ಬ್ರೇಕಿಂಗ್ ನ್ಯೂಸ್
18-06-21 10:33 am GIZBOT Mantesh ಡಿಜಿಟಲ್ ಟೆಕ್
ಟೆಕ್ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಮೈಕ್ರೊಸಾಫ್ಟ್ ಕಾರ್ಪ್ (Microsoft) ಸಂಸ್ಥೆಯು ಬುಧವಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ ಅವರನ್ನು ಜಾನ್ ಥಾಂಪ್ಸನ್ ಬದಲಿಗೆ ತನ್ನ ಹೊಸ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದೆ.
ಸ್ಟೀವ್ ಬಾಲ್ಮರ್ ಅವರಿಂದ 2014 ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಸತ್ಯ ನಾಡೆಲ್ಲಾ (Satya Nadella), ಸಂಸ್ಥೆಯ ಲಿಂಕ್ಡ್ ಇನ್, ನ್ಯೂನ್ಸ್ ಕಮ್ಯುನಿಕೇಷನ್ಸ್ ಮತ್ತು ಜೆನಿಮ್ಯಾಕ್ಸ್ ನಂತಹ ಬಿಲಿಯನ್ ಡಾಲರ್ ಸ್ವಾಧೀನಗಳು ಸೇರಿದಂತೆ ತನ್ನ ವ್ಯವಹಾರವನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. 2014 ರಲ್ಲಿ ಸಾಫ್ಟ್ ವೇರ್ ದೈತ್ಯನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಅವರಿಂದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಥಾಂಪ್ಸನ್ ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಕಂಪನಿ ಹೇಳಿದೆ.

53 ವರ್ಷದ ನಾಡೆಲ್ಲಾ ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ, ಮಂಡಳಿಯ ಕಾರ್ಯಸೂಚಿಗಳಲ್ಲಿ ಸ್ವತಂತ್ರ ನಿರ್ದೇಶಕರ ಪರವಾಗಿ ಮಾಹಿತಿ ಒದಗಿಸುವುದು, ಸ್ವತಂತ್ರ ನಿರ್ದೇಶಕರ ಸಭೆಗಳನ್ನು ಕರೆಯುವುದು, ಕಾರ್ಯನಿರ್ವಾಹಕ ಅಧಿವೇಶನಗಳಿಗೆ ಕಾರ್ಯಸೂಚಿಗಳನ್ನು ನಿಗದಿಪಡಿಸುವುದು ಮತ್ತು ಪ್ರಮುಖ ಕಾರ್ಯಕ್ಷಮತೆಯ ಮೌಲ್ಯಮಾಪನಗಳು ಸೇರಿದಂತೆ ಮಹತ್ವದ ಅಧಿಕಾರವನ್ನು ಉಳಿಸಿಕೊಳ್ಳುತ್ತಾರೆ ಎಂದು ಮೈಕ್ರೋಸಾಫ್ಟ್ ಹೇಳಿದ್ದಾರೆ.

ಮಣಿಪಾಲ್ ಯುನಿವರ್ಸಿಟಿಯಲ್ಲಿ ಶಿಕ್ಷಣ ಸತ್ಯ ನಾದೆಲ್ಲಾರವರು ಹೈದರಾಬಾದ್ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ಅಧ್ಯಯನಕ್ಕಾಗಿ ಮಣಿಪಾಲ್ ಯುನಿವರ್ಸಿಟಿಗೆ ತೆರಳಿದರು. 1988ರಲ್ಲಿ ಪದವೀಧರರಾದ ನಂತರ, ಮಿಲ್ವಾಕಿಯ ಯುನಿವರ್ಸಿಟಿ ಆಫ್ ವಿಸ್ಕನ್ಸಿನ್ ಅಲ್ಲಿ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದರು. ಚಿಕಾಗೋ ಯುನಿವರ್ಸಿಟಿಯ 'ಬೂತ್ ಸ್ಕೂಲ್ ಅಫ್ ಬ್ಯುಸಿನೆಸ್' ಇಂದ ಎಂಬಿಎ ಪದವಿಯನ್ನು ಸಹ ಪಡೆದಿದ್ದಾರೆ. ಸತ್ಯ ನಾರಾಯಣ ನಾಡೆಲ್ಲ ಭಾರತೀಯ ಅಮೆರಿಕನ್. ಮೂಲತಃ ಆಂಧ್ರಪ್ರದೇಶದ ಹೈದರಾಬಾದ್ನವರು. ಪತ್ನಿ ಅನುಪಮಾ ನಾಡೆಲ್ಲಾ. ಝೈನ್, ದಿವ್ಯಾ ಹಾಗೂ ತಾರಾ ಎಂಬ ಮೂರು ಮಕ್ಕಳಿದ್ದಾರೆ. 1992ರಲ್ಲಿ ಮೈಕ್ರೋಸಾಫ್ಟ್ ಗೆ ಸೇರ್ಪಡೆ ನಾದೆಲ್ಲಾರವರು 1992ರಲ್ಲಿ ಮೈಕ್ರೋಸಾಫ್ಟ್ ಸೇರುವ ಮುನ್ನ 'ಸನ್ ಮೈಕ್ರೋಸಿಸ್ಟಮ್ಸ್' (ಈಗ ಒರಾಕಲ್ ಕಾರ್ಪೋರೇಷನ್ ಒಡೆತನದಲ್ಲಿದೆ) ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು.
(Kannada Copy of Gizbot Kannada)
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm