ಬ್ರೇಕಿಂಗ್ ನ್ಯೂಸ್
03-07-21 02:56 pm GIZBOT Mutthuraju H M ಡಿಜಿಟಲ್ ಟೆಕ್
ಪ್ರಸ್ತುತ ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಟೆಲಿಕಾಂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ತನ್ನ ಚಂದಾದಾರರಿಗೆ ಆಕರ್ಷಕ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಈ ಪೈಕಿ ಕಡಿಮೆ ಬೆಲಯಲ್ಲಿ ಅಧಿಕ ಡೇಟಾ ಹಾಗೂ ಅನಿಯಮಿತ ಕರೆ ಪ್ರಯೋಜನ ಒಳಗೊಂಡ ಪ್ಲ್ಯಾನ್‌ಗಳು ಹೆಚ್ಚು ಗಮನ ಸೆಳೆದಿವೆ. ಇನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೆಚ್ಚಿನ ಡೇಟಾ ಪ್ಲ್ಯಾನ್‌ಗಳ ಕಡಿಗೆ ಆಸಕ್ತಿ ಹೊಂದಿದ್ದಾರೆ. ಇದೇ ಕಾರಣಕ್ಕೆ ಇದೀಗ ಜಿಯೋ ಬಳಕೆದಾರರಿಗೆ ಉಪಯುಕ್ತವಾಗುವಂತೆ 1GBಯ ತುರ್ತು ಡೇಟಾ ಲೋನ್ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ.
ಹೌದು, ಜಿಯೋ ಟೆಲಿಕಾಂ ತನ್ನ ಬಳಕೆದಾರರಿಗೆ 1GB ತುರ್ತು ಡೇಟಾ ಸಾಲ ಸೌಲಭ್ಯವನ್ನು ಪರಿಚಯಿಸಿದೆ. ಇದು ಗ್ರಾಹಕರಿಗೆ ತಮ್ಮ ದೈನಂದಿನ ಡೇಟಾ ಕೋಟಾದಿಂದ ಹೊರಗುಳಿಯುವ ಮತ್ತು ತಕ್ಷಣ ರೀಚಾರ್ಜ್ ಮಾಡಲು ಸಾಧ್ಯವಾಗದ ‘ರೀಚಾರ್ಜ್ ನೌ ಮತ್ತು ನಂತರ ಪಾವತಿಸಿ' ಕ್ರಿಯಾತ್ಮಕತೆಯ ನಮ್ಯತೆಯನ್ನು ನೀಡುತ್ತದೆ. ಆದ್ದರಿಂದ ಡೇಟಾವನ್ನು ಖಾಲಿಯಾದ ನಂತರ ಅದನ್ನು ಪಾವತಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಡೇಟಾವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಜಿಯೋ 1GBಯ ತುರ್ತು ಡೇಟಾ ಲೋನ್ ಪ್ಯಾಕ್ ಅನ್ನು ಪಡೆದುಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ಜಿಯೋ ಬಳಕೆದಾರರು ತಮ್ಮ ಡೇಟಾ ಖಾಲಿಯಾದರೆ ಯೋಚಿಸಬೇಕಾದ ಅಗತ್ಯವಿಲ್ಲ. ಇದಕ್ಕಾಗಿಯೇ ಜಿಯೋ 1GBಯ ತುರ್ತು ಡೇಟಾ ಲೋನ್ ಪ್ಯಾಕ್ ಅನ್ನು ಪರಿಚಯಿಸಿದೆ. ಡೇಟಾ ಖಾಲಿಯಾದ ಸಂದರ್ಭದಲ್ಲಿ ಬಳಕೆದಾರರು ತಕ್ಷಣ ಸಾಲದಲ್ಲಿ ರೂಪದಲ್ಲಿ ಡೇಟಾವನ್ನು ಪಡೆಯಬಹುದು ಮತ್ತು ನಂತರ ಅದಕ್ಕೆ ಸಂಬಂದಿಸಿದ ಶುಲ್ಕವನ್ನು ಪಾವತಿಸಬಹುದು. ಈ ಹೊಸ ಕೊಡುಗೆಯ ಪ್ರತಿ ಪ್ಯಾಕ್‌ಗೆ 11 ರೂ. ವೆಚ್ಚವಾಗಲಿದೆ. ಇನ್ನು ಜಿಯೋ 1GBಯ ತುರ್ತು ಡೇಟಾ ಲೋನ್ ಪ್ಯಾಕ್ ಪಡೆಯಲು ಕೆಳಗಿನ ಕ್ರಮಗಳನ್ನು ಅನುಸರಿಸಿ.
ಜಿಯೋದಿಂದ ತುರ್ತು ಡೇಟಾ ಸಾಲ ಸೌಲಭ್ಯವನ್ನು ಹೇಗೆ ಪಡೆಯುವುದು?
ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೈಜಿಯೊ ಅಪ್ಲಿಕೇಶನ್ ತೆರೆಯಿರಿ ಮತ್ತು ಪುಟದ ಮೇಲಿನ ಎಡಭಾಗದಲ್ಲಿರುವ ‘ಮೆನು' ಗೆ ಹೋಗಿ.
ಹಂತ 2: ಮೊಬೈಲ್ ಸೇವೆಗಳ ಅಡಿಯಲ್ಲಿ ‘ತುರ್ತು ಡೇಟಾ ಸಾಲ' ಆಯ್ಕೆಮಾಡಿ.
ಹಂತ 3: ತುರ್ತು ಡೇಟಾ ಸಾಲ ಬ್ಯಾನರ್‌ನಲ್ಲಿ ‘ಮುಂದುವರಿಯಿರಿ' ಕ್ಲಿಕ್ ಮಾಡಿ.
ಹಂತ 4: ‘ತುರ್ತು ಡೇಟಾ ಪಡೆಯಿರಿ' ಆಯ್ಕೆಯನ್ನು ಆರಿಸಿ.
ಹಂತ 5: ತುರ್ತು ಸಾಲದ ಲಾಭ ಪಡೆಯಲು ‘ಈಗ ಸಕ್ರಿಯಗೊಳಿಸಿ' ಕ್ಲಿಕ್ ಮಾಡಿ.
ಹಂತ 6: ತುರ್ತು ಡೇಟಾ ಸಾಲ ಪ್ರಯೋಜನವನ್ನು ಸಕ್ರಿಯಗೊಳಿಸಲಾಗಿದೆ.
(Kannada Copy of Gizbot Kannada)
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am