ಬ್ರೇಕಿಂಗ್ ನ್ಯೂಸ್
08-08-21 05:16 pm Meghashree Devaraju, Gizbot ಡಿಜಿಟಲ್ ಟೆಕ್
ನಾವು ಬ್ಯಾಗ್‌ಗಳನ್ನು ಖರೀದಿಸುವಾಗ ನೋಡಲು ಚೆನ್ನಾಗಿ ಕಾಣುವುದರ ಜತೆಗೆ ತೆಗೆದುಕೊಂಡು ಹೋಗಲು ಅನುಕೂಲವಾಗುವಂಥ, ಎಲ್ಲಾ ವಸ್ತುಗಳು ಇಡಲು ಹಲವು ಪ್ಯಾಕೆಟ್‌ಗಳು ಇರುವಂಥ ಬ್ಯಾಗ್‌ಗಳನ್ನು ಖರೀದಿಸುತ್ತೇವೆ. ಅದರಲ್ಲೂ ಪ್ರವಾಸಕ್ಕೆ, ಟ್ರೆಕ್ಕಿಂಗ್‌ಗೆ ಹೋಗಬೇಕಾದರೆ ಒಂದು ಒಳ್ಳೆಯ ಅನುಕೂಲಕರ ಟ್ರ್ಯಾಲಿ ಬ್ಯಾಗ್ ಇದ್ದರೆ ಇಡೀ ಪ್ರವಾಸವೇ ಸ್ಮರಣೀಯವಾಗುವುದರಲ್ಲಿ ಸಂಶಯವಿಲ್ಲ. ಇನ್ನೇಕೆ ತಡ ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ ಗ್ರಾಹಕರಿಗೆ ಪ್ರವಾಸಿ ಬ್ಯಾಗ್, ಬ್ಯಾಕ್ ಪ್ಯಾಕ್, ಲಗೇಜ್ ಬ್ಯಾಗ್ ಮತ್ತು ಜಿಮ್ ಬ್ಯಾಗ್‌ಗಳ ಮೇಲೆ ಅದ್ಭುತ ಆಫರ್‌ಗಳನ್ನು ನೀಡುತ್ತಿದೆ.
ಈ ವಿಶೇಷ ಆಫರ್ ಸೇಲ್ ಆಗಸ್ಟ್ 5ರಿಂದ ಆಗಸ್ಟ್ 9ರವರೆಗೆ ಮಾತ್ರ ಸೀಮಿತವಾಗಿದ್ದು ಇಲ್ಲಿ ಸಾಮಾನ್ಯ ದರಕ್ಕಿಂತ ಸಾಕಷ್ಟು ಕಡಿಮೆ ಬೆಲೆಗೆ ಬ್ಯಾಗ್‌ಗಳು ಮಾರಾಟಕ್ಕಿದೆ. ಅಲ್ಲದೆ, ವಿವಿಧ ರಿಯಾಯಿತಿಗಳು ಮತ್ತು ಅತ್ಯಾಕರ್ಷಕ ಕೊಡುಗೆಗಳೊಂದಿಗೆ, ಅಮೆಜಾನ್ ನಿಮ್ಮ ಅಗತ್ಯಗಳಿಗೆ ತಕ್ಕಂತೆ ವಸ್ತುಗಳನ್ನು ಖರೀದಿಸಲು ನಿಮಗಾಗಿ ಸುವರ್ಣಾವಕಾಶವನ್ನು ನೀಡುತ್ತಿದೆ. ಅಮೆಜಾನ್ ರಿಯಾಯಿತಿ ಮಾರಾಟದಲ್ಲಿ ಎಷ್ಟೆಲ್ಲಾ ವಿಭಿನ್ನ ಬ್ಯಾಗ್‌ಗಳಿವೆ, ಇದರ ಬೆಲೆ ಹಾಗೂ ವಿಶೇಷ ಅಫರ್‌ಗಳ ಪಟ್ಟಿ ಇಲ್ಲಿದೆ ನೋಡಿ:
1. ಟ್ರೆಕ್ಕಿಂಗ್ ಬ್ಯಾಗ್ - ಪೊಲಿಸ್ಟರ್ ಎಕ್ಸ್‌ಪ್ಲೋರ್ 55 ಲೀ ರಕ್ಸ್ಯಾಕ್ ಹೈಕಿಂಗ್ ಬ್ಯಾಕ್‌ಪ್ಯಾಕ್‌ನೊಂದಿಗೆ ಮಳೆ ಹೊದಿಕೆ
ಟ್ರೆಕ್ಕಿಂಗ್ ಹೋಗುವವರಿಗೆ ಮತ್ತು ಪ್ರಯಾಣ ಮಾಡುವವರಿಗೆ ಹೇಳಿ ಮಾಡಿಸಿದ ಬ್ಯಾಗ್ ಇದಾಗಿದೆ. 55 ಲೀಟರ್ ಸಾಮರ್ಥ್ಯದ ಪೊಲಿಸ್ಟರ್ ಎಕ್ಸ್‌ಪ್ಲೋರ್ ಬ್ಯಾಗ್‌ಗೆ ಮಳೆ ಬಂದಾಗ ಅದಕ್ಕೆ ರಕ್ಷಣೆಯಾಗಿ ಮಳೆಯಿಂದ ರಕ್ಷಣೆ ನೀಡುವಂಥ ಮಳೆ ಹೊದಿಕೆ ಇರಲಿದೆ ಮತ್ತು ಶೂ ಇಡಲು ಸಹ ಪ್ರತ್ಯೇಕ ವಿಭಾಗವಿದೆ. ಟ್ರೆಕ್ಕಿಂಗ್ ಸಮಯದಲ್ಲಿ ದಿಢೀರ್ ಮಳೆ ಬಂದಾಗ ಯಾವುದೇ ಕಷ್ಟವಿಲ್ಲದೆ ಸುಲಭವಾಗಿ ಮಳೆ ಹೊದಿಕೆಯನ್ನು ಎಳೆಯಬಹುದು. ಬಹಳ ಹಗುರವಿರುವ ರಕ್ಸ್ಯಾಕ್ ಬ್ಯಾಗ್‌ನಲ್ಲಿ ಅಗಲವಾದ ಸ್ಥಳವಾಕಾಶ ಇರುವಂಥ ಒಂದು ಮುಖ್ಯ ಜಿಪ್ಪರ್ ವಿಭಾಗ ಮತ್ತು ಎರಡು ಬದಿಯಲ್ಲಿ ನೆಟ್ ಪಾಕೆಟ್‌ಗಳೊಂದಿಗೆ ಬರುತ್ತದೆ. ಇದು ನೀಲಿಯ ಬಣ್ಣದಾಗಿದೆ.
ಜಿಮ್ ಬ್ಯಾಗ್- ಪ್ಯುಮಾ ಯುನಿಸೆಕ್ಸ್- ಅಡಲ್ಟ್ ಪ್ಯುಮಾ ಜಿಮ್ ಬ್ಯಾಗ್ IND III
ನೋಡಲು ಸುಂದರವಾದ ಮತ್ತು ವಿಶಾಲವಾದ ಸ್ಥಳಾವಕಾಶ ಇರುವ ಜಿಮ್ ಬ್ಯಾಗ್ ಬ್ಲ್ಯಾಕ್ ಮತ್ತು ಲೈಮ್ ಗ್ರೀನ್ ಮಿಶ್ರಿತ ಬಣ್ಣದಲ್ಲಿದೆ. ನಿಮ್ಮ ಜಿಮ್ ಬಟ್ಟೆ ಮತ್ತು ಇತರ ವಸ್ತುಗಳನ್ನು ಇಡಲು ಅನುಕೂಲಕರವಾದ ಈ ಬ್ಯಾಗ್ ಮೇಲೆ 56% ರಷ್ಟು ರಿಯಾಯಿತಿ ಇದೆ. ಪಾಲಿಸ್ಟರ್ ಬಟ್ಟೆಯ ಮತ್ತು ಜಿಪ್ಪರ್ ಲಾಕ್ ಇರುವ ಈ ಬ್ಯಾಗ್‌ಗೆ ಸಾಕಷ್ಟು ಭಾರದ ವಸ್ತುಗಳನ್ನು ಹೊರುವಂಥ ಸಾಮಾರ್ಥ್ಯವಿದೆ ಮತ್ತು ಟ್ರೆಂಡಿಯಾಗಿ ಸಹ ಕಾಣುತ್ತದೆ.
ಲ್ಯಾಪ್‌ಟಾಪ್ ಬ್ಯಾಗ್ - ಹ್ಯಾಮಂಡ್ಸ್ ಫ್ಲೈ ಕ್ಯಾಚರ್ ಪ್ಯೂರ್ ಲೆದರ್ 14 ಇಂಚಿನ ಪುರುಷರ ಮೆಸೆಂಜರ್ ಬ್ಯಾಗ್ (ಬ್ರೌನ್)
ಲ್ಯಾಪ್‌ಟ್ಯಾಪ್ ಇಡಲು ಕಾಲದಿಂದ ಕಾಲಕ್ಕೆ ಭಿನ್ನ ಭಿನ್ನ ವಾದ ಟ್ರೆಂಡಿ ಬ್ಯಾಗ್‌ಗಳು ಬರುತ್ತಲೇ ಇದೆ. ಅದರೆ ಅಮೆಜಾನ್ ಆಫರ್‌ನಲ್ಲಿ ನೀಡುತ್ತಿರುವ ಹ್ಯಾಮಂಡ್ ನ ಫ್ಲೈ ಕ್ಯಾಚರ್ ಅಪಟ್ಟ ಲೆದರ್ ಬ್ಯಾಗ್ ಆಗಿದ್ದು, ಬರೋಬ್ಬರಿ 78% ರಷ್ಟು ರಿಯಾಯಿತಿಯೊಂದಿಗೆ ನಿಮಗೆ ಲಭ್ಯವಿದೆ. ಕಂದು ಬಣ್ಣದ ಈ ಬ್ಯಾಗ್ ನೋಡಲು ಕ್ಲಾಸಿ ಲುಕ್ ಇದ್ದು ಇದೇ ರೀತಿಯ ಇತರ 7 ವಿಭಿನ್ನ ಬಣ್ಣ ಆಯ್ಕೆಯನ್ನು ನೀವು ಮಾಡಬಹುದು. ಬ್ಯಾಗ್ ಅತ್ಯಂತ ಸೊಗಸಾದ ಮತ್ತು ಸಾಕಷ್ಟು ಹಗುರವಾಗಿರುತ್ತದೆ.
ಟ್ರಾಲಿ ಬ್ಯಾಗ್ - ಸ್ಕೈಬ್ಯಾಗ್ಸ್ ಟ್ರೂಪರ್ ಪಾಲಿಕಾರ್ಬೊನೇಟ್ ಹಾರ್ಡ್ ಸೈಡ್ ಲಗೇಜ್ 2 ಬ್ಯಾಗ್ - ಸಣ್ಣದು ಮತ್ತು ಮಧ್ಯಮ ಗಾತ್ರದ್ದು
ಅಮೆಜಾನ್ ನೀಡಿರುವ ಕಾಂಬೊ ಆಫರ್‌ನಲ್ಲಿ ಇದು ಅದ್ಭುತ ಆಫರ್ ಆಗಿದೆ. ನೀಲಿ ಬಣ್ಣ್ ಎರಡು ಲಗೇಜ್ ಟ್ರಾಲಿ ಬ್ಯಾಗ್‌ಗಳನ್ನು ನೀವು ಅತಿ ಕಡಿಮೆ ಖರೀದಿಸಬಹುದು. ಪಾಲಿಕಾರ್ಬೊನೇಟ್ ವಸ್ತುಗಳಿಂದ ಮಾಡಲ್ಪಟ್ಟಿರುವ ಈ ಬ್ಯಾಗ್ ಸಣ್ಣ ಮತ್ತು ಮಧ್ಯಮ ಗಾತ್ರದ ಎರಡೂ ಆಕರ್ಷಕ ಲುಕ್‌ನಿಂದ ಕಾಣುತ್ತಿದೆ. ಒಳಗೆ ಎರಡು ದೊಡ್ಡ ವಿಭಾಗಗಳನ್ನು ಹೊಂದಿರುವ ಈ ಬ್ಯಾಗ್ ನಂಬರ್ ಲಾಕ್ ಮೂಲಕ ಬ್ಯಾಗ್ ನಿಮ್ಮ ವಸ್ತುಗಳನ್ನು ಸೇಫ್ ಮಾಡುತ್ತದೆ.
ಟ್ರಾಲಿ ಲಗೇಜ್ ಬ್ಯಾಗ್ - ಅರಿಸ್ಟೊಕ್ರಾಟ್ ಡೇಲ್ ಪಾಲಿಸ್ಟರ್ 51.6 ಸೆಂಮೀ ಟ್ರಾವೆಲ್ ಡಫಲ್ ಜೊತೆಗೆ ಕಾರ್ನರ್ ಗಾರ್ಡ್ಸ್
ನೀವು ಒಬ್ಬರೇ ಪ್ರವಾಸಕ್ಕೆ ಹೊರಟಿದ್ದರೆ ಈ ಡಫಲ್ ಬ್ಯಾಗ್ ಅನ್ನು ಖಂಡಿತಾ ಹೊಂದಿರಲೇಬೇಕು. ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಮಾರಾಟವು ನಿಮಗೆ 51.6 ಸೆಂ.ಮೀ ನ ಅರಿಸ್ಟೊಕ್ರಾಟ್ ಡಫಲ್ ಬ್ಯಾಗ್ ಅನ್ನು ಕಡಿಮೆ ಬೆಲೆಗೆ ನೀಡುತ್ತಿದೆ. ಈ ಡಫಲ್ ಬ್ಯಾಗ್‌ನಲ್ಲಿ ಮೂಲೆಯಲ್ಲಿ ಟ್ರಾಲಿ ರೀತಿಯ ಕಾರ್ನರ್ ಗಾರ್ಡ್ಸ್ ಸಹ ಇದೆ. ಇದು ಅವಶ್ಯವಿದ್ದಾಗ ಬಳಸಬಹುದು ಇಲ್ಲವಾದಲ್ಲಿ ಮಡಚಬಹುದು. ಮಧ್ಯದಲ್ಲಿ ದೊಡ್ಡದಾದ ಸ್ಥಳಾವಕಾಶದ ಜಿಪ್ಪರ್ ಮತ್ತು ಪಕ್ಕದಲ್ಲಿ ಸಣ್ಣದಾದ ಜಿಪ್ಪರ್ ಸಹ ಇದೆ. ಬೂದು ಬಣ್ಣದ, ಕಡಿಮೆ ತೂಕವುದ ಈ ಬ್ಯಾಗ್‌ನ ಎರಡು ಚಕ್ರಗಳಿವೆ.
ಕ್ಯಾಶುಯಲ್ ಬ್ಯಾಗ್ - ಸ್ಕೈಬ್ಯಾಗ್ 32 ಲೀ. ಬ್ಯಾಗ್
ಬೆನ್ನಿಗೆ ಹಾಕಿಕೊಳ್ಳಬಹುದಾದ ಆಕರ್ಷಕ ನೀಲಿ ಬಣ್ಣದ ಈ ಬ್ಯಾಗ್ ಎರಡೂ ಬದಿಗಳಲ್ಲಿ ಜಾಲರಿ ಪಾಕೆಟ್‌ಗಳನ್ನು ಹೊಂದಿದೆ ಮತ್ತು ಹೆಚ್ಚು ಭಾರ ಗೊತ್ತಗದಂತೆ ಇರಲು ಅಗಲವಾದ ಭುಜದ ಪಟ್ಟಿಗಳನ್ನು ಸಹ ಹೊಂದಿದೆ. ಮೂರು ಪ್ರಮುಖ ಜಿಪ್ಪರ್ ವಿಭಾಗಗಳು ಮತ್ತು 1 ಮುಂಭಾಗದ ಪಾಕೆಟ್ ಇರುವ ಈ ಬ್ಯಾಗ್‌ಗೆ 1 ವರ್ಷದ ಗ್ಯಾರೆಂಟಿ ಇದೆ.
ಸ್ಕೂಲ್ ಬ್ಯಾಕ್‌ಪ್ಯಾಕ್- ಪಾಲಿಸ್ಟಾರ್ 30 ಲೀ. ಕ್ಯಾಶುವಲ್ ಸ್ಕೂಲ್ ಬ್ಯಾಕ್‌ಪ್ಯಾಕ್
ನಿಮ್ಮ ಮಗುವಿಗೆ ಸೂಕ್ತವಾದ ಶಾಲಾ ಬ್ಯಾಗ್ ಹುಡುಕುತ್ತಿದ್ದರೆ ಈ ಬ್ಯಾಗ್ ಅನ್ನು ಅಮೆಜಾನ್‌ನಿಂದ ಖರೀದಿಸಬಹುದು. ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಆಫರ್‌ನಲ್ಲಿ ಉತ್ತಮ ಕ್ವಾಲಿಟಿಯ ಈ ಬ್ಯಾಗ್ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. 30 ಲೀಟರ್ ಸಾಮರ್ಥ್ಯದ ಕಪ್ಪು ಬಣ್ಣದ ಪಾಲಿಸ್ಟಾರ್ ಬ್ಯಾಗ್ ಮೇಲೆ 73% ರಿಯಾಯಿತಿ ಇದೆ. ಈ ಬ್ಯಾಗ್‌ನಲ್ಲಿ 2 ಮುಖ್ಯ ವಿಶಾಲವಾದ ವಿಭಾಗಗಳು ಮತ್ತು ಒಂದು ಮುಂಭಾಗದ ಜಿಪ್ಪರ್ ಪಾಕೆಟ್ ಸಹ ಇದೆ.
ಜೆನಿ ಮಿಯಾಮಿ 13 ಲೀ. ರೋಸ್ ಕ್ಯಾಶುಯಲ್ ಬ್ಯಾಗ್
ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ಆಫರ್‌ನಲ್ಲಿ ನಿಮಗೆ ಸಿಗುತ್ತಿರುವ ಮತ್ತೊಂದು ವಿಭಿನ್ನ ಮತ್ತು ಟ್ರೆಂಡಿ ಬ್ಯಾಗ್ ಇದು. ಜಿನೀ ಮಿಯಾಮಿ 13 ಲೀಟರ್ ಕ್ಯಾಶುಯಲ್ ಬ್ಯಾಗ್ ಮೇಲೆ 30% ರಿಯಾಯಿತಿ ಇದೆ. ಈ ಬ್ಯಾಗ್ 5 ವಿವಿಧ ಬಣ್ಣ ಆಯ್ಕೆಗಳೊಂದಿಗೆ ಬರುತ್ತದೆ. ಬ್ಯಾಗ್ ಒಳಗೆ ವಿಶಾಲವಾದ ವಿಭಾಗವನ್ನು ಹೊಂದಿದೆ, ಸೈಟ್ ನೀರಿನ ಬಾಟಲ್ ಇಡಲು ಅವಕಾಶ ಮತ್ತು ಕಡಿಮೆ ತೂಕವನ್ನು ಹೊಂದಿದೆ.
ಲ್ಯಾಪ್‌ಟಾಪ್ ಬ್ಯಾಗ್- ಆರ್ಟಿಸ್ಟಿಕ್ ಅಟ್ಮೋಸ್ ಕಪ್ಪು ಬಣ್ಣದ ಕಾಂಫ್ಲಾಗ್ ಬ್ಯಾಗ್
ಅಮೆಜಾನ್ ಆಫರ್ ಸೇಲ್‌ನಲ್ಲಿ ಇರುವ ಆರ್ಟಿಸ್ಟಿಕ್ ಅಟ್ಮೋಸ್ ಕಪ್ಪು ಬಣ್ಣದ ಕಾಂಫ್ಲಾಗ್ ಬ್ಯಾಗ್ 15.6 ಇಂಚು ವಾಟರ್ ಫ್ರೂಫ್ ಮತ್ತು 30 ಲೀಟರ್ ಸಾಮರ್ಥ್ಯದ ಈ ಬ್ಯಾಗ್‌ನಲ್ಲಿ ವಿಶೇಷವಾಗಿ ಯುಎಸ್‌ಬಿ ಸಹ ಇದೆ. ಪುರುಷರು ಮತ್ತು ಮಹಿಳೆಯರ ಬಳಸಬಹುದಾದ ಯುನಿಸೆಕ್ಸ್ ಬ್ಯಾಗ್ ಇದಾಗಿದ್ದು 58% ರಿಯಾಯಿತಿ ಸಹ ಇದೆ. ನೀರು-ನಿರೋಧಕ ಪಾಲಿಸ್ಟರ್ ಫ್ಯಾಬ್ರಿಕ್ ನಿಂದ ಮಾಡಲ್ಪಟ್ಟಿದೆ. ಚೀಲವು ಪ್ರತ್ಯೇಕ ಲ್ಯಾಪ್‌ಟಾಪ್ ವಿಭಾಗವನ್ನು ಸಹ ಹೊಂದಿದೆ. ಬೆನ್ನುಹೊರೆಯು ಎರಡೂ ಬದಿಯಲ್ಲಿ ಸಣ್ಣ ಪಾಕೆಟ್‌ಗಳನ್ನು ಹೊಂದಿದೆ.
ಕ್ಯಾಶುಯಲ್ ಬ್ಯಾಗ್- ಅಮೇರಿಕನ್ ಟೂರಿಸ್ಟರ್ 32 ಲೀ. ಬ್ಲ್ಯಾಕ್ ಕ್ಯಾಶುಯಲ್ ಬ್ಯಾಗ್ (AMT FIZZ SCH BAG 02 - BLACK + AMT FIZZ SCH BAG 02 - GREY)
ಅಮೇರಿಕನ್ ಟೂರಿಸ್ಟರ್ ಬ್ರಾಂಡ್‌ನ ಈ ಕ್ಯಾಶುಯಲ್ ಬ್ಯಾಗ್ ನಿಮ್ಮ ಬೆಲೆಬಾಳುವ ವಸ್ತುಗಳನ್ನು ಹೊತ್ತುಕೊಂಡು ಪ್ರವಾಸ ಮಾಡಲು ಆರಾಮವಾಗಿರುತ್ತದೆ. 32 ಲೀಟರ್ ಸಾಮರ್ಥ್ಯದ ಕಪ್ಪು ಮತ್ತು ಬೂದು ಬಣ್ಣದ ಕ್ಯಾಶುಯಲ್ ಬ್ಯಾಕ್‌ಪ್ಯಾಕ್‌ಗಳ ನಿಮಗೆ ಕಾಂಬೊ ಆಫರ್‌ನಲ್ಲಿ ಲಭ್ಯವಿದೆ. 61% ರಿಯಾಯಿತಿಯೊಂದಿಗೆ ಸಿಗುತ್ತಿರುವ ಈ ಬ್ಯಾಗ್ ಹೊಂದಾಣಿಕೆ ಅಗಬಲ್ಲ ಪಟ್ಟಿ ಮತ್ತು ನೀರು-ನಿರೋಧಕ (ವಾಟರ್‌ಪ್ರೂಫ್) ಗುಣಮಟ್ಟದಾಗಿದೆ. ಪ್ರವಾಸಕ್ಕೆ ಹೋಗಲು ಬೆನ್ನಿಗೆ ಹಾಕಿಕೊಂಡು ಸುಲಭವಾಗಿ ಓಡಾಡಬಹುದು.
(Kannada Copy of Gizbot Kannada)
09-08-25 08:00 pm
HK Staff
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
09-08-25 07:38 pm
HK Staff
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
09-08-25 08:10 pm
Mangalore Correspondent
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm