ಬ್ರೇಕಿಂಗ್ ನ್ಯೂಸ್
25-06-21 07:50 pm Manjunatha Nayak, DriveSpark Kannada ಡಿಜಿಟಲ್ ಟೆಕ್
ಕೆಎಲ್ ಡೀಮ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿರುವ ವಿಶಿಷ್ಟವಾದ ಎಲೆಕ್ಟ್ರಿಕ್ ಬೈಕ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮೂರನೇ ಹಾಗೂ ನಾಲ್ಕನೇ ವರ್ಷದ ವಿದ್ಯಾರ್ಥಿಗಳ ತಂಡವು ಕೆಎಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಯುನಿವರ್ಸಿಟಿಯ ಕೆಲವು ಹಳೆಯ ವಿದ್ಯಾರ್ಥಿಗಳೊಂದಿಗೆ ಸೇರಿ ಈ ಎಲೆಕ್ಟ್ರಿಕ್ ಬೈಕಿನ ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದೆ.
ಈ ತಂಡವು ಅಭಿವೃದ್ಧಿಪಡಿಸಿರುವ ಈ ಎಲೆಕ್ಟ್ರಿಕ್ ಬೈಕ್ ಗಂಟೆಗೆ ಗರಿಷ್ಠ 55 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಬೈಕ್ 85 - 100 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಬೈಕಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 5 ಗಂಟೆ ಬೇಕಾಗುತ್ತದೆ. ಚಾರ್ಜಿಂಗ್ ತಂತ್ರಜ್ಞಾನವು ಪ್ರೊಗ್ರಾಮೆಬಲ್ ಸೆಲ್ ಬ್ಯಾಲೆನ್ಸಿಂಗ್ ವೈಶಿಷ್ಟ್ಯದೊಂದಿಗೆ ಸೇರಿ, ದೀರ್ಘಕಾಲೀನ ಚಾರ್ಜ್'ಗಳಿಗೆ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಈ ಎಲೆಕ್ಟ್ರಿಕ್ ಬೈಕಿನಲ್ಲಿ ಸೆಲ್ ಬ್ಯಾಲೆನ್ಸಿಂಗ್ ಹಾಗೂ ವೈರ್‌ಲೆಸ್ ಚಾರ್ಜಿಂಗ್‌ನಂತಹ ಆಧುನಿಕ ಫೀಚರ್'ಗಳನ್ನು ಅಳವಡಿಸಲಾಗಿದೆ. ಇಂತಹ ಫೀಚರ್'ಗಳನ್ನು ಇತ್ತೀಚಿನ ದಿನಗಳಲ್ಲಿ ದುಬಾರಿ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲಾಗುತ್ತದೆ.
ಈ ತಂಡವು ವಿಶ್ವವಿದ್ಯಾಲಯದಲ್ಲಿರುವ ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದೆ. ಈ ತಂಡವು ಅಸ್ತಿತ್ವದಲ್ಲಿರುವ ಬೈಕಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಅದನ್ನು ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಇ-ಬೈಕಿನ ಮೂಲಮಾದರಿಯಂತೆ ಅಭಿವೃದ್ಧಿಪಡಿಸಿದೆ.
ಬೈಕ್ ಅಭಿವೃದ್ಧಿಪಡಿಸಿರುವ ವಿದ್ಯಾರ್ಥಿಗಳ ತಂಡವು ಬೈಕಿನ ವಿನ್ಯಾಸದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ, ಅದರಲ್ಲಿ ಬಿಎಲ್‌ಡಿಸಿ ಮೋಟರ್ (ಬ್ರಷ್‌ಲೆಸ್ ಡಿಸಿ ಎಲೆಕ್ಟ್ರಿಕ್ ಮೋಟರ್) ಅನ್ನು ಗೇರ್ ಮಾಡ್ಯೂಲ್‌ಗೆ ಕಂಟ್ರೋಲರ್ ಮೂಲಕ ನೀಡಿದೆ.
ಈ ಯೋಜನೆಯ ಕಲ್ಪನೆಯನ್ನು ಅಭಿವೃದ್ಧಿಪಡಿಸಲು ವಿಶ್ವವಿದ್ಯಾಲಯವು ಈ ತಂಡಕ್ಕೆ ರೂ.1.40 ಲಕ್ಷ ಧನ ಸಹಾಯ ಮಾಡಿದೆ. ಈ ಬಗ್ಗೆ ಮಾತನಾಡಿರುವ ಕೆಎಲ್ ಡೀಮ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷ ಕೊನೆರು ಸತ್ಯನಾರಾಯಣ, ಈ ವಿದ್ಯಾರ್ಥಿಗಳ ಉತ್ಸಾಹ ಹಾಗೂ ಕಠಿಣ ಪರಿಶ್ರಮವನ್ನು ಇಡೀ ವಿಶ್ವವಿದ್ಯಾಲಯವು ಮೆಚ್ಚುತ್ತಿದೆ. ವಿದ್ಯಾರ್ಥಿಗಳ ಹಾಗೂ ದೇಶದ ದೀರ್ಘಕಾಲೀನ ಪ್ರಯೋಜನಗಳಿಗಾಗಿ ನಾವು ಸಂಶೋಧನೆ ಹಾಗೂ ನಾವೀನ್ಯತೆಗಳತ್ತ ಗಮನ ಹರಿಸುತ್ತಿದ್ದೇವೆ ಎಂದು ಹೇಳಿದರು.
ಬೈಕ್ ತಯಾರಿ ಯೋಜನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಮೊದಲ ವರ್ಷದಿಂದಲೇ ಮೂಲ ಮಾದರಿ ತಯಾರಿಕೆಯಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತಿ ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಕೆಎಲ್ ವಿಶ್ವವಿದ್ಯಾಲಯದ ಲ್ಯಾಬ್, ಯಂತ್ರಗಳು ಹಾಗೂ ಎಲೆಕ್ಟ್ರಾನಿಕ್ಸ್‌ನೊಂದಿಗೆ ಕೆಲಸ ಮಾಡಲು ಬಲವಾದ ಅಡಿಪಾಯವನ್ನು ಒದಗಿಸಿದೆ.
Soure: DriveSpark
The students of KL Deemed University, Hyderabad have developed a unique electric bike with wireless charging technology. The innovative prototype was developed by a team of six like-minded 3rd and 4th year students from the Electrical and Electronics Engineering Department of KL College of Engineering along with a few university alumni members.
16-03-26 05:52 pm
HK News Staffer
ಐಎಎಸ್ ಅಧಿಕಾರಿಯೆಂದು ಪೋಸು ಕೊಟ್ಟು ಜನಸಾಮಾನ್ಯರಿಗೆ,...
16-03-26 03:36 pm
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
16-03-26 09:30 pm
HK News Staffer
ಇರಾನ್ ದಾಳಿ ಬಗ್ಗೆ ಎಐ ವಿಡಿಯೋ ಆಧರಿತ ಸುಳ್ಳು ಸುದ್ದ...
16-03-26 02:44 pm
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾಕ್ಕೆ ;...
15-03-26 05:37 pm
16-03-26 09:48 pm
Mangaluru Staffer
Moodbidri Inspector Sandesh, Police: ಮೂಡುಬಿದ್...
16-03-26 07:20 pm
Gas Tanker Accident: ಕಟಪಾಡಿ ಹೆದ್ದಾರಿಯಲ್ಲಿ ಗ್ಯ...
16-03-26 02:46 pm
Besant Evening College, Blood Donation: ಬೆಸೆಂ...
15-03-26 09:10 pm
Udupi Accident: ತಾಯಿ-ಮಗ ತೆರಳುತ್ತಿದ್ದ ಸ್ಕೂಟರ್...
14-03-26 09:26 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am