ಬ್ರೇಕಿಂಗ್ ನ್ಯೂಸ್
01-07-21 11:53 am GIZBOT Mutthuraju H M ಡಿಜಿಟಲ್ ಟೆಕ್
ಪ್ರಸ್ತುತ ದಿನಗಳಲ್ಲಿ ಸಾಮಾನ್ಯವಾಗಿ ಬಹುತೇಕ ಎಲ್ಲರೂ ಕೂಡ ಗೂಗಲ್ ಖಾತೆಯನ್ನು ಹೊಂದಿರುತ್ತಾರೆ. ಇದರಿಂದ ನೀವು ಯಾವುದೇ ವೆಬ್‌ಸೈಟ್‌ಗಳನ್ನು ಬ್ರೌಸ್ ಮಾಡುವುದು ಸುಲಭವಾಗಲಿದೆ. ಅಲ್ಲದೆ ಪ್ರತಿಯೊಬ್ಬರೂ ಕೂಡ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ಗೂಗಲ್ ಕಡೆಗೆ ಗಮನ ಹರಿಸುತ್ತಾರೆ. ಇನ್ನು ಗೂಗಲ್ ಖಾತೆಯಲ್ಲಿ ನಿಮ್ಮ ಆಕ್ಟಿವಿಟಿ ದಾಖಲೆಗಳು ಸೇರಿದಂತೆ ಕೆಲವು ಸೂಕ್ಷ್ಮ ಮಾಹಿತಿಗಳು ಇರುತ್ತವೇ. ಇದೇ ಕಾರಣಕ್ಕೆ ಗೂಗಲ್ ಖಾತೆಯ ಸುರಕ್ಷತೆಯಾಗಿರುವುದು ಅತಿ ಅವಶ್ಯಕವಾಗಿದೆ.
ಹೌದು, ನಿಮ್ಮ ಗೂಗಲ್ ಖಾತೆಯನ್ನು ಹ್ಯಾಕರ್‌ಗಳಿಂದ ರಕ್ಷಣೆ ಮಾಡುವುದು ಅತಿ ಅವಶ್ಯಕವಾಗಿದೆ. ಕೆಲವು ವೆಬ್‌ಸೈಟ್‌ಗಳನ್ನು ನೀವು ತೆರೆದಾಗ ನಿಮ್ಮ ಗೂಗಲ್ ಖಾತೆಯನ್ನು ನೀಡು ಸೈನ್‌ಇನ್ ಆಗಿರುತ್ತೀರಿ. ಇಂತಹ ಸಂದರ್ಭದಲ್ಲಿ ನಿಮ್ಮ ಗೂಗಲ್ ಖಾತೆ ಹ್ಯಾಕ್ ಆಗುವ ಸಾಧ್ಯತೆ ಇದೆ. ಅದರಲ್ಲೂ ಕೆಲ ದಿನಗಳ ಹಿಂದೆ ಲಿಂಕ್ಡ್‌ಇನ್, ಅಲ್ಲಿ 700 ಮಿಲಿಯನ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ. ಇಂತಹ ವರದಿಗಳು ಪ್ರತಿನಿತ್ಯವೂ ನಡೆಯುತ್ತಲೇ ಇದೆ. ಆದ್ದರಿಂದ ನೀವು ನಿಮ್ಮ ಗೂಗಲ್ ಖಾತೆಯನ್ನು ಸುರಕ್ಷಿತವಾಗಿರಿಸಲು ಕೆಲವು ಕ್ರಮಗಳನ್ನು ಅನುಸರಿಸಲೇಬೇಕು. ಹಾಗಾದ್ರೆ ಗೂಗಲ್ ಖಾತೆಯನ್ನು ಸುರಕ್ಷಿತವಾಗಿಡಲು ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ನಿಮ್ಮ ಗೂಗಲ್ ಖಾತೆಯನ್ನು ನೀವು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಿರಬಹುದು. ವಿಭಿನ್ನ ಅಪ್ಲಿಕೇಶನ್‌ಗಳು ಮತ್ತು ಸೇವೆಗಳಿಗೆ ಲಾಗ್ ಇನ್ ಮಾಡಲು ನಿಮ್ಮ ಗೂಗಲ್ ಖಾತೆಯನ್ನು ಬಳಸುವುದು ಸುಲಭ. ಇದರಿಂದ ನಿಮ್ಮ ಗೂಗಲ್ ಖಾತೆಯು ಸೂಕ್ಷ್ಮ ಮಾಹಿತಿ, ಫೋಟೋಗಳು, ವೀಡಿಯೊಗಳು ಮತ್ತು ಫೈಲ್‌ಗಳನ್ನು ಒಳಗೊಂಡಂತೆ ನಿಮ್ಮ ಪ್ರಮುಖ ಡೇಟಾವನ್ನು ಸಹ ಒಳಗೊಂಡಿದೆ. ಆದರಿಂದ ಗೂಗಲ್ ಈಗಾಗಲೇ ನಿಮ್ಮ ಖಾತೆಗೆ ಸುರಕ್ಷತೆಯನ್ನು ನೀಡುತ್ತದೆ. ಆದರೆ ಹೆಚ್ಚುವರಿ ಸುರಕ್ಷತೆಯ ಪದರವನ್ನು ಸೇರಿಸುವ ಕೆಲವು ಹೆಚ್ಚುವರಿ ಪರಿಕರಗಳನ್ನು ಬಲಸಬೇಕಾಗುತ್ತದೆ.
ಗೂಗಲ್ ಖಾತೆ: ಭದ್ರತಾ ಪರಿಶೀಲನೆ
ನಿಮ್ಮ ಗೂಗಲ್ ಖಾತೆಯನ್ನು ಸುರಕ್ಷಿತವಾಗಿರಿಸಲು, ನೀವು ನಿಯಮಿತವಾಗಿ ‘ಭದ್ರತಾ ಪರಿಶೀಲನೆ' ಉಪಕರಣದೊಂದಿಗೆ ನಿಮ್ಮ ಖಾತೆಯ ಸುರಕ್ಷತೆಯನ್ನು ಪರಿಶೀಲಿಸಬೇಕು. ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಿಂದ ಇದನ್ನು ಮಾಡಬಹುದು. ಇದು ನಿಮ್ಮ ಗೂಗಲ್ ಖಾತೆಯನ್ನು ಬಲಪಡಿಸಲು ಸಹಾಯ ಮಾಡುವ ವೈಯಕ್ತಿಕ ಮತ್ತು ಕ್ರಿಯಾತ್ಮಕ ಶಿಫಾರಸುಗಳನ್ನು ನೀಡುವ ಹಂತ-ಹಂತದ ಮಾರ್ಗದರ್ಶಿಯಾಗಿದೆ.
ಗೂಗಲ್ ಖಾತೆ: ಪಾಸ್‌ವರ್ಡ್ ರಕ್ಷಣೆ
ನಿಮ್ಮ ಗೂಗಲ್ ಖಾತೆಗೆ ಸ್ಟ್ರಾಂಗ್ ಪಾಸ್‌ವರ್ಡ್ ಆಯ್ಕೆ ಮಾಡುವುದು ಮುಖ್ಯವಾಗಿದೆ. ನೀವು ಸ್ಟ್ರಾಂಗ್ ಪಾಸ್‌ವರ್ಡ್ ಅನ್ನು ನೀವೇ ಆಯ್ಕೆ ಮಾಡಬಹುದು ಅಥವಾ ಗೂಗಲ್ ಸೂಚಿಸಿದದನ್ನು ಸಹ ಬಳಸಬಹುದು. ನಿಮ್ಮ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಪ್ರವೇಶಿಸಲು ನಿಮ್ಮ ಗೂಗಲ್ ಖಾತೆಯಲ್ಲಿ ಕೂಡ ಸೇವ್ ಮಾಡಬಹುದು. ನೀವು ಸೇವ್ ಮಾಡಿದ ಪಾಸ್‌ವರ್ಡ್‌ಗಳ ಸುರಕ್ಷತೆಯನ್ನು ಪರಿಶೀಲಿಸಲು ಬಯಸಿದರೆ, ಇನ್ಸಟಂಟ್ ಪಾಸ್‌ವರ್ಡ್ ಚೆಕಪ್ ತೆಗೆದುಕೊಳ್ಳಬಹುದು. ನಿಮ್ಮ ಯಾವುದೇ ಪಾಸ್‌ವರ್ಡ್‌ಗಳು ಹೊಂದಾಣಿಕೆ ಮಾಡಿಕೊಂಡಿದ್ದರೆ ಗೂಗಲ್ ಸಹ ನಿಮಗೆ ಎಚ್ಚರಿಕೆ ನೀಡುತ್ತದೆ.
ಗೂಗಲ್ ಖಾತೆ: 2-ಹಂತದ ಪರಿಶೀಲನೆ
ನಿಮ್ಮ ಗೂಗಲ್ ಖಾತೆಯನ್ನು ಪಾಸ್‌ವರ್ಡ್‌ನೊಂದಿಗೆ ಪ್ರೊಟೆಕ್ಟ್ ಮಾಡಿದ್ದರೂ ಕೂಡ ಹೆಚ್ಚು ಸುರಕ್ಷಿತ ಲಾಗಿನ್‌ಗಾಗಿ, ನಿಮ್ಮ ಗೂಗಲ್ ಖಾತೆಗೆ ನೀವು 2-ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸಬೇಕು. ಒಮ್ಮೆ ನೀವು ಇದನ್ನು ಮಾಡಿದ ನಂತರ ನೀವು ಹೊಸ ಸಾಧನಕ್ಕೆ ಸೈನ್ ಇನ್ ಮಾಡಲು ಪ್ರಯತ್ನಿಸುತ್ತಿರುವಾಗ ಗೂಗಲ್ ಯಾವಾಗಲೂ ನಿಮ್ಮನ್ನು ಎಚ್ಚರಿಸುತ್ತದೆ. ಲಾಗಿನ್ ಅನ್ನು ಅನುಮತಿಸಲು ಇದು ನಿಮ್ಮನ್ನು ಅನುಮತಿ ಕೇಳುತ್ತದೆ. ಉದ್ದೇಶಿತ ಆನ್‌ಲೈನ್ ದಾಳಿಯ ಅಪಾಯದಲ್ಲಿರುವ ಖಾತೆಗಳಿಗಾಗಿ ಗೂಗಲ್ ಸುಧಾರಿತ ರಕ್ಷಣೆ ಕಾರ್ಯಕ್ರಮವನ್ನು ಸಹ ನೀಡುತ್ತದೆ.
ಗೂಗಲ್ ಖಾತೆ: ಕಳೆದುಹೋದ ಫೋನ್ ಸುರಕ್ಷತೆಗಳು
ನಿಮ್ಮ ಫೋನ್ ಕಳೆದುಕೊಂಡರೆ ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು ನಿಮ್ಮ ಗೂಗಲ್ ಖಾತೆಯನ್ನು ಬಳಸಬಹುದು. ನಿಮ್ಮ ಫೋನ್ ಅನ್ನು ದೂರದಿಂದಲೇ ಪತ್ತೆ ಮಾಡಲು ಮತ್ತು ಲಾಕ್ ಮಾಡಲು ನಿಮಗೆ ಅನುಮತಿಸುವ ‘ಫೈಂಡ್ ಯುವರ್ ಫೋನ್ ' ಆಯ್ಕೆಯ ಮೂಲಕ ಇದು ಸಾಧ್ಯವಾಗಲಿದೆ. ನಿಮ್ಮ ಕಳೆದುಹೋದ ಫೋನ್ ಇನ್ನೂ ಆನ್ ಆಗಿದ್ದರೆ ಮತ್ತು ಇಂಟರ್ನೆಟ್ ಸಂಪರ್ಕವು ಸಕ್ರಿಯವಾಗಿದ್ದರೆ ನೀವು ಡಿವೈಸ್ ಇರುವ ಸ್ಥಳವನ್ನು ಸಹ ಪತ್ತೆ ಹಚ್ಚಬಹುದು
ಗೂಗಲ್ ಖಾತೆ: ಸೆಕ್ಯುರ್ ಕನೆಕ್ಷನ್
ನಿಮ್ಮ ಗೂಗಲ್ ಖಾತೆಯನ್ನು ಸುರಕ್ಷಿತವಾಗಿಡಲು ಸುರಕ್ಷಿತ ಸಂಪರ್ಕವನ್ನು ಬಳಸುವುದು ಮುಖ್ಯವಾಗಿದೆ. ಪಾಸ್‌ವರ್ಡ್ ಅಗತ್ಯವಿದ್ದರೂ ಸಾರ್ವಜನಿಕ ನೆಟ್‌ವರ್ಕ್‌ಗಳನ್ನು ಬಳಸದಂತೆ ಗೂಗಲ್ ಎಚ್ಚರಿಸಿದೆ. ನೀವು ಯಾವುದೇ ಒಂದು ಬಳಸಬೇಕಾದರೆ ಸೈಟ್‌ಗೆ ನಿಮ್ಮ ಸಂಪರ್ಕವು ಸುರಕ್ಷಿತವಾಗಿದ್ದರೆ ಸರ್ಚ್ ಬಾರ್‌ನಲ್ಲಿ ಗೂಗಲ್ ನಿಮಗೆ ಎಚ್ಚರಿಕೆ ನೀಡುತ್ತದೆ.
(Kannada Copy of Gizbot Kannada)
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am