ಕೊರೊನಾ ಸಹಾಯವಾಣಿ ಸಂಖ್ಯೆಗೆ ವಾಟ್ಸಾಪ್ ಮಾಡುವ ಮೂಲಕ ಕೋವಿಡ್ ಲಸಿಕೆಗಾಗಿ ತಮ್ಮ ಹತ್ತಿರದ ಕೋವಿಡ್ ಲಸಿಕೆ ಕೇಂದ್ರದಲ್ಲಿ ದಾಖಲಾತಿಯನ್ನು ಪಡೆಯಬಹುದು ಎಂದು ತಿಳಿಸಿದೆ.
ನೀವು ನಿಮ್ಮ ನಿವಾಸದ ಸಮೀಪದ ಕೋವಿಡ್ ಲಸಿಕಾ ಕೇಂದ್ರದಲ್ಲಿ ಕೋವಿಡ್ ಲಸಿಕೆಯನ್ನು ಪಡೆಯಬೇಕಾದರೆ ವಾಟ್ಸಾಪ್ ಸಂಖ್ಯೆ +91 9013151515 ಸಂಖ್ಯೆಗೆ "Book Slot" ಎಂದು ಸಂದೇಶವನ್ನು ಕಳಿಸುವ ಮೂಲಕ ಸ್ಲಾಟ್ ಬುಕ್ ಮಾಡಬಹುದು. ಆನ್‌ಲೈನ್ ಕೋವಿನ್ ಮೂಲಕ ಕೋವಿಡ್ ಲಸಿಕೆ ಸ್ಲಾಟ್‌ಗಳನ್ನು ಬುಕ್ ಮಾಡಲು ಸರಿಯಾಗಿ ತಿಳಿಯದವರಿಗೆ ಈ ವಾಟ್ಸಾಪ್ ಸೌಕರ್ಯವು ಸ್ಲಾಟ್ ಬುಕ್ ಮಾಡಲು ಬಹಳ ಸರಳ ವಿಧಾನವಾಗಿದೆ.
ಕಳೆದ ಮಾರ್ಚ್ ತಿಂಗಳಿನಿಂದ ಮೈಗವರ್ನಮೆಂಟ್ ಕೊರೊನಾ ಹೆಲ್ಪ್‌ಲೈನ್ ಡೆಸ್ಕ್‌ನ ವಾಟ್ಸಾಪ್ ಕೂಡಾ ಇದೆ. ಇದು ಹ್ಯಾಪ್ಟಿಕ್‌ನ ಎಐ ಸೊಲ್ಯೂಷನ್‌ನಿಂದ ಚಾಲಿತವಾಗಿದೆ ಹಾಗೂ Turn.io ನಿಂದ ಬೆಂಬಲಿತವಾಗಿದೆ. ಸುಮಾರು 41 ದಶಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಬಳಕೆದಾರರಿಗೆ ಕೋವಿಡ್ ಸಂಬಂಧಿತ ಮಾಹಿತಿ ನೀಡುವಲ್ಲಿ ಈ ವಾಟ್ಸಪ್ ಸಹಾಯವಾಣಿಯು ಪ್ರಮುಖ ಪಾತ್ರವನ್ನು ವಹಿಸಿದೆ. ಈ ತಿಂಗಳಿನ ಆರಂಭದಲ್ಲಿ ಮೈಗವರ್ನಮೆಂಟ್ ಹಾಗೂ ವಾಟ್ಸಾಪ್ ತಮ್ಮ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಿದೆ ಹಾಗೂ ಕೋವಿಡ್ ಲಸಿಕೆ ಪಡೆದವರು ವಾಟ್ಸಾಪ್ ಮೂಲಕ ಕೋವಿಡ್ ಲಸಿಕೆ ಪ್ರಮಾಣ ಪತ್ರವನ್ನು ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಸೌಲಭ್ಯದ ಮೂಲಕ ಈವರೆಗೂ ಸುಮಾರು 32 ಲಕ್ಷ ಕೋವಿಡ್ ಲಸಿಕೆ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಮೈಗವರ್ನಮೆಂಟ್ ಸಿಇಒ ಅಭಿಷೇಕ್ ಸಿಂಗ್, "ಸರಿಯಾದ ವೇದಿಕೆ ಹಾಗೂ ತಂತ್ರಜ್ಞಾನವನ್ನು ಒಂದುಗೂಡಿದಾಗ ಅದರ ಫಲಿತಾಂಶವು ಅಪಾರ ಉಪಯೋಗದಾಯಕವಾಗಿರುತ್ತದೆ. ಮೈಗವರ್ನಮೆಂಟ್ ಕೊರೊನಾ ಹೆಲ್ಪ್‌ಲೈನ್ ಡೆಸ್ಕ್ ಆರಂಭವಾದ ಸಂದರ್ಭದಿಂದ ಅದು ಹ್ಯಾಪ್ಟಿಕ್‌ನ ಎಐ ಸೊಲ್ಯೂಷನ್ ಮತ್ತು Turn.io ನಿಂದ ಬೆಂಬಲಿತವಾಗಿದೆ. ಈ ವಾಟ್ಸಾಪ್ ಸಹಾಯವಾಣಿಯು ಜನರಿಗೆ ಕೊರೊನಾ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡುವುದು ಮಾತ್ರವಲ್ಲದೇ ಈಗ ವಾಟ್ಸಾಪ್ ಮೂಲಕ ಕೋವಿಡ್ ಲಸಿಕೆಗೆ ಸ್ಲಾಟ್ ಬುಕ್ ಮಾಡಬಹುದು, ತಮ್ಮ ಸಮೀಪದ ಕೋವಿಡ್ ಲಸಿಕೆ ಕೇಂದ್ರಗಳ ಮಾಹಿತಿಯನ್ನು ಪಡೆಯಬಹುದು, ಹಾಗೆಯೇ ಕೋವಿಡ್ ಲಸಿಕೆ ಪಡೆದ ಬಳಿಕ ಪ್ರಮಾಣ ಪತ್ರವನ್ನು ಕೂಡಾ ಡೌನ್‌ಲೋಡ್ ಮಾಡಬಹುದು," ಎಂದು ಮಾಹಿತಿ ನೀಡಿದ್ದಾರೆ.
ಇನ್ನು ವಾಟ್ಸಾಪ್ ನಲ್ಲಿ ಸಾರ್ವಜನಿಕ ನೀತಿ ನಿರ್ದೇಶಕರು ಆಗಿರುವ ಶಿವನಾಥ್ ತುಕ್ರಲ್ ಮಾತನಾಡಿ, "ಈ ಹಿಂದೆ ವಾಟ್ಸಾಪ್ ಮೂಲಕ ಕೋವಿಡ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕೇಳಬಹುದಿತ್ತು ಹಾಗೂ ಕೋವಿಡ್ ಲಸಿಕೆ ಪಡೆದವರು ತಮ್ಮ ಕೋವಿಡ್ ಪ್ರಮಾಣ ಪತ್ರವನ್ನು ಕೂಡಾ ಡೌನ್‌ಲೋಡ್ ಮಾಡಬಹುದಿತ್ತು. ಆದರೆ ಇನ್ನು ಮುಂದೆ ಜನರಿಗೆ ಕೋವಿಡ್ ಲಸಿಕೆ ಸ್ಲಾಟ್ ಅನ್ನು ಕೂಡಾ ಬುಕ್ ಮಾಡಬಹುದು. ನಾವು ಜೊತೆ ಸೇರಿ ಜನರಿಗೆ ಕೊರೊನಾ ವೈರಸ್ ವಿರುದ್ದದ ಲಸಿಕೆ ಪಡೆಯಲು ಸಹಾಯವಾಗುವ, ಸರಳವಾಗುವ ಎಲ್ಲಾ ಕಾರ್ಯ ವಿಧಾನವನ್ನು ಕೈಗೊಳ್ಳುತ್ತೇವೆ," ಎಂದು ತಿಳಿಸಿದ್ದಾರೆ.
ಹಾಗಾದರೆ ಸಹಾಯವಾಣಿಯ ಮೂಲಕ ಕೋವಿಡ್ ಲಸಿಕೆ ಸ್ಲಾಟ್ ಬುಕ್ ಮಾಡುವುದು ಹೇಗೆ?
(Kannada Copy of One India Kannada)
09-08-25 08:00 pm
HK Staff
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
09-08-25 07:38 pm
HK Staff
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
09-08-25 08:10 pm
Mangalore Correspondent
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm